ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ; ಪ್ರಯಾಣಿಕರ ಪರದಾಟ

Last Updated 11 ಡಿಸೆಂಬರ್ 2020, 12:34 IST
ಅಕ್ಷರ ಗಾತ್ರ

ಶಿವಮೊಗ್ಗ: ಸರ್ಕಾರಿ ನೌಕರರೆಂದು ಪರಿಗಣಿಸಲು ಅಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಶುಕ್ರವಾರ ಮುಷ್ಕರ ನಡೆಸಿದರು. ಕೆಲವು ಮಾರ್ಗಗಳಲ್ಲಿ ಬಸ್‌ಸೇವೆ ಎಂದಿನಂತೆ ಮುಂದುವರಿದಿತ್ತು. ಕೆಲವು ಮಾರ್ಗಗಳಲ್ಲಿ ವ್ಯತ್ಯಯವಾಗಿತ್ತು.

ಶಿವಮೊಗ್ಗ ಡಿಪೊದಿಂದ ಹೊರಡುವ 45 ಬಸ್‌ಗಳ ಸಂಚಾರ ನಿತ್ಯದಂತೆ ಇತ್ತು. ಬೇರೆ ಡಿಪೊಗಳಿಂದ ಬರಬೇಕಿದ್ದ ಮತ್ತು ಹೊರಡಬೇಕಿದ್ದ ಬಸ್‌ಗಳ ಸಂಖ್ಯೆ ವಿರಳವಾಗಿತ್ತು. ಕೆಲವು ಮಾರ್ಗಗಳಲ್ಲಿ ಬಸ್ ಸಂಚಾರ ವಿಳಂಬವಾಗಿ ಪ್ರಯಾಣಿಕರು ಪರದಾಡಿದರು. ಬದಲಿ ವಾಹನಗಳನ್ನು ಆಶ್ರಯಿಸಿದರು.

ಶಿವಮೊಗ್ಗ ಭದ್ರಾವತಿ ಮಧ್ಯೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಮಾಚೇನಹಳ್ಳಿ ಬಳಿ ಕೆಲವು ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದರು. ಇದರಿಂದ ಬಸ್‌ನ ಗಾಜುಗಳು ಒಡೆದವು. ಬಸ್‌ ನಿರ್ವಾಹಕ ಮತ್ತು ಚಾಲಕರು ಕೆಲ ಸಮಯ ಬಸ್‌ ಸಂಚಾರ ಸ್ಥಗಿತಗೊಳಿಸಿದರು. ಇದರಿಂದ ಪ್ರಯಾಣಿಕರು ಪರದಾಡಿದರು.

ಬಸ್‌ನಿಲ್ದಾಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಸಿಪಿಐ ರಾಘವೇಂದ್ರ ಕಾಂಡಿಕೆ,ತುಂಗಾ ನಗರ ಪಿಎಸ್‌ಐ ತಿರುಮೇಶ್ ಭೇಟಿ ನೀಡಿ, ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT