ಹೊಳೆಹೊನ್ನೂರು: ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿರುವುದರಿಂದ ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಎಡಿ ಕಾಲೋನಿಯಲ್ಲಿ 13 ಮನೆಗಳಿಗೆ ನೀರು ನುಗಿದ ಪರಿಣಾಮ ತಡ ರಾತ್ರಿಯಲ್ಲಿ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಕೆಲವರನ್ನು ಅಡಿಕೆ ಮನೆ ಹಾಗೂ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. 10 ಕುಟುಂಬಗಳನ್ನು ಪಟ್ಟಣದ ಬಿಸಿಎಂ ಹಾಸ್ಟೆಲ್ನಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ಇರಿಸಲಾಗಿದೆ.

ಉಪವಿಭಾಗಧಿಕಾರಿ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. ವಡೇರಪುರ ಎಡಿ ಕಾಲೋನಿ ಬಳಿ ನದಿ ದಂಡೆಯಲ್ಲಿ ನಿರ್ಮಾಣ ಮಾಡಿರುವ ಚಿಕ್ಕ ತಡೆಗೋಡೆಯಿಂದ ಯಾವುದೇ ಪ್ರಯೋಜನವಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೂಡಲೆ ಸ್ಥಳ ಪರೀಶಿಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ನದಿ ಪಾತ್ರದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದರು.

ವಡೇರಪುರ ಹಾಗೂ ಪಟ್ಟಣದ ಎಡಿ ಕಾಲೋನಿ ನಿವಾಸಿಗಳ ಸಂಕಷ್ಟಕ್ಕೆ ಸೂಕ್ತ ಶಾಶ್ವತ ಪರಿಹಾರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಮಂಗೋಟೆಯಲ್ಲಿ ತುಂಗಾಭದ್ರಾ ನದಿಯ ದಡದಲ್ಲಿರುವ ಮನೆಗೆ ನೀರು ನುಗ್ಗಿದೆ. ರಸ್ತೆಗೆ ನೀರು ನುಗ್ಗಿದ್ದು, ಸಂಜೆ ವೇಳೆ ಬಸ್ ಸಂಚಾರ ಸ್ಥಗಿತವಾಗಿದೆ.

ಕಾಳಜಿ ಕೇಂದ್ರ ಸ್ಥಾಪನೆ: ತುಂಗಾಭದ್ರಾ ನದಿಯಿಂದ ನೀರು ಹೆಚ್ಚು ಬಿಡುಗಡೆಯಾಗಿದ್ದರಿಂದ ಪ್ರವಾಹ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರಾತ ಕ್ರಮವಾಗಿ ಪಟ್ಟಣ ಪದವಿ ಕಾಲೇಜಿನ ಹಾಸ್ಟೆಲ್ ಹಾಗೂ ವಡೇರಪುರದ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ರಾಜಸ್ವ ನಿರೀಕ್ಷಕ ರವಿಕುಮಾರ್, ಉಪತಹಶೀಲ್ದಾರ್ ವಿಜಯ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪುಷ್ಪಾ, ಗ್ರಾಮಲೆಕ್ಕಿಗ ವಿಜಯ್ಕುಮಾರ್, ಸ್ನೇಹ, ಹಾಲಸಿದ್ದಪ್ಪ, ಅಣ್ಣಪ್ಪ, ಪ್ರಕಾಶ್, ನಂದೀಶ್, ಬಸವನಗೌಡ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.