ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ವಿರೋಧದ ಮಧ್ಯೆಯೂ ಇಮಾಂಬಡಾ ಪ್ರದೇಶದ ಮನೆಗಳ ತೆರವು

Last Updated 10 ಅಕ್ಟೋಬರ್ 2020, 10:35 IST
ಅಕ್ಷರ ಗಾತ್ರ

ಶಿವಮೊಗ್ಗ: ಇಮಾಂಬಡಾಪ್ರದೇಶದ ಮನೆಗಳನ್ನು ಪಾಲಿಕೆ ಸಿಬ್ಬಂದಿ ಶನಿವಾರತೀವ್ರ ವಿರೋಧದ ಮಧ್ಯೆಯೂ ತೆರವುಗೊಳಿಸಿದರು.

ಒಂದು ಕಡೆ ಪಾಲಿಕೆ ಅಧಿಕಾರಿಗಳ ಸೂಚನೆಯಂತೆ ಸಿಬ್ಬಂದಿ ಮನೆಗಳನ್ನು ತೆರವುಗೊಳಿಸಿದರೆ, ಮತ್ತೊಂದು ಕಡೆ ಪಾಲಿಕೆ ವಿರೋಧ ಪಕ್ಷದ ಮುಖಂಡರು ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್‌, ಸದಸ್ಯರಾದ ನಾಗರಾಜ್ ಕಂಕಾರಿ, ಕೆ.ರಂಗನಾಥ್ ನೇತೃತ್ವದಲ್ಲಿ ಇಮಾಂಬಡಾ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಬಾರಿ ಮಳೆಗಾಲದಲ್ಲೂಮನೆಗಳಿಗೆ ನೀರು ನುಗ್ಗುತ್ತಿದೆ. ಸುಮಾರು 27 ಮನೆಗಳಿವೆ. ಪ್ರತಿ ಬಾರಿಯೂ ಪ್ರವಾಹ ಬಂದಾಗ ಇಲ್ಲಿನ ನಿವಾಸಿಗಳಿಗೆ ಸಂಕಷ್ಟ ಎದುರಾಗುತ್ತದೆ. ಬೇರೆ ಕಡೆ ಜಾಗ ನೀಡಲಾಗಿದೆ. ಆದರೆ, ಅಲ್ಲಿ ಮೂಲಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ವಿದ್ಯುತ್ ಕಲ್ಪಿಸಿಲ್ಲ.ಈಗದಿಢೀರ್ತೆರವುಗೊಳಿಸಿದರೆ ಎಲ್ಲಿಗೆ ಹೋಗಬೇಕು? ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್.ಸಿ.ಯೋಗೀಶ್ ಮಾತನಾಡಿ, ಇಮಾಂಬಡಾದನಿವಾಸಿಗಳಿಗೆ ಬೇರೆ ಕಡೆ ಜಾಗ ನೀಡಲಾಗಿದೆ. ಆದರೆ, ಅಲ್ಲಿ ಮೂಲ ಸೌಕರ್ಯಗಳು ಇಲ್ಲ. ಮೊದಲು ಸೌಕರ್ಯಗಳನ್ನು ಕಲ್ಪಿಸಲಿ. ಅಲ್ಲದೇ, ಹೊಸ ಜಾಗ ತಮ್ಮದು ಎಂದುಕೆಲವು ಖಾಸಗಿಯವರು ಹೇಳಿಕೊಳ್ಳುತ್ತಿದ್ದಾರೆ. ಹಾಗಾಗಿ, ಪಾಲಿಕೆ ಎಲ್ಲ ಸಮಸ್ಯೆಗಳನ್ನೂಬಗೆಹರಿಸಿದ ಮೇಲೆ ಸ್ಥಳಾಂತರಗೊಳಿಸಲಿ ಎಂದುಆಗ್ರಹಿಸಿದರು.

ಕೆಲವು ಮನೆಗಳನ್ನು ತೆರವುಗೊಳಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಆದರೂ,ಪಾಲಿಕೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳದಲ್ಲಿಯೇ ಧರಣಿ ಕುಳಿತರು.

ಇಮಾಂಬಡಾದಲ್ಲಿ ನಿವಾಸಿಗಳಿಗೆ ಹಾಯ್‌ಹೊಳೆಯಬಳಿ ಸ್ಥಳ ನೀಡಲಾಗಿದೆ.ಮನೆ ಕಟ್ಟಿಕೊಳ್ಳಲು ಪ್ರತಿಯೊಬ್ಬರಿಗೂ₹ 1.25 ಲಕ್ಷ ಪಾವತಿಸಲಾಗಿದೆ. 1 ವರ್ಷ ಕಾಲವಕಾಶ ನೀಡಲಾಗಿದೆ.ಪ್ರತಿ ಮಳೆಗಾಲದಲ್ಲೂ ನೀರು ನುಗ್ಗಿ ಹಾನಿಯಾಗುತ್ತಿದೆ.ಪ್ರತಿ ಬಾರಿ ಪರಿಹಾರ ಪಡೆಯುತ್ತಾರೆ. ಆದರೆ, ಜಾಗ ಬಿಟ್ಟು ಕದಲುವುದಿಲ್ಲ. ಸಮಸ್ಯೆ ಜೀವಂತವಾಗಿ ಉಳಿದಿದೆ ಎಂದು ಪಾಲಿಕೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT