ಶುಕ್ರವಾರ, ಮೇ 27, 2022
22 °C

ಅರಣ್ಯ ಇಲಾಖೆಯಿಂದ ‘ಕಪ್ಪೆ ಹಬ್ಬ’: ಮುಪ್ಪಾನೆ ನಿಸರ್ಗಧಾಮದಲ್ಲಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಳಿವಿನಂಚಿನಲ್ಲಿರುವ ಪಶ್ಚಿಮಘಟ್ಟದ ಕಪ್ಪೆ ಪ್ರಭೇದಗಳ ಉಳಿವಿಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಸಾಗರ ತಾಲ್ಲೂಕು ಮುಪ್ಪಾನೆ ನಿಸರ್ಗಧಾಮದಲ್ಲಿ ಡಿ.18, 19ರಂದು ‘ಕಪ್ಪೆ ಹಬ್ಬ’ ಆಯೋಜಿಸಿದೆ.

ಜೀವವೈವಿಧ್ಯತೆಯ ಪ್ರತೀಕ, ರೈತರ ಮಿತ್ರ ಕಪ್ಪೆಗಳ ಸಂತತಿ ಅಳಿವಿನತ್ತ ಸಾಗುತ್ತಿದೆ. ಅವುಗಳ ಸಂತತಿ ಸಂರಕ್ಷಿಸಲು ಹಮ್ಮಿಕೊಂಡಿರುವ ಹಬ್ಬದಲ್ಲಿ ಕಪ್ಪೆಗಳ ಕುರಿತು ವಿಚಾರ ಸಂಕಿರಣಗಳು, ಚರ್ಚೆ, ಸಾಕ್ಷ್ಯ ಚಿತ್ರಗಳ ಪ್ರದರ್ಶನ, ಸಂಶೋಧನಾ ಪ್ರಬಂಧಗಳ ಮಂಡನೆ, ವಿವಿಧ ಪ್ರಭೇದಗಳು, ಸಂತಾನೋತ್ಪತ್ತಿ ಪ್ರಕ್ರಿಯೆ, ಕಪ್ಪೆಗಳ ಕೂಗು ಕುರಿತು ಮಾಹಿತಿ ದೊರಕಲಿವೆ.

ಬಿದಿರು ಕಪ್ಪೆಗಳು, ಕರಾವಳಿ ಸ್ಕಿಟರಿಂಗ್, ಕಾಮನ್ ಟೋಡ್‌, ಬುಲ್ ಫ್ರಾಗ್ ಕುರಿತು ವಿಶೇಷ ಮಾಹಿತಿ ವಿನಿಮಯ ನಡೆಯಲಿದೆ. 

ಪಶ್ಚಿಮಘಟ್ಟಗಳಲ್ಲಿ ಕಂಡು ಬರುವ ಮಲಬಾರ್ ಟ್ರೀ ಟೋಡ್ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕು ಎಂದು ಪರಿಸರವಾದಿಗಳು, ತಜ್ಞರು ನಿರ್ಣಯ ಅಂಗೀಕರಿಸಲಿದ್ದಾರೆ. 18ರಂದು ಬೆಳಿಗ್ಗೆ 10ಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹಬ್ಬಕ್ಕೆ ಚಾಲನೆ ನೀಡುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು