ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್‌; ಇನ್ನೂ ಒಂದು ವಾರ ಉಚಿತ ಹಾಲು ವಿತರಣೆ

ಮೂರು ಜಿಲ್ಲೆಗಳ 70 ಸಾವಿರ ಬಡವರಿಗೆ ಅನುಕೂಲ
Last Updated 15 ಏಪ್ರಿಲ್ 2020, 13:54 IST
ಅಕ್ಷರ ಗಾತ್ರ

ಶಿವಮೊಗ್ಗ: ಲಾಕ್‌ಡೌನ್‌ ವಿಸ್ತರಣೆ ಆಗಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆದೇಶದ ಹಿನ್ನೆಲೆಯಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘ (ಶಿಮುಲ್) ಮೂರು ಜಿಲ್ಲೆಯ ಬಡವರಿಗೆ ನೀಡುತ್ತಿದ್ದ ಉಚಿತ ನಂದಿನಿ ಹಾಲಿನ ವಿತರಣೆಯನ್ನು ಏ.21ರ ವರೆಗೆ ಮುಂದುವರೆಸುತ್ತಿದೆ.

ರಾಜ್ಯ ಸರ್ಕಾರ ಬಡ ಜನರಿಗೆ ಏಪ್ರಿಲ್ 3ರಿಂದ ನಂದಿನಿ ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಮೂರು ಜಿಲ್ಲೆಗಳ 70 ಸಾವಿರ ಬಡವರಿಗೆ ಇದರಿಂದ ಅನುಕೂಲವಾಗಲಿದೆ. ಈ ವರೆಗೂ 9.10 ಲಕ್ಷ ಲೀಟರ್ ಹಾಲು ವಿತರಣೆ ಮಾಡಲಾಗಿದೆ.

ಸರ್ಕಾರದ ಹಿಂದಿನ ಆದೇಶದಂತೆ ಉಚಿತ ಹಾಲು ನೀಡುವ ಯೋಜನೆ ಏ.14 ರಂದು ಕೊನೆಗೊಳ್ಳಬೇಕಿತ್ತು. ಆದರೆ, ಲಾಕ್‌ಡೌನ್ ವಿಸ್ತರಣೆಯಿಂದಾಗಿ ಸರ್ಕಾರವು ಇನ್ನೂ ಒಂದು ವಾರ ಉಚಿತ ಹಾಲು ವಿತರಣೆಯನ್ನು ವಿಸ್ತರಿಸಿದೆ.

ಈ ಮೂರು ಜಿಲ್ಲೆಗಳಲ್ಲಿ 1,300 ಹಾಲು ಉತ್ಪಾದಕರ ಸಂಘಗಳಿಂದ ಶಿಮುಲ್ ಪ್ರತಿದಿನ ಸುಮಾರು 5.35 ಲಕ್ಷ ಲೀಟರ್ ಹಾಲು ಖರೀದಿಸುತ್ತದೆ. ಇದು ಸುಮಾರು 2 ಲಕ್ಷ ಲೀಟರ್ ಹಾಲನ್ನು ಹೋಟೆಲ್‌ಗಳಿಗೆ ಮಾರಾಟ ಮಾಡುತ್ತಿತ್ತು. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೋಟೆಲ್‌ಗಳನ್ನು ಮುಚ್ಚಿರುವುದರಿಂದ ಹಾಲು ಮಾರಾಟವಾಗುತ್ತಿಲ್ಲ. ಆದ್ದರಿಂದ ಏ.3 ರಿಂದ 70 ಸಾವಿರ ಲೀಟರ್ ಹಾಲಿನ ಪ್ಯಾಕೆಟ್‌ಗಳನ್ನು ಉಚಿತವಾಗಿ ಬಡವರಿಗೆ ವಿತರಿಸಲಾಗುತ್ತಿತ್ತು.

‘ಉಚಿತ ಹಾಲು ವಿತರಿಸಿ ಉಳಿದ ಹಾಲನ್ನು ಬೆಂಗಳೂರು ಡೈರಿಗೆ ಮತ್ತು ರಾಮನಗರ, ಚನ್ನರಾಯಪಟ್ಟಣ (ಹಾಸನ ಜಿಲ್ಲೆ), ಧಾರವಾಡದ ಹಾಲಿನ ಪುಡಿ ಘಟಕಗಳಿಗೆ ಸರಬರಾಜು ಮಾಡಲಾಗುವುದು. ಅಲ್ಲದೆ ಕೇರಳಕ್ಕೆ 40 ಸಾವಿರ ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ’ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಲೋಹಿತೇಶ್ವರ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಲೀಟರ್ ಹಾಲು ವಿತರಿಸಲಾಗುತ್ತಿದ್ದು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ತಲಾ 20 ಸಾವಿರ ಲೀಟರ್ ಹಾಲಿನ ಪ್ಯಾಕೆಟ್ ವಿತರಿಸಲಾಗುತ್ತದೆ. ಪ್ರತಿ ಅರ್ಧ ಲೀಟರ್ ಹಾಲಿಗೆ ₹ 19 ಬೆಲೆ ಇದೆ. ಈ ಮೊತ್ತವನ್ನು ಸರ್ಕಾರ ಶಿಮುಲ್‌ಗೆ ಮರುಪಾವತಿ ಮಾಡುತ್ತದೆ.

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಆಯಾ ವಿಧಾನ ಸಭಾ ಕ್ಷೇತ್ರಗಳಲ್ಲಿನ ಬಡವರಿಗೆ ಹಾಲಿನ ಪ್ಯಾಕೆಟ್‌ಗಳನ್ನು ವಿತರಿಸುವ ಜವಾಬ್ದಾರಿಯನ್ನು ಶಾಸಕರು ನಿರ್ವಹಿಸುತ್ತಿದ್ದಾರೆ.

ಮುನ್ನೆಚ್ಚರಿಕಾ ಕ್ರಮಕೈಗೊಂಡ ಶಿಮುಲ್: ಹಾಲು ಉತ್ಪಾದಕರಲ್ಲಿ ಶಿಮುಲ್ ಕೋವಿಡ್-19 ಕುರಿತು ಜಾಗೃತಿ ಮೂಡಿಸಿದ್ದು, ಎಲ್ಲ ಮುನ್ನೆಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ.

ಶಿಮುಲ್ ಹಾಲು ಉತ್ಪಾದಕರು ಬೆಳಿಗ್ಗೆ ಮತ್ತು ಸಂಜೆ ಸಿಬ್ಬಂದಿಗೆ ಹಾಲು ನೀಡುವಾಗ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅವರು ಹಾಲನ್ನು ಹಸ್ತಾಂತರಿಸುವಾಗ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT