ಹೊಳೆಹೊನ್ನೂರು: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ ನಾಯ್ಕ ಅವರು ತಮ್ಮ ಶಾಸಕರ ನಿಧಿಯಲ್ಲಿ ಮೂಲಸೌಕರ್ಯಗಳಾದ ಬಸ್ ನಿಲ್ದಾಣ, ದೇವಸ್ಥಾನ, ಬಾಕ್ಸ್ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.

2018-19ನೇ ಸಾಲಿನಲ್ಲಿ ದೊರೆತ ₹ 2 ಕೋಟಿ ಅನುದಾನದಲ್ಲಿ ₹ 156.11 ಕೋಟಿ ಹಂಚಿಕೆ ಮಾಡಿದ್ದಾರೆ. ಭದ್ರಾವತಿ ತಾಲ್ಲೂಕು ಆನವೇರಿ ಸೇರಿ ವಿವಿಧ ಗ್ರಾಮಗಳ ಬಸ್‌ನಿಲ್ದಾಣ ಕಾಮಗಾರಿಗೆ ₹ 35.50 ಲಕ್ಷ, ಶಿವಮೊಗ್ಗ ತಾಲ್ಲೂಕಿನ ಯಲವಟ್ಟಿ ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಾಣಕ್ಕೆ ₹ 17 ಲಕ್ಷ ಅನುದಾನ ನೀಡಿದ್ದಾರೆ.

ಭದ್ರಾವತಿ ತಾಲ್ಲೂಕು ಡಿ.ಬಿ. ಹಳ್ಳಿ ಗ್ರಾಮದ ಊರ ಮುಂದಿನ ಕೆರೆಯ ತೂಬು ಕೋಡಿ ಕಾಲುವೆ ಅಭಿವೃದ್ಧಿಗೆ ₹ 5 ಲಕ್ಷ, ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ₹ 38 ಲಕ್ಷ, ಭದ್ರಾವತಿ ತಾಲ್ಲೂಕು ವಡ್ಡರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹ 4 ಲಕ್ಷ, ಶಿವಮೊಗ್ಗ ತಾಲ್ಲೂಕು ತಮ್ಮಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಲ್ ಹತ್ತಿರ ಹಾಗೂ ವಿವಿಧ ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ₹ 29 ಲಕ್ಷ, ಭದ್ರಾವತಿ ತಾಲ್ಲೂಕು ಗುಡುಮಘಟ್ಟ ಗ್ರಾಮದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹ 20 ಲಕ್ಷ ಹಾಗೂ ಕ್ಷೇತ್ರದ ವಿವಿಧ ದೇವಾಲಯಗಳಿಗೆ ₹ 13.6 ಲಕ್ಷ ಅನುದಾನ ಹಂಚಿಕೆ ಮಾಡಿದ್ದಾರೆ.

2019-20ನೇ ಸಾಲಿನಲ್ಲಿ ಬಿಡುಗಡೆಯಾದ ₹ 1 ಕೋಟಿ ಅನುದಾನವನ್ನು ಶಾಸಕರು ಸಂಪೂರ್ಣವಾಗಿ ಬಳಸಿದ್ದಾರೆ. ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಗ್ರಾಮದ ಬ್ರಾಹ್ಮಣರ ಬೀದಿ ವಿವಿಧ ಗ್ರಾಮಗಳ ಹಾಗೂ ತೋಟದ ರಸ್ತೆಗಳಿಗೆ ಸಿಸಿ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ ಹಾಗೂ ಕಿರು ಸೇತುವೆ ನಿರ್ಮಾಣಕ್ಕೆ ₹ 22.00 ಲಕ್ಷ ಬಳಕೆ ಮಾಡಲಾಗಿದೆ.

ಭದ್ರಾವತಿ ತಾಲ್ಲೂಕು ಕೃಷಿಕ ಸಮಾಜದ ಕಟ್ಟಡದ ಮುಂದುವರಿದ ಕಾಮಗಾರಿಗೆ ₹ 2.50 ಲಕ್ಷ, ಹಾಗೂ ಮಾರಶೆಟ್ಟಿಹಳ್ಳಿ ಗ್ರಾಮದ ಶ್ರೀ ಭಗೀರಥ ಸಮುದಾಯ ಭವನ ನಿರ್ಮಾಣಕ್ಕೆ (ಮುಂದುವರಿದ ಕಾಮಗಾರಿ) ₹ 10 ಲಕ್ಷ, ಶಿವಮೊಗ್ಗ ತಾಲ್ಲೂಕು ಹಸೂಡಿ ಗ್ರಾಮದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ₹ 20 ಲಕ್ಷ ಅನುದಾನ ನೀಡಲಾಗಿದೆ.

ಶಿವಮೊಗ್ಗ ತಾಲ್ಲೂಕು ಕಾಟಿಕೆರೆ ಗ್ರಾಮದ ನೀರು ಬಳಕೆದಾರರ ಸಂಘದ ಕಟ್ಟಡದ ಮುಂದುವರಿದ ಕಾಮಗಾರಿಗೆ ₹ 5 ಲಕ್ಷ, ಭದ್ರಾವತಿ ತಾಲ್ಲೂಕು ಅಗಸನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿ ₹ 12 ಲಕ್ಷ ಅನುದಾನ ನೀಡಲಾಗಿದೆ. ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಸಿಲಿಂಡರ್‌ಗಳು, 42 ಹಾಸಿಗೆಗಳು ಸೇರಿ ವಿವಿಧ ವಸ್ತುಗಳಿಗೆ ₹ 28.50 ಲಕ್ಷ ಹಂಚಿಕೆ ಮಾಡಲಾಗಿದೆ.

2020-21ನೇ ಸಾಲಿನಲ್ಲಿ ಇದುವರೆಗೂ ₹ 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸಂಪೂರ್ಣವಾಗಿ ಬಳಕೆಯಾಗಿದೆ. ಶಿವಮೊಗ್ಗ ತಾಲ್ಲೂಕು ಕೋಟೆಗಂಗೂರು ಗ್ರಾಮದ ಅಂಗವಿಕಲ ರಾಮನಾಯ್ಕ ಸೇರಿ ಹಲವರಿಗೆ ತ್ರಿಚಕ್ರ ವಾಹನ ವಿತರಣೆಗೆ ₹ 5.80 ಲಕ್ಷ, ಶಿವಮೊಗ್ಗ ತಾಲ್ಲೂಕು ಹೊಳೆಬೆನವಳ್ಳಿ ಗ್ರಾಮದ ಶ್ರೀಮಾರಿಯಮ್ಮ ಸಾರ್ವಜನಿಕ ಸಮುದಾಯ ಭವನ,ಭದ್ರಾವತಿ ತಾಲ್ಲೂಕು ಅರಬಿಳಚಿ ಗ್ರಾಮದ ಶ್ರೀರಂಗನಾಥಸ್ವಾಮಿ ಸಾರ್ವಜನಿಕ ಸಮುದಾಯ ಭವನ, ಹೊಳೆಹೊನ್ನೂರು ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿರುವ ಸಾರ್ವಜನಿಕ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಕ್ರಮವಾಗಿ ₹ 3 ಲಕ್ಷ, ₹ 5 ಲಕ್ಷ, ₹ 5 ಲಕ್ಷ ಅನುದಾನ ನೀಡಿದ್ದಾರೆ.

ಭದ್ರಾವತಿ ತಾಲ್ಲೂಕು ಮೂಡಲವಿಠಲಾಪುರ ಗ್ರಾಮದಲ್ಲಿ ಬಸ್‌ನಿಲ್ದಾಣ ಕಾಮಗಾರಿಗೆ ₹ 3.37 ಲಕ್ಷ, ಶಿವಮೊಗ್ಗ ತಾಲ್ಲೂಕು ಸಂತೆಕಡೂರು ಗ್ರಾಮದ ಚಾಮುಂಡೇಶ್ವರಿ ಪ್ರೌಢಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ₹ 3 ಲಕ್ಷ, ಹೊಳೆಹೊನ್ನೂರು ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಕಟ್ಟಡ,ಭದ್ರಾವತಿ ತಾಲ್ಲೂಕು ಕೊಪ್ಪ ಗ್ರಾಮದ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡದ ಮುಂದುವರಿದ ಕಾಮಗಾರಿಗೆ ಕ್ರಮವಾಗಿ ₹ 1.75 ಲಕ್ಷ, ₹ 2.93 ಲಕ್ಷ, ಶಿವಮೊಗ್ಗ ತಾಲ್ಲೂಕು ಹೊಯ್ಸನಹಳ್ಳಿ, ಚಿನ್ಮನೆ, ಬೈರನಕೊಪ್ಪ, ವೀರಣ್ಣ ಬೆನವಳ್ಳಿ, ಹರಮಘಟ್ಟ ಹೈಮಾಸ್ಟ್ ದೀಪ ಅಳವಡಿಕೆಗೆ ₹ 10 ಲಕ್ಷ ಅನುದಾನ ನೀಡಲಾಗಿದೆ.

ಕ್ಷೇತ್ರದಲ್ಲಿ ಈಗಾಗಲೇ ₹ 150 ಕೋಟಿ ಅನುದಾನ ಬಳಕೆ ಮಾಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಅನುದಾನ ಕಡಿಮೆಯಾಗಿದ್ದು, ಇರುವುದರಲ್ಲಿಯೇ ಅಚ್ಚುಕಟ್ಟಾಗಿ ಹಾಗೂ ಅವಶ್ಯಕತೆ ಇರುವ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ವಿತರಿಸಲಾಗಿದೆ.

- ಕೆ.ಬಿ. ಅಶೋಕ ನಾಯ್ಕ, ಶಾಸಕರು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.