ಹೊಳೆಹೊನ್ನೂರು: ವೃದ್ಧೆಯೊಬ್ಬರ ಯೋಗಕ್ಷೇಮ ನೋಡಿಕೊಳ್ಳಲು ನೇಮಕವಾಗಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಲಕ್ಷ್ಮಿ ಎಂಬವರು ಕಳ್ಳತನ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಅವರಿಂದ 65 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಮೀಪದ ಡಿ.ಬಿ. ಹಳ್ಳಿಯಲ್ಲಿ 90 ವರ್ಷದ ವಯಸ್ಸಾದ ತಮ್ಮ ಅತ್ತೆಯನ್ನು ನೋಡಿಕೊಳ್ಳಲು ಹಾಗೂ ಮನೆಗೆಲಸ ಮಾಡಲು ಅಳಿಯ ಡಾ. ಜಗದೀಶ್ ಅವರು ಲಕ್ಷ್ಮಿ ಅವರನ್ನು ನೇಮಿಸಿಕೊಂಡಿದ್ದರು. ಜೂನ್ 16ರಂದು ವೃದ್ಧೆ ಲಕ್ಷ್ಮಮ್ಮ ಅವರು 23 ಗ್ರಾಂ ತೂಕದ ಚಿನ್ನಾಭರಣಗಳನ್ನು ತಲೆ ಬಳಿ ಇಟ್ಟುಕೊಂಡು ಮಲಗಿದ್ದರು. ಆದರೆ ಅವು ನಾಪತ್ತೆಯಾಗಿದ್ದರಿಂದ ಪೊಲೀಸರಿಗೆ ದೂರು ನೀಡಲಾಗಿತ್ತು.

ಡಿವೈಎಸ್ಪಿ ನಾಗರಾಜ್ ಅವರ ಮೇಲ್ವಿಚಾರಣೆಯಲ್ಲಿ ಪಟ್ಟಣ ಠಾಣೆಯ ಪಿಐ ಶಿವಪ್ರಸಾದ್ ಎಂ. ಅವರ ನೇತೃತ್ವದಲ್ಲಿ ಪಿಎಸ್ಐ ರಮೇಶ್, ಸಿಬ್ಬಂದಿ ಅಣ್ಣಪ್ಪ ಪ್ರಸನ್ನ, ಪ್ರಕಾಶ್ ನಾಯ್ಕ ಮಂಜುನಾಥ್, ಶಿವಮ್ಮ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.