ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಎಸ್‌ಆರ್‌ಪಿ ನೋಂದಣಿ: ಸಮೀಪಿಸುತ್ತಿದೆ ಗಡುವು

ಸುರಕ್ಷಿತ ನಂಬರ್‌ ಪ್ಲೇಟ್‌ ಅಳವಡಿಕೆ ಪ್ರಕ್ರಿಯೆ...
ಮಲ್ಲಪ್ಪ ಸಂಕೀನ್‌
Published 8 ಜೂನ್ 2024, 7:31 IST
Last Updated 8 ಜೂನ್ 2024, 7:31 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 55,733 ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್‌ ನಂಬರ್ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡಲಾಗಿದೆ.

2019ರ ಏಪ್ರಿಲ್‌ 1ಕ್ಕಿಂತ ಮುಂಚೆ ಖರೀದಿಸಲಾದ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಬೇಕಿದೆ.  ಬೈಕ್‌, ಕಾರು, ಆಟೋ ಮತ್ತು ಲಾರಿ ಸೇರಿದಂತೆ ಎಲ್ಲ ವಾಹನಗಳಿಗೆ ಅಳವಡಿಸುವುದು ಕಡ್ಡಾಯವಾಗಿದೆ. ಹೀಗಾಗಿಯೇ ವಾಹನ ಸವಾರರು ನಂಬರ್ ಪ್ಲೇಟ್‌ ಬದಲಿ ಮಾಡಿಸುವಲ್ಲಿ ನಿರತರಾಗಿದ್ದಾರೆ. 

ಆನ್‌ಲೈನ್‌ ಮೂಲಕ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಸಿ ಶುಲ್ಕ ಕಟ್ಟಿ ವಾಹನ ಉತ್ಪಾದಕ ಕಂಪನಿಯ ಹೆಸರು ನಮೂದಿಸಬೇಕು. ಇದಾದ ಮೇಲೆ ಡೀಲರ್‌ ಲೊಕೇಶನ್‌ ಆಯ್ಕೆ ಮಾಡಿಕೊಳ್ಳಬೇಕಿದೆ. ನಂತರ ವಾಹನ ಮಾಲೀಕರ ಮೊಬೈಲ್‌ ಫೋನ್‌ ನಂಬರ್‌ಗೆ ಒಟಿಪಿ ಬರುತ್ತದೆ. ಮಾಲೀಕರು ಸಮಯಾವಕಾಶ ನೋಡಿಕೊಂಡು ನಂಬರ್ ಪ್ಲೇಟ್‌ನ್ನು ವಾಹನಕ್ಕೆ ಜೋಡಿಸಲು ದಿನಾಂಕ ಮತ್ತು ಸಮಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಾಹನ ಮಾಲೀಕರು ನಿಗದಿ ಮಾಡಿ ಅಂಗೀಕೃತವಾದ ದಿನಾಂಕ ಮತ್ತು ಸಮಯಕ್ಕೆ ವಾಹನ ಉತ್ಪಾದಕರು ಅಥವಾ ಡೀಲರ್‌ ಬಳಿ ಹೋಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಗಳಿಗೆ ಅಳವಡಿಸಬಹುದು.

ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು, ಅವುಗಳನ್ನು ಬದಲಿಸುವುದು ವಿರೂಪಗೊಳಿಸಲು ಆಗುವುದಿಲ್ಲ. ವಾಹನ ಕಳವು ಆದಾಗ ಪತ್ತೆ ಮಾಡಲು ಸುಲಭವಾಗುತ್ತದೆ. ನಂಬರ್ ಪ್ಲೇಟ್‌ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರ ಹೋಲುವ ಹಾಲೋಗ್ರಾಮ್‌ ಇರುತ್ತದೆ. ಇದರ ಕೆಳಗಡೆ 10 ನಂಬರ್‌ನ ವಿಶಿಷ್ಟ ಗುರುತಿನ ಸಂಖ್ಯೆ ಕೂಡ ಇರಲಿದೆ. ಅಂಕಿಗಳ ಮೇಲೆ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯಾ ಎಂಬ ಪದ ಇರುತ್ತದೆ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಮಲ್ಲೇಶ್ ಹೇಳಿದರು.

ನಂಬರ್‌ ಪ್ಲೇಟ್‌ ಅಳವಡಿಸಲು ಜೂನ್‌ 12 ಕೊನೆಯ ದಿನ. ಗಡುವು ಮುಗಿಯವುದರೊಳಗೆ ಸವಾರರು ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಫ್ಲೇಟ್‌ ಅಳವಡಿಕೆ ಮಾಡಿಸಬೇಕಿದೆ. ಗಡುವು ಮುಗಿದರೆ ಮೊದಲ ಬಾರಿಗೆ ₹ 500 ಮತ್ತು ಎರಡನೇ ಬಾರಿಗೆ ₹ 1,000 ದಂಡ ವಿಧಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT