ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಸನಗಳಿಗೆ ಬಲಿಯಾಗಬೇಡಿ, ಓದಿನತ್ತ ಗಮನಹರಿಸಿ: ನ್ಯಾಯಾಧೀಶ ಕಿವಿಮಾತು

Last Updated 28 ಜೂನ್ 2022, 3:56 IST
ಅಕ್ಷರ ಗಾತ್ರ

ಶಿವಮೊಗ್ಗ: ವಿದ್ಯಾರ್ಥಿಗಳು ಗೊತ್ತಿಲ್ಲದ ಹಾಗೆ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂಭವವಿರುತ್ತದೆ. ಈ ಬಗ್ಗೆ ತಿಳಿವಳಿಕೆ ಹೊಂದಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್ ಸಲಹೆ ನೀಡಿದರು.

ನಗರದ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಮಾನಸ ಟ್ರಸ್ಟ್, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ಐಕ್ಯೂಎಸಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ಸುರಭಿ ಮಹಿಳಾ ಮಂಡಳಿ, ವ್ಯಸನಮುಕ್ತಿ ಹಾಗೂ ಪುನರ್ ವಸತಿ ಕೇಂದ್ರ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಮಾದಕ ವಸ್ತುಗಳ ಸೇವನೆಯ ಎರಡು ತಿಂಗಳ ಬಳಿಕವೂ ಪತ್ತೆ ಹಚ್ಚುವ ಸಾಧನಗಳಿವೆ. ಹಾಗಾಗಿ ಮದ್ಯಪಾನ, ಗಾಂಜಾ, ಡ್ರಗ್ಸ್ ಯಾವುದೇ ಮಾದಕವಸ್ತುಗಳಿರಲಿ ಸೇವಿಸಿದರೆ ಅದು ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ. ಜಿಲ್ಲೆಯೊಂದರಲ್ಲೇ ಇತ್ತೀಚೆಗೆ 193 ಕೆ.ಜಿ ಮಾದಕ ವಸ್ತುಗಳ ನಾಶಪಡಿಸಲಾಯಿತು ಎಂದರು.

ಎಎಸ್‍ಪಿ ವಿಕ್ರಂ ಹಂಪೆ, ಪ್ರಾಚಾರ್ಯರಾದ ಡಾ.ಸಂಧ್ಯಾ ಕಾವೇರಿ, ಪ್ರೊ.ರಾಜೇಂದ್ರ ಚೆನ್ನಿ, ಸುರಭಿ ಮಹಿಳಾ ಮಂಡಳಿಯ ನಿರ್ದೇಶಕ ರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT