ಭಾನುವಾರ, ಏಪ್ರಿಲ್ 2, 2023
33 °C

ಶಿವಮೊಗ್ಗ: ಕಾದಾಟದಿಂದ ಗಾಯಗೊಂಡಿದ್ದ ಸಿಂಹಿಣಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಮಿಲನಕ್ಕೆ ಬಿಟ್ಟಿದ್ದ ಎರಡು ಸಿಂಹಗಳ ಮಧ್ಯೆ ನಡೆದ ಕಾದಾಟದಲ್ಲಿ ಗಾಯಗೊಂಡಿದ್ದ 11 ವರ್ಷದ ಸಿಂಹಿಣಿ ಮಾನ್ಯ ಮೃತಪಟ್ಟಿದೆ.

‘ಧಾಮದ ಯಶವಂತ ಮತ್ತು ಮಾನ್ಯಾ ಈಚೆಗೆ ಕಾದಾಡಿದ್ದವು. ಎರಡೂ ಸಿಂಹಗಳು ಗಾಯಗೊಂಡಿದ್ದವು. ಎರಡನ್ನೂ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಾನ್ಯಾ ಸೋಮವಾರ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು’ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಮುಕುಂದ್‌ ಚಂದ್‌ ಪ್ರತಿಕ್ರಿಯಿಸಿದರು.

ಸಿಂಹಿಣಿ ಮಾನ್ಯಾಳನ್ನು 2011ರಲ್ಲಿ ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ತರಲಾಗಿತ್ತು. ಮೈಸೂರು ಮೃಗಾಲಯದಿಂದ ಆರ್ಯ, ಮಾಲಿನಿ ಮತ್ತು ಮಾನ್ಯಾ ಇಲ್ಲಿಗೆ ಬಂದಿದ್ದವು. ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಮೂರು ಗಂಡು, ಮೂರು ಹೆಣ್ಣು ಸಿಂಹಗಳು ಇದ್ದವು. ಈಗ ಅವುಗಳ ಸಂಖ್ಯೆ 5ಕ್ಕೆ ಇಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು