ಆನವಟ್ಟಿ: ಇತಿಹಾಸ ಪ್ರಸಿದ್ಧ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಕೋಟಿಪುರ ಗ್ರಾಮದ ಕೈಟಬೇಶ್ವರ ದೇಗುಲ ಸೋರುತ್ತದೆ. ಪ್ರವಾಸಿ ತಾಣ ದೇಗುಲದ ದುರಸ್ತಿ ಕೆಲಸವನ್ನು ಅಧಿಕಾರಿಗಳು ಕೂಡಲೇ ಪ್ರಾರಂಭಿಸುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.

ಕೈಟಬೇಶ್ವರ ದೇಗುಲದ ಪಕ್ಕದಲ್ಲಿರುವ ಪಾರ್ವತಿ, ಸುಬ್ರಮಣ್ಯ ಸೇರಿ ಐದು ಚಿಕ್ಕ ಗುಡಿಗಳು ಇದ್ದು, ಅವುಗಳ ಚಾವಣಿ ಸೂರುತ್ತಿದೆ. ದೇವಸ್ಥಾನ ಸಮಿತಿಯವರು ಚಾವಣಿ ಮೇಲೆ ಟಾರ್ಪಲ್ ಹಾಕಿ ಗುಡಿಗಳು ಹಾಳಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಕೈಟಬೇಶ್ವರ ದೇಗುಲ ದೊಡ್ಡದಾಗಿದ್ದು, ಅದಕ್ಕೆ ಟಾರ್ಪಲ್ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ ಸಮಿತಿಯವರು.

ಐತಿಹಾಸಿಕ ಕೈಟಬೇಶ್ವರ ದೇಗುಲ ನೋಡಲು ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳು, ವಿದೇಶಿಯರು, ಸ್ಥಳೀಯ ಪ್ರವಾಸಿಗರು ಬರುತ್ತಾರೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂರುತ್ತಿರುವ ದೇಗುಲದ ದುರಸ್ತಿ ಜೊತೆಗೆ ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.

ಪ್ರತಿ ದಿನ ಭಕ್ತರು ದೇಗುಲಕ್ಕೆ ಬರುತ್ತಾರೆ. ನಿತ್ಯ ಪೂಜೆಗಳು ನಡೆಯುತ್ತವೆ. ಆದರೆ, ದೇಗುಲದ ಒಳಗೆ ಕೂರಲು ಸ್ಥಳವಿಲ್ಲದೆ, ಸೂರುತ್ತಿರುವ ಮಳೆ ನೀರಿನಲ್ಲೇ ನಿಂತು ಭಕ್ತಿ ಸಮಪರ್ಇಸುವ ಸ್ಥಿತಿ ಇಲ್ಲಿನ ಭಕ್ತರದ್ದು.

‘ಕೈಟಬೇಶ್ವರ ದೇಗುಲವನ್ನು ಪುರಾತತ್ವ ಇಲಾಖೆ ಕೂಡಲೇ ಜೀರ್ಣೋದ್ಧಾರ ಮಾಡುವ ಜೊತೆಗೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳ ವ್ಯವಸ್ಥೆ ಜೊತೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಸೇರಿ ಕೆಲ ಸಲವತ್ತುಗಳನ್ನು ಒದಗಿಸುವ ಅವಶ್ಯಕತೆ ಇದೆ. ಅಧಿಕಾರಿಗಳು ಕೂಡಲೇ ಕಾರ್ಯೋನ್ಮುಖವಾಗಬೇಕು’ ಎಂದು ಕೈಟಬೇಶ್ವರ ದೇವಸ್ಥಾನದ ಉಸ್ತುವಾರಿ ಸಮಿತಿ ಅಧ್ಯಕ್ಷ ಕೆ. ಶಿವಪ್ಪ, ಉಪಾಧ್ಯಕ್ಷ ಪದ್ಮಾನಾಭ ಶಟ್ಟಿ, ಕಾರ್ಯದರ್ಶಿ ಸೋಮ್ಯನಾಯ್ಕ, ಸದಸ್ಯರಾದ ವಿನಾಯಕ ಡೋಂಗ್ರೆ, ಕೇಶವ ನಾಯ್ಕ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.