ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಂಕಷ್ಟದಲ್ಲೂ ನಿರಂತರ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಕೇಂದ್ರ, ರಾಜ್ಯ ಸರ್ಕಾರಗಳ ಸಹಕಾರಕ್ಕೆ ಶ್ಲಾಘನೆ
Last Updated 28 ಮೇ 2020, 11:34 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಜಿಲ್ಲೆಯ ಅಭಿವೃದ್ಧಿ ನಿರಂತರವಾಗಿ ಸಾಗಿದೆ. ಪ್ರಮುಖ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ.ನಿಗದಿತ ಸಮಯದಲ್ಲೇಪೂರ್ಣಗೊಳ್ಳಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ, ರಾಜ್ಯಸರ್ಕಾರಗಳು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿವೆ.ಎಲ್ಲರ ಸಹಕಾರ ಪಡೆದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಒಂದು ವರ್ಷದಲ್ಲಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಕೊಂಕಣ ರೈಲ್ವೆಗೆ ಸಿದ್ದಾಪುರ ಮೂಲಕ, ಶೃಂಗೇರಿ ಮೂಲಕ ಸಂಪರ್ಕಿಸುವ ಮಾರ್ಗಗಳ ಸರ್ವೆ ನಡೆಸಲಾಗಿದೆ. ರಾಣೇಬೆನ್ನೂರು ಯೋಜನೆ, ತುಮಕೂರುವರೆಗೆ ದ್ವಿಪಥ ಮಾರ್ಗ, ರೈಲುನಿಲ್ದಾಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.ಶಿವಮೊಗ್ಗದಿಂದ ಚೆನ್ನೈ, ತಿರುಪತಿಗೆ ನೇರ ರೈಲು ಸಂಪರ್ಕ ಕಲ್ಪಿಸಲಾಗಿದೆ. ಬೆಂಗಳೂರಿಗೆ ಜನ ಶತಾಬ್ದಿ, ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಕೇಂದ್ರ, ರೈಲ್ವೆ ಮೇಲು ಸೇತುವೆಗಳು, ವರ್ತುಲ ರಸ್ತೆಗಳ ನಿರ್ಮಾಣಕ್ಕೆಆದ್ಯತೆನೀಡಲಾಗಿದೆ. ತುಮಕೂರು–ಶಿವಮೊಗ್ಗ ರಸ್ತೆ ಮಾರ್ಗದ ಅಭಿವೃದ್ಧಿ, ಚಿತ್ರದುರ್ಗ–ಶಿವಮೊಗ್ಗ ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಿಂಹಧಾಮ ಅಭಿವೃದ್ಧಿ, ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.ಮೊಬೈಲ್ ಸಂಪರ್ಕ ಸೇವೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.ಪ್ರತಿ ಗ್ರಾಮಗಳಿಗೂಕುಡಿಯುವ ನೀರು ಪೂರೈಸಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಮಲೆನಾಡಿನಲ್ಲಿ ಬೆಳೆ ನಾಶ ಮಾಡುತ್ತಿದ್ದ ಮಂಗಗಳ ನಿಯಂತ್ರಣಕ್ಕೆ ಪಾರ್ಕ್ ಸ್ಥಾಪನೆಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆಗೆ, ರೈತರಿಗೆಸಾಕಷ್ಟು ನೆರವು ನೀಡಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಹೈನುಗಾರಿಕೆಗೆ ಅಭಿವೃದ್ಧಿಗೊಳಿಸಲಾಗಿದೆ. ಪಡಿತರ ವ್ಯವಸ್ಥೆಯ ಸುಧಾರಿಸಲಾಗಿದೆ.ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಸೇರಿದಂತೆ ಎಲ್ಲ ರಂಗಗಳಲ್ಲೂ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ವಿವರ ನೀಡಿದರು.

ವಿಮಾನ ನಿಲ್ಧಾಣ ಕಾಮಗಾರಿಗೆ ಮತ್ತಷ್ಟು ವೇಗ ನೀಡಲಾಗಿದೆ. ₹220 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಸಕ್ರೆಬೈಲು ಬಳಿ ಜೈವಿಕ ಉದ್ಯಾನ, ಸಿಗಂದೂರು ಸೇತುವೆ ನಿರ್ಮಾಣಕ್ಕೆ ಶ್ರಮಿಸಲಾಗಿದೆ.ಶರಾವತಿ ಹಿನ್ನೀರಿನ ಸಿಗಂಧೂರು ಬಳಿ ₹423 ಕೋಟಿ ವೆಚ್ಚದಲ್ಲಿ ಸೇತುವೆ ಕಾರ್ಯ ಭರದಿಂದ ಸಾಗಿದೆ. ಸೇತುವೆಲೋಕಾರ್ಪಣೆಯಾದರೆ ಸುಮಾರು 80 ಕಿ.ಮೀ.ಸುತ್ತಾಟ ತಪ್ಪುತ್ತದೆ ಎಂದರು.

ಕೇಂದ್ರದ ಹಲವು ಕೆಲಸಗಳು ಶ್ಲಾಘನೀಯ. ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ರದ್ದು ಮಾಡಿದ ನಿರ್ಧಾರ. ಭಯೋತ್ಪಾದಕರ ವಿರುದ್ಧ ತೆಗೆದುಕೊಮಡ ಕಠಿಣ ಕ್ರಮಗಳು. ರೈತರಿಗೆ, ಜನ‌ಸಾಮಾನ್ಯರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ, ಸಣ್ಣ ಉದ್ದಿಮೆಗಳಿಗೆ ₹ 20 ಲಕ್ಷ ಕೋಟಿ ನೆರವು ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿವೆ ಎಂದು ಪ್ರಶಂಸಿಸಿದರು.

ಸಂವಾದದಲ್ಲಿ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಹಿರಿಯ ಪತ್ರಕರ್ತ ನಾಗರಾಜ ನೇರಿಗೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT