ಶನಿವಾರ, ಜೂನ್ 25, 2022
21 °C

ಕಾಡಾನೆ ಸೆರೆಗೆ ಸಕ್ರೆಬೈಲು ಗಜಪಡೆ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಉಂಬ್ಳೆಬೈಲು ಸುತ್ತಮುತ್ತಲಿನ ಕೃಷಿ ಭೂಮಿಗೆ ನುಗ್ಗಿ ರೈತರ ಫಸಲು ನಾಶ ಮಾಡುತ್ತಿದ್ದ ಕಾಡಾನೆ ಸೆರೆಗೆ ಸಕ್ರೆಬೈಲಿನ ಆನೆಗಳು ಬುಧವಾರ ಕಾರ್ಯಚರಣೆ ನಡೆಸಿದವು.

ಕಾಡಾನೆಗಳು ಉಂಬ್ಳೆಬೈಲು ಸುತ್ತಮುತ್ತ ಕಾಡಂಚಿನ ಕೃಷಿ ಭೂಮಿಗೆ ಬಂದು ಬೆಳೆ ನಾಶ ಮಾಡುತ್ತಿವೆ. ಆನೆಗಳನ್ನು ಹಿಡಿಯಬೇಕು ಎಂದು ಆ ಭಾಗದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳು ಬೆಳಿಗ್ಗೆಯಿಂದಲೇ ಕಾರ್ಯಚರಣೆ ನಡೆಸಿದದವು.

ಆನೆಗಳಾದ ಸಾಗರ, ನಾಗಣ್ಣ, ಬಾಲಣ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಕಡೇಕಲ್ಲು ಭಾಗದಿಂದ ಕಾಡಾನೆಗಳ ಹುಡುಕಾಟ ಆರಂಭಿಸಲಾಗಿದೆ. ಕಡೇಕಲ್ಲು ಗ್ರಾಮದ ಹೊರ ಭಾಗದ ಅರಣ್ಯದಲ್ಲಿ ಕ್ಯಾಂಪ್‌ ಹಾಕಲಾಗಿದೆ. ಸದ್ಯ ಆನೆಯನ್ನು ಈ ಭಾಗದಿಂದ ಹಿಮ್ಮೆಟ್ಟಿಸಲು ಆದ್ಯತೆ ನೀಡಲಾಗುವುದು. ಸಾಧ್ಯವಾಗದಿದ್ದರೆ ಸೆರೆ ಹಿಡಿಯಲಾಗುವುದು ಎಂದು ಬಿಡಾರದ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಆನೆಯ ಕಾವಾಡಿ, ಮಾವುತರು ಹಾಗೂ‌ ಸಹಾಯಕರು ಕಾರ್ಯಾಚರಣೆಯಲ್ಲಿದ್ದಾರೆ. ಸಕ್ರೆಬೈಲು ಆನೆ ಬಿಡಾರದ ಡಾ.ವಿನಯ್ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು