ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸ್ವಾಮಿನಾಥನ್ ವರದಿ ಏಕೆ ಜಾರಿಗೆ ತರಲಿಲ್ಲ

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಪ್ರಶ್ನೆ
Last Updated 5 ಅಕ್ಟೋಬರ್ 2020, 15:50 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ರೈತರ ಹಿತಾಸಕ್ತಿಯಸ್ವಾಮಿನಾಥನ್ ವರದಿ ಇತ್ತು. ಆದರೆ, ವರದಿ ಏಕೆ ಜಾರಿಗೊಳಿಸಿಲ್ಲ ಎಂದುಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರ ಮೇಲೆಬಿಜೆಪಿ ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ.ಎಪಿಎಂಸಿ ಕಾಯ್ದೆತಿದ್ದುಪಡಿ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲೇ ಇತ್ತು. ಇದು ನಮ್ಮದಲ್ಲ ಎನ್ನುತ್ತಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲೇ ಇದ್ದ ಸ್ವಾಮಿನಾಥನ್ ವರದಿ ಕಡೆಗಣಿಸಿದ್ದಾರೆ.ಕಾಂಗ್ರೆಸ್‌ಟೀಕಿಸದಿದ್ದರೆ ಬಿಜೆಪಿಮುಖಂಡರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎಂದುಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಬಿಜೆಪಿ ಸರ್ಕಾರ ಸುಗ್ರಿವಾಜ್ಞೆ ಮೂಲಕ ಕೃಷಿ ಮಸೂದೆ ಜಾರಿಗೊಳಿಸಲು ಹೊರಟಿದೆ. ಇದು ರೈತರಿಗೆ ಮಾರಣಾಂತಿಕವಾಗಿದೆ.ಬಹುರಾಷ್ಟ್ರೀಯಕಂಪೆನಿಗಳ, ರಿಯಲ್ ಎಸ್ಟೇಟ್ ವ್ಯಾಪಾರಿಗಳ ಹಿತರಕ್ಷಣೆಗಾಗಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.ಬಿಜೆಪಿಯ ಅಂಗವೇ ಆಗಿರುವಕಿಸಾನ್ ಮಂಚ್ಕೃಷಿ ಮಸೂದೆ ಏಕೆ ವಿರೋಧಿಸುತ್ತಿದೆಎಂದು ಪ್ರಶ್ನಿಸಿದರು.

ರಾಜಕೀಯಕಾಣಗಳಿಗಾಗಿಕಾಂಗ್ರೆಸ್ ಮಸೂದೆ ವಿರೋಧಿಸುತ್ತಿಲ್ಲ. ಕೇಂದ್ರ ಮಂತ್ರಿ ಪದವಿ ತ್ಯಜಿಸಿದ ಶಿರೋಮಣಿ ಅಕಾಲಿದಳದ ಮುಖಂಡರುವಿರೋಧ ವ್ಯಕ್ತಪಡಿಸುತ್ತಿದೆ. ಎಪಿಎಂಸಿ ಕಾಯ್ದೆಯೂ ಇದಕ್ಕೆ ಹೊರತಾಗಿಲ್ಲ. ಕಾಯ್ದೆ ಜಾರಿಯಾದರೆ ಹೊರಗಿನ ವರ್ತಕರ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಆರಂಭದಲ್ಲಿ ರೈತರಿಗೆ ಆಸೆ ತೋರಿಸುವ ಖಾಸಗಿ ಕಂಪನಿಗಳು ನಂತರ ಎಪಿಎಂಸಿಯನ್ನೇ ಮುಚ್ಚುವಂತೆ ಮಾಡುತ್ತವೆ.ಅನಿವಾರ್ಯವಾಗಿ ರೈತ ಖಾಸಗಿಯವರನ್ನೇ ಅವಲಂಬಿಸಬೇಕಾದಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.

ರೈತರು ಈ ಕಾಯ್ದೆಗಳನ್ನು ಒಪ್ಪಬಾರದು. ಎಪಿಎಂಸಿ ವ್ಯವಸ್ಥೆಯ ಲೋಪಗಳನ್ನು ಬಳಸಿಕೊಂಡು ಮೋದಿ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ.ರೈತರನ್ನು ಗುಲಾಮಗಿರಿಗೆ ದೂಡುವ ಈ ಕಾಯ್ದೆ ಒಪ್ಪಲು ಸಾಧ್ಯವಿಲ್ಲ. ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದರು.

ಕಾಯ್ದೆಗಳ ಜಾರಿ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಠಮಾಡಿ ಧೋರಣೆ ಕೈಬಿಟ್ಟು ಈ ಪುನರ್ಪರಿಶೀಲಿಸಬೇಕು.ಕಾಂಗ್ರೆಸ್‌ ಟೀಕಿಸಿರುವ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪಅವರು ಹೇಳಿಕೆ ಹಂಪಡೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎನ್.ರಮೇಶ್, ಅನಿತಾ ಕುಮಾರಿ, ಎಚ್.ಸಿ.ಯೋಗೀಶ್, ಆರ್.ಸಿ.ನಾಯ್ಕ, ಕೆ.ರಂಗನಾಥ್, ರಂಗೇಗೌಡ, ಚಾಮರಾಜ್, ಶ್ಯಾಮ ಸುಂದರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT