ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಣಿಕ ಸುಖಕ್ಕೆ ಬದುಕು ಸೀಮಿತವಾಗದಿರಲಿ

ಸೋಂದಾ ಜೈನ ಮಠದ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ
Last Updated 11 ಏಪ್ರಿಲ್ 2021, 5:26 IST
ಅಕ್ಷರ ಗಾತ್ರ

ಸಾಗರ: ಇಂದ್ರಿಯಗಳ ಕ್ಷಣಿಕ ಭೋಗದ ಸುಖಕ್ಕೆ ಬದುಕು ಸೀಮಿತವಾಗಬಾರದು ಎಂದು ಸೋಂದಾ ಜೈನ ಮಠದ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಗೆಕೆರೆ ಪಾರ್ಶ್ವನಾಥ ಬಸದಿಯಲ್ಲಿ ಪಾರ್ಶ್ವನಾಥ ದಿಗಂಬರ ಜೈನ್ ಸೇವಾ ಟ್ರಸ್ಟ್, ಜೈನ್ ಮಿಲನ್, ಸ್ವಸ್ತಿಶ್ರೀ ಮಹಿಳಾ ಸಮಾಜ ಶುಕ್ರವಾರ ಏರ್ಪಡಿಸಿದ್ದ ಕಲಿಕುಂಡ ಆರಾಧನೆ ಹಾಗೂ ಸಾಮೂಹಿಕ ವೃತೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಮೋಕ್ಷ ಕಲ್ಯಾಣದಂತಹ ಶಾಶ್ವತ ಸುಖದತ್ತ ಹೆಜ್ಜೆ ಹಾಕಿದಾಗ ಬದುಕು ಸಾರ್ಥಕಗೊಳ್ಳುತ್ತದೆ. ಭಕ್ತಿ ಮತ್ತು ಶ್ರದ್ಧೆಯಿಂದ ಧರ್ಮಾಚರಣೆ ಮಾರ್ಗದಲ್ಲಿ ನಡೆದಾಗ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ. ಸ್ವಕಲ್ಯಾಣದ ಜೊತೆಗೆ ಪರರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂಬ ಭಾವನೆ ಧರ್ಮ ಮಾರ್ಗದಲ್ಲಿ ನಡೆದಾಗ ಸಹಜವಾಗಿ ಮೂಡುತ್ತದೆ ಎಂದರು.

ಜನಪ್ರತಿನಿಧಿಗಳಾದ ನಾಗರಾಜ್ ಜೈನ್ ಮುತ್ತತ್ತಿ, ಪಾರ್ಶ್ವನಾಥ ಜೈನ್ ಕಟ್ಟಿನಕಾರು, ನಾಗರಾಜ್ ಜೈನ್ ಬೊಬ್ಬಿಗೆ, ಮೋಹನ್ ಕುಮಾರ್ ಜೈನ್ ಹಾಳಸಸಿ, ಪದ್ಮರಾಜ್ ಜೈನ್ ಚಪ್ಪರಮನೆ, ರವಿಕುಮಾರ್ ಜೈನ್ ಕುಣಜೆ, ಪ್ರೇಮಾ ಸಂತೋಷ್ ಜೈನ್ ಭಾನ್ಕುಳಿ, ಜ್ಯೋತಿ ಮೇಘರಾಜ್ ಜೈನ್ ಹೆಗ್ಗರಸೆ, ಸುಜಾತ ಗಿಡ್ಡಯ್ಯ ಜೈನ್ ಅವರನ್ನು ಅಭಿನಂದಿಸಲಾಯಿತು.

ಕೆ.ವಿ.ತೇಜಪ್ಪ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸುಭಾಶ್ಚಂದ್ರ ಜೈನ್, ಸವಿತಾ ದೇವರಾಜ್ ಜೈನ್, ಬಬಿತಾ ಪ್ರೇಮ್ ಕುಮಾರ್ ಜೈನ್, ಎಸ್.ವಿ. ಹಿತಕರ ಜೈನ್, ವೃಷಭರಾಜ್ ಇಂದ್ರ, ಎಂ.ಪಿ. ಲೋಕರಾಜ್ ಜೈನ್, ಮಂಜಯ್ಯ ಜೈನ್, ಶೋಭಾ ಜಟ್ಟಯ್ಯ ಜೈನ್, ನಾಗರತ್ನ ಪಾರ್ಶ್ವನಾಥ ಜೈನ್, ಎಸ್.ಡಿ.ಧನಪಾಲ್ ಜೈನ್
ಇದ್ದರು.

ದೇವರಾಜ್ ಕುಪ್ಪಡಿ ಸ್ವಾಗತಿಸಿದರು. ತೇಜಪ್ಪ ಜೈನ್ ವಂದಿಸಿದರು. ಯಶೋಧರ ಇಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT