ಹೊಳೆಹೊನ್ನೂರು: ಶಿವಾಜಿಯ ಪುತ್ಥಳಿಗಳು ವಿದೇಶದಲ್ಲೂ ಸ್ಥಾಪನೆಯಾಗಿವೆ. ಮಹಾಪುರುಷರು ಮಾತ್ರ ಸಾಧನೆಯಿಂದ ಜಗತ್ತಿನಾದ್ಯಂತ ಗುರುತಿಸಿಕೊಳ್ಳುತ್ತಾರೆ ಎಂದು ಮರಾಠ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಸ್ವಾಮೀಜಿ
ಹೇಳಿದರು.

ಸಮೀಪದ ಕೆರೆಬೀರನಹಳ್ಳಿಯಲ್ಲಿ ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

‘ಮಕ್ಕಳಲ್ಲಿ ಹಿರಿಯರಿಗೆ ಗೌರವ ನೀಡುವುದನ್ನು ರೂಢಿಸಬೇಕು. ಗಂಟೆಗೆ ಬಂಗಾರದ ಬೆಲೆ ನೀಡಿ ಸದ್ಬಳಕೆ ಮಾಡಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ.ಗ್ರಾಮಗಳಲ್ಲಿ ಮಹಾಪುರುಷರ ಪುತ್ಥಳಿಗಳನ್ನು ಸ್ಥಾಪಿಸಿ ದಾರ್ಶನಿಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

ಆಧುನಿಕತೆಯ ಭರಾಟೆಗೆ ಸಿಲುಕಿ ನಗರಗಳಲ್ಲಿ ಸಂಸ್ಕೃತಿ ಮರೆಯಾಗುತ್ತಿದೆ. ಹಳ್ಳಿ ಜೀವನ ನೆಮ್ಮದಿ ನೀಡುತ್ತದೆ. ಅನ್ಯ ಧರ್ಮೀಯರೊಂದಿಗೆ ಹೊಂದಿಕೊಂಡು ಹೋಗುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ನಾಯ್ಕ, ‘ಈ ಬಾರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಗಮನಸೆಳೆದು ಮರಾಠ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯಿಸಲಾಗುವುದು. ಶಿವಾಜಿ ಮಹಾರಾಜರು ಒಂದು ಧರ್ಮಕ್ಕೆ ಮಾತ್ರ ಸಿಮೀತವಲ್ಲ. ದಾರ್ಶನಿಕರ ತತ್ವ, ಸಿದ್ಧಾಂಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕಿ ಶಾರದ ಪೂರ್ಯಾನಾಯ್ಕ್, ಎಪಿಎಂಸಿ ಅಧ್ಯಕ್ಷ ಸತೀಶ್, ಮೂಡಬಾಗಿಲು ಚಂದ್ರಶೇಖರ್ ಮಾತನಾಡಿದರು.

ತಾಲ್ಲೂಕು ಮರಾಠ ಸಂಘದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ, ಗ್ರಾಮ ಸಮಿತಿ ಅಧ್ಯಕ್ಷ ಯಲ್ಲೋಜಿರಾವ್ ಗಡದೆ, ಮುಖಂಡರಾದ ಜಿ.ಎನ್. ಪರುಶುರಾಮ್, ಸಚಿನ್ ಸಿಂಧ್ಯಾ, ರಾಮಚಂದ್ರರಾವ್ ಕದಂ, ರಾಜರಾವ್ ಗಡದೆ, ಪರುಶುರಾಮ್ ಪವಾರ್, ನಾಗರಾಜ್ರಾವ್, ರಂಗಪ್ಪಮದ್ನೆ,ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.