ಶನಿವಾರ, ಸೆಪ್ಟೆಂಬರ್ 25, 2021
29 °C

ಲಿಂಗನಮಕ್ಕಿ ನೀರಿನ ಮಟ್ಟ ಹೆಚ್ಚಳ: ನೀರು ಹೊರ ಹರಿಸುವ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ನಾಡಿಗೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಲಿಂಗನಮಕ್ಕಿ ಜಲಾಶಯದಲ್ಲಿ ಸೋಮವಾರ 1815.50 ಅಡಿ ನೀರು ಸಂಗ್ರಹವಾಗಿದ್ದು, 1816 ಅಡಿ ತಲುಪುತ್ತಿದ್ದಂತೆ ನೀರಿನ ಒಳಹರಿವನ್ನು ಗಮನಿಸಿ ರೇಡಿಯಲ್ ಗೇಟಿನ ಮೂಲಕ ಹೆಚ್ಚುವರಿ ನೀರನ್ನು ಹೊರ ಹರಿಸುವ ಸಾಧ್ಯತೆಯಿದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.

ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ 1819 ಅಡಿ ಆಗಿದ್ದರೂ, ಅಣೆಕಟ್ಟೆಯ ಸುರಕ್ಷತೆ ಮತ್ತು ನದಿಪಾತ್ರದ ನಿವಾಸಿಗಳಿಗೆ ನೆರೆ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ ಹಂತ ಹಂತವಾಗಿ ನೀರು ಹರಿಸಲು ಕೆಪಿಸಿ ಆಡಳಿತ ನಿಯಮ ರೂಪಿಸಿದೆ.

‘ನಿಗಮ ನಿಯಮಾನುಸಾರ ಈಗಾಗಲೇ 3 ಸುತ್ತಿನ ಎಚ್ಚರಿಕೆಯ ಸಂದೇಶವನ್ನು ಲಿಂಗನಮಕ್ಕಿ ಕೆಳದಂಡೆಯ ನಿವಾಸಿಗಳಿಗೆ ನೀಡಲಾಗಿದೆ. ಜಲಾನಯನದ ಹಿನ್ನೀರ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನೀರಿನ ಒಳಹರಿವು ಹೆಚ್ಚುತ್ತಿದ್ದು, ಶೀಘ್ರವೇ ಲಿಂಗನಮಕ್ಕಿ ಅಣೆಕಟ್ಟೆಯಿಂದ ನೀರು ಹೊರ ಹರಿಸಲಾಗುವುದು’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.