ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಪುರಲೆಯಲ್ಲಿ ನೀರಿನ ಸಮಸ್ಯೆ: ಪ್ರತಿಭಟನೆ

Last Updated 7 ಏಪ್ರಿಲ್ 2023, 4:35 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಇಲ್ಲಿನ ಪುರಲೆ ಬಡಾವಣೆಯಲ್ಲಿ ಕುಡಿಯುವ ನೀರು ಹಾಗೂ ಬೀದಿ ದೀಪದ ಸಮಸ್ಯೆ ನಿವಾರಿಸಿ ಎಂದು ಅನೇಕ ಬಾರಿ ಮಹಾನಗರ ಪಾಲಿಕೆ ಮೇಯರ್ ಎಸ್. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇವೆ. ಆದರೆ ಅವರು ಸಮಸ್ಯೆ ಕುರಿತು ಗಮನಹರಿಸಿಲ್ಲ’ ಎಂದು ಆರೋಪಿಸಿ ಪುರಲೆ ಬಡಾವಣೆಯ ಸದಸ್ಯರು ಕೊಡಪಾನ ಹಿಡಿದು ಗುರುವಾರ ಪ್ರತಿಭಟನೆ ನಡೆಸಿದರು.

ಮೂರು ತಿಂಗಳುಗಳಿಂದ ಪುರಲೆ ಬಡಾವಣೆ, ಹಳೆ ಗುರುಪುರ, ಇಂದಿರಾ ಬಡಾವಣೆ, ವೆಂಕಟೇಶ್ ನಗರದಲ್ಲಿ ನೀರಿನ ಸಮಸ್ಯೆ ಇದೆ. ಕುಡಿಯಲು ಯೋಗ್ಯ ನೀರಿನ ವ್ಯವಸ್ಥೆ ಇಲ್ಲ. ಮಹಿಳೆಯರು ಪ್ರತಿ ದಿನ ದೂರದ ಬಡಾವಣೆಯಿಂದ ನೀರು ಹೊತ್ತು ತಂದು ದಿನ ಬಳಕೆಗೆ ಬಳಸುತ್ತಿದ್ದಾರೆ. ದಿನ ಪೂರ್ತಿ ನೀರು ಹೊತ್ತು ತರುವುದೇ ಆಗುತ್ತಿದೆ. ಅದರಿಂದ ಬೇರೆ ಕೆಲಸಕ್ಕೆ ಅಡ್ಡಿ ಆಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ನೀರಿನ ವ್ಯವಸ್ಥೆ ಕಲ್ಪಿಸಲು ಹೊಸದಾಗಿ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಪೈಪ್‌ಲೈನ್ ಹಾಳಾಗಿದೆ. ಆದ್ದರಿಂದ ನೀರು ಪೋಲಾಗುತ್ತಿದೆ. ಸಂಬಂಧ ಪಟ್ಟ ಎಇಇ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಮೇಯರ್ ಎಸ್. ಶಿವಕುಮಾರ್ ಅವರು ಇದೇ ಪುರಲೆ ಬಡಾವಣೆಯಲ್ಲಿ ಜನಿಸಿದವರು. ಪ್ರಸ್ತುತ ಬಡಾವಣೆಗೆ ಮೂಲ ಸೌಕರ್ಯಗಳ ಬಗ್ಗೆ ಕೇಳಿದರೆ, ತಾತ್ಸಾರದ ನಿಲುವು ತಾಳಿದ್ದಾರೆ’ ಎಂದು ಆರೋಪಿಸಿದರು.

‘ಅಧಿಕಾರ ದೊರೆತ ದಿನ ಕಾರಿನಲ್ಲಿ ಪುರಲೆ ಬಡಾವಣೆಗೆ ಬಂದ ಮೇಯರ್ ಎಸ್. ಶಿವಕುಮಾರ್ ಅವರು ಇದುವರೆಗೂ ಬಡಾವಣೆಗೆ ಭೇಟಿ ನೀಡಿಲ್ಲ. ಶೀಘ್ರ ಸಮಸ್ಯೆ ಕುರಿತು ಗಮನಹರಿಸದೇ ಇದ್ದಲ್ಲಿ ಮಹಿಳೆಯರು ಮಕ್ಕಳೆಲ್ಲ ಸೇರಿ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಂಜು ಪುರಲೆ, ಕರಿಬಸಪ್ಪ, ಶಿವಕುಮಾರ್, ಪ್ರವೀಣ್, ಪುರಲೆ ಬಡಾವಣೆಯವರು ಇದ್ದರು.

...............

ವೈಯಕ್ತಿಕ ಹಿತಾಸಕ್ತಿಯಿಂದ ಕೆಲವರು ದೂರುತ್ತಿದ್ದಾರೆ. ಆ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲ. ನನ್ನ ಮನೆಯೂ ಅದೇ ಪುರಲೆ ಬಡಾವಣೆಯಲ್ಲಿದೆ. ಇದುವರೆಗೂ ನೀರಿನ ಸಮಸ್ಯೆ ಎದುರಾಗಿಲ್ಲ. ಸಮಸ್ಯೆ ಇದ್ದರೆ ಬಗೆಹರಿಸುತ್ತೇನೆ.

-ಎಸ್. ಶಿವಕುಮಾರ್‌, ಮೇಯರ್

...............

ಬಡಾವಣೆಯಲ್ಲಿ ನೀರಿನ ಸಮಸ್ಯೆ ಇಲ್ಲ. ಸಮಸ್ಯೆ ಕುರಿತು ಕರೆ ಕೂಡ ಯಾರೂ ಮಾಡಿಲ್ಲ. ಗುರುವಾರ ಬೆಳಿಗ್ಗೆ ವಾಟರ್ ಲೈನ್‌ಮನ್‌ ಸ್ಥಳಕ್ಕೆ ಹೋಗಿ ಪರೀಶೀಲನೆ ನಡೆಸಿ ಮಾಹಿತಿ ನೀಡಿದ್ದಾರೆ. ಯಾವುದೇ ಕುಂದು ಕೊರತೆ ಕಂಡು ಬಂದಿಲ್ಲ.

-ಸಿದ್ಧಣ್ಣ, ಎಇಇ, ವಾಟರ್ ಬೋರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT