ಮಂಗಳವಾರ, ಜನವರಿ 19, 2021
27 °C

ಈಶ್ವರಪ್ಪ ಗೋಗ್ರಾಸ ನೀಡುವಾಗ ದಿಢೀರ್ ತಿವಿದ ಹಸು: ಗಣ್ಯರು ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

bsy cow pooja

ಶಿವಮೊಗ್ಗ: ಬಿಜೆಪಿ ವಿಶೇಷ ಸಭೆಯ ಸಂದರ್ಭ ಗಣ್ಯರಿಗೆ ಹಸು ತಿವಿದ ಘಟನೆ ನಡೆದಿದೆ.

ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಿಸಿ ಸುರ್ಗೀವಾಜ್ಞೆ ಹೊರಡಿಸಿದ ಕಾರಣ ಬಿಜೆಪಿ ವಿಶೇಷ ಸಭೆಗೂ ಮೊದಲು ಗೋ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಳಿನ್‌ಕುಮಾರ್ ಕಟೀಲ್‌, ಡಿ.ಎಚ್‌.ಶಂಕರ ಮೂರ್ತಿ ಮತ್ತಿತರರು ಇದ್ದರು. ಈಶ್ವರಪ್ಪ ಅವರು ಗೋಗ್ರಾಸ ನೀಡುವಾಗ ಹಸು ದಿಢೀರ್ ತಿವಿದಿದೆ. ತಕ್ಷಣ ಸಚಿವರು ಹಿಂದೆ ಸರಿದ ಕಾರಣ ಕೂದಲೆಳೆ ಅಂತರದಲ್ಲಿ ಸಚಿವರು ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: 

ಜನ ಸಂದಣಿ ಕಂಡು ಆರಂಭದಿಂದಲೂ ಹಸು ಗಾಬರಿಯಾಗಿತ್ತು. ಸಚಿವರು ಗೋಗ್ರಸ ನೀಡಲು ಮುಂದಾದಾಗ ವಿಚಲಿತಗೊಂಡು ತಿವಿಯಲು ಮುಂದಾಗಿದೆ. ಅದಕ್ಕೆ ಕಟ್ಟಿದ ಗೂಟವೇ ಕಿತ್ತುಕೊಂಡು ಹೋಗಿದೆ. ಹಸುವಿನ ಮಾಲೀಕರು ಸ್ಥಳದಲ್ಲಿ ಇದ್ದ ಕಾರಣ ಭಾರಿ ಅನಾಹಿತ ತಪ್ಪಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು