ಕಾರ್ಗಲ್: ಈ ಶರಾವತಿ ಕಣಿವೆಯೇ ಹೀಗೆ. ಒಂದಕ್ಕಿಂತ ಇನ್ನೊಂದು ಭಿನ್ನ ಭಿನ್ನವಾದ ಬಗೆ. ಇದಕ್ಕಿಂತ ಅದು ಸುಂದರ, ಅದಕ್ಕಿಂತ ಇದು ಸೊಗಸು.. ಏನೆಲ್ಲಾ ಚೆಲುವನ್ನು ತನ್ನಲ್ಲಿ ಅಡಗಿಸಿಕೊಂಡಿರುವ, ಮೈ-ಮನಕ್ಕೆ ಮುದ ನೀಡುವ ಕಾನನದಲ್ಲಿ ಸೌಮ್ಯ ನಡಿಗೆಯಿಂದ ಬಳುಕುತ್ತಾ ಸಾಗುತ್ತಿರುವ ‘ಬಿಳಿನಾರಿ’ ಎನ್ನಬಹುದಾದ ವೈಯಾರಿಯೇ ‘ಮಾವಿನ ಗುಂಡಿ ಜಲಪಾತ’

ಇದು ವಿಶ್ವ ವಿಖ್ಯಾತ ಜೋಗ ಜಲಪಾತದ ಪಕ್ಕ ಪ್ರವಾಸಿಗರನ್ನು ಸೆಳೆಯುತ್ತಿರುವ ಮತ್ತೊಂದು ಜಲಪಾತದ ಪರಿಚಯ. ಪುಷ್ಯ ಮಳೆಯ ಅಬ್ಬರಕ್ಕೆ ಜೋಗ ಜಲಪಾತದಲ್ಲಿ ಜಲಧಾರೆ ಧುಮ್ಮಿಕ್ಕುತ್ತಾ ಪ್ರವಾಸಿಗರ ದಂಡನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದರೆ, ಜಲಪಾತದಿಂದ ಕೊಂಚ ದೂರದಲ್ಲಿರುವ ಮಾವಿನ ಗುಂಡಿ ಜಲಪಾತ ಅರ್ಭಟವಿಲ್ಲದೇ ಮೈದುಂಬಿಕೊಂಡು ಸೌಮ್ಯವಾಗಿ ಶರಾವತಿ ಕಣಿವೆಯೊಳಗೆ ಜಾರುತ್ತಿರುವ ವಿಸ್ಮಯಕರವಾದ ನೋಟ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.

ಈ ಮಾವಿನ ಗುಂಡಿ ಜಲಪಾತ ಜೋಗ ಜಲಪಾತಕ್ಕಿಂತ ತುಸು ಎತ್ತರ ಎಂದರೆ ತಪ್ಪಾಗಲಿಕ್ಕಿಲ್ಲವೇನೋ. ಉತ್ತರ ಕನ್ನಡ ಜಿಲ್ಲೆಯ ಮಾವಿನ ಗುಂಡಿ ಗ್ರಾಮದ ಸುತ್ತಮುತ್ತಲು ಸುರಿಯುವ ಮಳೆ ನೀರು ಒಂದೆಡೆ ಸೇರಿಕೊಂಡು ನದಿಯಂತೆ ಕಾನನ ಪಾದದಲ್ಲಿ ಹರಿದು ಬಂದು, ಒಮ್ಮೆಲೆ ಶರಾವತಿ ಕಣಿವೆಯ ಶಿಖರ ಪ್ರದೇಶದಿಂದ ನುಣುಪಾದ ಹೆಬ್ಬಂಡೆಗಳ ಮೇಲೆ ಬಳುಕುತ್ತಾ ನಲಿಯುತ್ತಾ ಬಿಳಿ ಹಾಲ್ನೊರೆಯನ್ನು ಚೆಲ್ಲುತ್ತದೆ.

ಹೀಗೆ, ಹಾಲ್ನೊರೆಯಂತೆ ಜಾರಿ ಬಂದು ಕಣಿವೆಯ ಆಳದಲ್ಲಿ ಶರಾವತಿ ನದಿಯೊಂದಿಗೆ ಲೀನವಾಗಿ ಅರಬ್ಬಿ ಸಮುದ್ರ ಸೇರುವ ಈ ಜಲಪಾತ, ಅಪ್ಪಟ ‘ಬಿಳಿನಾರಿ’ಯ ರೂಪದಲ್ಲಿ ಕಂಡು ಬರುವುದೇ ಇದರ ವಿಶೇಷ.

ಮಾವಿನ ಗುಂಡಿ ಜಲಪಾತವನ್ನು ಕೆಪ್ಪೆ ಜೋಗ ಜಲಪಾತ ಎಂದೂ ಕರೆಯುತ್ತಾರೆ. ಮತ್ತೆ ಕೆಲವರು ಗೇರುಸೊಪ್ಪ ಜಲಪಾತ ಎಂದು ಕರೆಯುವುದುಂಟು. ಜೋಗಕ್ಕೆ ಬರುವ ಪ್ರವಾಸಿಗರನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುತ್ತಿರುವ ಈ ಜಲಪಾತ ಮಳೆಗಾಲ ಮುಗಿಯುವವರೆಗೂ ಪ್ರವಾಸಿಗರ ಮನತಣಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಇಲ್ಲಿನ ಪ್ರವಾಸಿ ಗೈಡ್ ನಾಗರಾಜ್ ಕಾರ್ಗಲ್ ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.