ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಸಿನ ಸೂರು; ಇದು ಎಲ್ಲರ ಹಾಡುಪಾಡು

Published 30 ನವೆಂಬರ್ 2023, 6:42 IST
Last Updated 30 ನವೆಂಬರ್ 2023, 6:42 IST
ಅಕ್ಷರ ಗಾತ್ರ

ಸ್ವಂತಕ್ಕೊಂದು ಸೂರು ಕಟ್ಟಿಕೊಳ್ಳುವುದು ಪ್ರತಿ ದುಡಿಯುವ ವರ್ಗದ ಕುಟುಂಬದ ಮುಖ್ಯಸ್ಥನ ಆಕಾಂಕ್ಷೆ ಹಾಗೂ ಅಂದಿನ, ಇಂದಿನ ಪೀಳಿಗೆಯ ಪ್ರಥಮ ಆದ್ಯತೆ.

ಮನುಷ್ಯ ತನ್ನ ಕುಟುಂಬದ ಸುರಕ್ಷತೆಗಾಗಿ, ಭವಿಷ್ಯಕ್ಕಾಗಿ ಸೂರು ನಿರ್ಮಿಸಿಕೊಳ್ಳುವುದು ಸಮಾಜದ ಮುಖ್ಯ ಬೆಳವಣಿಗೆಯಲ್ಲಿ ಒಂದು ಹೆಜ್ಜೆ.

ಮನೆ ಎನ್ನುವ ಪರಿಕಲ್ಪನೆ ಅಂದಿನ ತಲೆಮಾರಿನಿಂದ ಇಂದಿನ ಪೀಳಿಗೆಯವರೆಗೂ ಕೂಡ ಮನಸ್ಸಿಗೆ ನೆಮ್ಮದಿ ಕೊಡುವ ತಾಣವಾಗಿರುವುದು ಸಾರ್ವಕಾಲಿಕ ಸತ್ಯ. ಹಿಂದಿನ ಕಾಲಕ್ಕಿಂತ ಈ 21ನೇ ಶತಮಾನದಲ್ಲಿ (ಅಥವಾ ಆಧುನಿಕತೆಯ ಈ ಯುಗದಲ್ಲಿ) ಮನೆಯ ನಿರ್ಮಾಣ ಬಹು ಮುಖ್ಯ ಪ್ರಾಮುಖ್ಯತೆ ಪಡೆದುಕೊಳ್ಳುವುದು. ಈ ಕಾರಣಕ್ಕಾಗಿ ಮತ್ತು ಮನುಷ್ಯನ ಬೆಳವಣಿಗೆಯ ಕನ್ನಡಿಯೂ ಹೌದು.

ಮನೆಯ ಕಲ್ಪನೆ ಹಿಂದಿಗಿಂತಲೂ ಹೆಚ್ಚಿನ ಮುನ್ನಡೆಗೆ ಬಂದಿರುವುದರಿಂದ ಅದರ ನಿರ್ಮಾಣವೂ ಕೂಡ ಅಷ್ಟೇ ವೇಗವಾಗಿ, ಹೊಸ ವಿನ್ಯಾಸ ಮತ್ತು ವಾಸ್ತುಶಿಲ್ಪ ಬದಲಾಗುತ್ತಿದೆ ಹಾಗೂ ಸುಧಾರಣೆಯಾಗುತ್ತಿದೆ. ಮನೆಯ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿಗಳು, ಅದಕ್ಕೆ ಅನುಸರಿಸುವ ವೇಗದ ನಿರ್ಮಾಣ ಶೈಲಿ ಮತ್ತು ತಾಂತ್ರಿಕತೆ ಕೂಡ ಅಷ್ಟೇ ಸುಧಾರಣೆಗೊಂಡಿದೆ.

ಇದರಿಂದ ಮನೆಯ ನಿರ್ಮಾಣದ ಸಮಯ ಕೂಡ ಬಹಳವಾಗಿ ಉಳಿತಾಯವಾಗುತ್ತಿದೆ. ಇಂದು ಈ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿರುವ ಸಿಮೆಂಟ್ ಮತ್ತಿತರ ವಸ್ತುಗಳು ಬಹಳ ಕಡಿಮೆ ಸಮಯ ಬಳಸಿಕೊಂಡು ಹಿಂದಿಗಿಂತಲೂ ಹೆಚ್ಚಿನ ಕ್ಷಮತೆ ಮತ್ತು ಗುಣಮಟ್ಟ ನೀಡುತ್ತಿವೆ. ಈ ಕ್ಷೇತ್ರದಲ್ಲಿನ ಸಂಶೋಧನೆಗಳು ಹಾಗೂ ಅದರ ಉತ್ಪನ್ನಗಳು ಇದಕ್ಕೆ ಪ್ರಮುಖ ಕಾರಣ.

ಹೊಸ ತಲೆಮಾರಿನ ಪೀಳಿಗೆಯು ಬಯಸುತ್ತಿರುವುದು ಆಧುನಿಕ ಶೈಲಿಯ ನಿರ್ಮಾಣ, ಹೊಸ ಹೊಸ ವಸ್ತುಗಳ ಉಪಯೋಗ, ಅತ್ಯಾಧುನಿಕ ಒಳಾಂಗಣ ವಿನ್ಯಾಸ. ಈ ಎಲ್ಲಾ ವಿಷಯಗಳನ್ನು ಕೇಂದ್ರೀಕರಿಸಿ, ಗಮನದಲ್ಲಿಟ್ಟುಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದು ಇಂದಿನ ವಾಸ್ತುಶಿಲ್ಪಿಗಳು ಮತ್ತು ಎಂಜಿನಿಯರ್‌ಗಳ ಶ್ರೇಷ್ಠತೆ ಮತ್ತು ಸಾಮರ್ಥ್ಯ ತೋರಿಸುತ್ತದೆ. ಆ ನಿಟ್ಟಿನಲ್ಲಿ ನಿರ್ಮಾಣ ತಂಡ ಹೇಳುವ ಪ್ರಕಾರ ವಿನ್ಯಾಸಗಾರ ವಾಸ್ತುಶಿಲ್ಪಿ ಮನೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡುವ ಮೊದಲು ಅದರ ಹಿಂದಿರುವ ಸೂಕ್ಷ್ಮ ವಿಷಯಗಳನ್ನು ಅರಿತು ಗಮನದಲ್ಲಿಟ್ಟುಕೊಂಡು ಅದರ ವಿನ್ಯಾಸಕ್ಕೆ ಮುಂದಾಗಬೇಕು. ಉದಾಹರಣೆಗೆ ಕಟ್ಟಡ ಯಾವ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ಮನೆಯನ್ನು ಹೇಗೆ ತಂಪಾಗಿರಿಸಬಹುದು ಹಾಗೂ ಅದಕ್ಕೆ ತಗಲುವ ಖರ್ಚನ್ನು ಕೂಡ ಹೇಗೆ ಕಡಿಮೆಗೊಳಿಸಬಹುದು. ಅಥವಾ ಹೆಚ್ಚಿನ ಮಳೆ ಪ್ರದೇಶದಲ್ಲಿ ನೀರು ನಿಲ್ಲದೆ ಜಾರಿ ಹೋಗುವ ವಿನ್ಯಾಸ ಎಷ್ಟು ಅತ್ಯವಶ್ಯಕ ಎಂಬುದಾಗಿದೆ.

ಮನೆಗಳ ನಿರ್ಮಾಣದಲ್ಲಿ ದಿಕ್ಕುಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಉತ್ತರದಿಂದ ಗಾಳಿ ಮತ್ತು ಪರೋಕ್ಷ ಬೆಳಕು ಹೆಚ್ಚಾಗಿ ಮನೆ ಪ್ರವೇಶಿಸಿದರೆ ಪಶ್ಚಿಮದಿಂದ ಬಿಸಿಯಾದ ಗಾಳಿ ಮತ್ತು ನೇರ ಬೆಳಕು ಹೆಚ್ಚು ತಾಪಮಾನ ನೀಡುತ್ತದೆ. ಹೀಗೆ ಹತ್ತು ಹಲವು ಆಯಾಮಗಳು ಬಹು ಮುಖ್ಯವಾಗಿ ಇಂದಿನ ಸೂರಿನ ನಿರ್ಮಾಣದಲ್ಲಿ ಕಟ್ಟಡದ ನಿರ್ಮಾಣದಲ್ಲಿ ವಾಸ್ತು ಎಂಬುದು ಎಲ್ಲರೂ ಗಮನಿಸುವ ಬಹುಮುಖ್ಯ ಪ್ರಾಮುಖ್ಯತೆ. ವಾಸ್ತುವಿನ ಮೂಲ ಉದ್ದೇಶ ಕಟ್ಟಡಕ್ಕೆ ಸರಿಯಾದ ರೀತಿಯಲ್ಲಿ ಗಾಳಿ– ಬೆಳಕು ನೀಡುವ ಜೊತೆಗೆ ಅದರಲ್ಲಿ ವಾಸಿಸುವ ಜನರು ಆರೋಗ್ಯವಂತರಾಗಿರಬೇಕು ಎಂಬುದೇ ಆಗಿದೆ.

ಪ್ರಕೃತಿಯಿಂದ ದೊರಕುವ ಗಾಳಿ ಬೆಳಕು ಮನೆಗಳಲ್ಲಿ ವಾಸಿಸುವವರನ್ನು ಸರಿಯಾಗಿ ತಲುಪಿ ಅವರ ಆರೋಗ್ಯ ಸುಸ್ಥಿತಿಯಲ್ಲಿಡುವುದು ಬಹಳ ಮುಖ್ಯ. ಆಧುನಿಕ ವಿನ್ಯಾಸ ಮತ್ತು ನಿರ್ಮಾಣ ಇಂದಿನ ಕನಸಿನ ಮನೆಯಲ್ಲಿ ಎಷ್ಟು ಪ್ರಾಮುಖ್ಯವೂ ಅಷ್ಟೇ ಪ್ರಾಮುಖ್ಯತೆ ನಮ್ಮ ಹಿಂದಿನ ಪರಂಪರೆಯಲ್ಲಿ ಬಳಸುತ್ತಿದ್ದ ವಿಧಾನಗಳು. ಅವು ಕೂಡ ನೈಸರ್ಗಿಕವಾದವು. ಈ ನೈಸರ್ಗಿಕ ವಿಧಾನ ಉದಾಹರಣೆಗೆ ಹೆಚ್ಚಿನ ಬಿಸಿಲನ್ನು ಮನೆಯೊಳಗೆ ಬಾರದಂತೆ ತಡೆಯಲು ಪಶ್ಚಿಮಕ್ಕೆ ಅತಿ ದಪ್ಪ ಗೋಡೆಗಳನ್ನು ಬಳಸುವುದು ಮತ್ತು ಕಡಿಮೆ ಕಿಟಕಿ ಬಾಗಿಲುಗಳನ್ನು ಇಡುವುದು. ಇದರಿಂದ ಮನೆಯೊಳಗೆ ತಾಪಮಾನ ಸದಾ ಕಡಿಮೆ ಇರುತ್ತದೆ. ತಾರಸಿಗೆ ಮಣ್ಣಿನ ಇಟ್ಟಿಗೆಗಳ ಮುಚ್ಚುಗೆಯನ್ನು ಬಳಸುವುದು ಅಥವಾ ಹೆಂಚಿನ ಟೈಲ್ಸ್‌ಗಳ ಬಳಸುವುದು ಕೂಡ ತಾಪಮಾನ ಕಡಿಮೆ ಮಾಡುವ ಸುಲಭ ಉಪಯೋಗಗಳಲ್ಲೊಂದು. (ದಾವಣಗೆರೆ ಅಥವಾ ಬಿಸಿಲು ಪ್ರದೇಶಗಳಿಗೆ ಅತಿ ಸೂಕ್ತ).

ಇಂದಿನ ದಿನಗಳಲ್ಲಿ ನಿರ್ಮಾಣ ಕಾರ್ಯದಲ್ಲಿ ಉಪಯೋಗಿಸುವ ನವನವೀನ ವಸ್ತುಗಳ ಅನ್ವೇಷಣೆ ಗ್ರಾಹಕರ ಖರ್ಚನ್ನು ಕೂಡ ದುಬಾರಿಗೊಳಿಸುತ್ತಿದೆ. ಮನೆಯನ್ನು ಸುಂದರಗೊಳಿಸಲು ಹೊರಡುವ ಗ್ರಾಹಕರು ಐಷಾರಾಮಿ ವಸ್ತುಗಳ ಮೋಡಿಗೆ ಬಿದ್ದು ಖರ್ಚನ್ನು ಹೆಚ್ಚಿಸುತ್ತಾರೆ. ಆದರೆ, ಅವುಗಳ ಅವಶ್ಯಕತೆ ಅನುಕೂಲ, ಅನಾನುಕೂಲಗಳ ಕುರಿತು ಗ್ರಾಹಕನಿಗೆ ವಿವರಿಸುವುದು ಮನೆ ನಿರ್ಮಾಣಕಾರನ ಆದ್ಯ ಕೆಲಸ. ಪ್ರತಿಯೊಂದು ವಸ್ತುವಿಗೆ ಪರ್ಯಾಯವಾದ ಇನ್ನೊಂದು ವಸ್ತುವನ್ನು ಹುಡುಕಿ ಸಲಹೆ ನೀಡುವುದು ಬಹು ಮುಖ್ಯವಾಗಿದೆ. ಒಳ್ಳೆಯ ವಾಸ್ತುಶಿಲ್ಪಿ ಹಾಗೂ ನಿರ್ಮಾಣಕಾರನಿಗೆ ಈ ಜ್ಞಾನ ಬಹುಮುಖ್ಯ ಹೀಗೆ ಈ ಕೆಳಗಿನ ಕೆಲವೊಂದು ಪಟ್ಟಿ ಮಾಡಬಹುದು.

1) ಆಧುನಿಕ ನಿರ್ಮಾಣ ಶೈಲಿಯಲ್ಲಿ ಇಟ್ಟಿಗೆ ಕಟ್ಟಡದ ಮೇಲೆ ಒಳಾಂಗಣ ಹೊರಾಂಗಣ ಪ್ಲಾಸ್ಟರ್ ಇಲ್ಲದೆಯೇ ಬಣ್ಣ ಬಳಿಯಬಹುದು. ಹೊರಾಂಗಣದಲ್ಲಿ ಕಲ್ಲಿನ ಅಥವಾ ಹಂಚಿನ ಟೈಲ್ಸ್ ಫ್ಲೋರಿಂಗ್ ಮಾಡಬಹುದಾಗಿದೆ ಇದು ತಾಪಮಾನವನ್ನು ಕಡಿಮೆ ಮಾಡುತ್ತದೆ ಹಾಗೂ ಪೇಂಟಿಂಗ್ ಖರ್ಚನ್ನು ಉಳಿಸುತ್ತದೆ.

2) ಆರ್‌ಸಿಸಿ ತಾರಸಿಯ ಬದಲು ಮನೆಗಳಲ್ಲಿ (ಬಹು ಅಂತಸ್ತಿನ ಕಟ್ಟಡ ಹೊರತಾಗಿ) ಡಬಲ್ ಮಂಗಳೂರು ಹೆಂಚಿನ ಮುಚ್ಚಳಿಕೆ ಅಥವಾ ರೂಫ್‌ ಬಳಸಬಹುದಾಗಿದೆ.

3) ಒಳಾಂಗಣ ಫ್ಲೋರಿಂಗ್‌ನಲ್ಲಿ ಗ್ರಾನೆಟ್/ ಟೈಲ್ಸ್ /ಮಾರ್ವೆಲ್ಸ್ ಬದಲಾಗಿ ಯಾಂತ್ರಿಕೃತ ಸಿಮೆಂಟ್ ಫ್ಲೋರಿಂಗ್ ಇತ್ತೀಚಿನ ಜನಪ್ರಿಯ ಟ್ರೆಂಡ್ ಗಳಲ್ಲಿ ಒಂದಾಗಿದೆ (ಹಳೆಯ ಮನೆಗಳಲ್ಲಿನ ರೆಡ್ ಆಕ್ಸಿಟ್ ಫ್ಲೋರಿಂಗ್ ಆರೋಗ್ಯಕರ ಹಾಗೂ ಶೂನ್ಯ ನಿರ್ವಹಣೆ). ಈ ಮೇಲಿನ ಎಲ್ಲಾ ವಿಷಯಗಳ ಗಮನದಲ್ಲಿಟ್ಟುಕೊಂಡು ಮನೆಯ ನಿರ್ಮಾಣಕ್ಕೆ ಹೆಜ್ಜೆ ಇಡುವುದು ಒಳಿತು.ಎಚ್.ಎಸ್. ಶಿವಕುಮಾರ್, ನಿರ್ದೇಶಕರು, ಆರ್ಟಿಜ್ ಕನ್‌ಸ್ಟ್ರಕ್ಷನ್ಸ್

ಆರ್ಟಿಜ್ ಕನ್‌ಸ್ಟ್ರಕ್ಷನ್ ನಿರ್ಮಾಣದ ಮನೆ
ಆರ್ಟಿಜ್ ಕನ್‌ಸ್ಟ್ರಕ್ಷನ್ ನಿರ್ಮಾಣದ ಮನೆ

ಲೇಖಕರು: ಆರ್ಕಿಟೆಕ್ಟ್, ಆರ್ಟಿಜ್ ಸಂಸ್ಥೆ

ಎಚ್.ಎಸ್. ಶಿವಕುಮಾರ್, ನಿರ್ದೇಶಕರು, ಆರ್ಟಿಜ್ ಕನ್‌ಸ್ಟ್ರಕ್ಷನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT