ಸೋಮವಾರ, ನವೆಂಬರ್ 30, 2020
26 °C

ಸಚಿವ ಈಶ್ವರಪ್ಪ ಲಕ್‌ನಿಂದ ಎತ್ತರಕ್ಕೆ ಬೆಳೆದಿದ್ದಾರೆ: ಬೇಳೂರು ಗೋಪಾಲಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಸಚಿವ ಈಶ್ವರಪ್ಪ ಅವರು ಲಕ್‌ನಿಂದಾಗಿ ಅಷ್ಟು ಎತ್ತರಕ್ಕೆ ಬೆಳೆದಿದ್ದಾರೆ ವಿನಾ ಯಾವ ಹೋರಾಟ, ಜನ ಬೆಂಬಲದಿಂದ ಬೆಳೆಯಲಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಕುಟುಕಿದರು.
ನಗರದಲ್ಲಿ ಅವರು ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು.

ಭಾರಿ ಹುಮ್ಮಸ್ಸಿನಿಂದ ಕಟ್ಟಿದ ರಾಯಣ್ಣ ಬ್ರಿಗೇಡ್ ಗತಿ ಏನಾಗಿದೆ? ಈಗ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಹೆಚ್ಚುಕಮ್ಮಿಯಾದರೆ ಸಹಾಯಕ್ಕೆ ಇರಲಿ ಎನ್ನುವುದು ಅವರ ಉದ್ದೇಶ ಎಂದು ಛೇಡಿಸಿದರು.

‘ನಾನು ಅವರ ಅನುಯಾಯಿ. ವಿಧಾನಸಭಾ ಚುನಾವಣೆ ಸಮಯದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ವಿಚಾರಿಸಲು ಹೋಗಿದ್ದೆ. ಈಶ್ವರಪ್ಪ ಹಾಗೂ ಅವರ ಮಗನನ್ನು ಬಿಟ್ಟರೆ ರಾಜಕೀಯದಲ್ಲಿ ಬೇರೆಯವರಿಗೆ ಅನುಕೂಲ ಮಾಡಿಕೊಡುವ ಮನಸ್ಸು ಅವರಿಗೆ ಇಲ್ಲ ಎನ್ನುವುದು ಮನವರಿಕೆಯಾಯಿತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು