ಶಿವಮೊಗ್ಗ: ವಾರಾಹಿ ಯೋಜನಾ ಪ್ರದೇಶ, ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದಾಗಿ ಕಾರ್ಗಲ್ನ ಲಿಂಗನಮಕ್ಕಿ ಜಲಾಶಯಕ್ಕೆ ಎರಡು ದಿನಗಳಲ್ಲಿ ಆರು ಅಡಿ ನೀರು ಬಂದಿದೆ. ಸಂಗ್ರಹ
ವಾಗಿದೆ. ಈ ಹಂಗಾಮಿನಲ್ಲಿ ಮೊದಲ ಬಾರಿಗೆ ಒಳಹರಿವಿನ ಪ್ರಮಾಣ 50,000 ಕ್ಯೂಸೆಕ್ ದಾಟಿದೆ.

ಲಿಂಗನಮಕ್ಕಿಯಲ್ಲಿ ಕಳೆದ ವರ್ಷ ಇದೇ ದಿನ 1,745.05 ಅಡಿ ಸಂಗ್ರಹ ಇತ್ತು. ಮಳೆ ಹೀಗೆಯೇ ಮುಂದುವರೆದಲ್ಲಿ ಜಲಾಶಯ ಈ ವರ್ಷ ಬೇಗನೇ ಭರ್ತಿ ಆಗುವ ವಿಶ್ಲಾಸವಿದೆವದೆ.

ಭದ್ರೆಗೂ ಒಳಹರಿವು ಹೆಚ್ಚಳ: ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಮಂಗಳವಾರ ಒಳಹರಿವಿನ ಪ್ರಮಾಣ 6,999 ಕ್ಯುಸೆಕ್ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ 118.11 ಅಡಿ ನೀರಿನ ಸಂಗ್ರಹ ಇತ್ತು. ಹಿಂದಿನ ವರ್ಷಕ್ಕಿಂತ 27 ಅಡಿಯಷ್ಟು ನೀರು ಈಗ ಜಲಾಶಯದಲ್ಲಿ ಶೇಖರಣೆಗೊಂಡಿದೆ.

ಮಾಸ್ತಿಕಟ್ಟೆ: 21.3 ಸೆಂ.ಮೀ ಮಳೆ ದಾಖಲು ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿಹೆಚ್ಚು 21.3 ಸೆಂ.ಮೀ ಹುಲಿಕಲ್ನಲ್ಲಿ 20.1 ಸೆಂ.ಮೀ ಮಾಣಿಯಲ್ಲಿ 16.4 ಯಡೂರಿನಲ್ಲಿ 15.6 ಚಕ್ರಾದಲ್ಲಿ 14.8 ಹಾಗೂ ಸಾವೆಹಕ್ಲು 12.7 ಸೆಂ.ಮೀ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 14.2 ಸೆಂ.ಮೀ ಮಳೆ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.