ಭಾನುವಾರ, ಜೂನ್ 26, 2022
22 °C

ಕಾಂಗ್ರೆಸ್‌ ಬೆಂಲಿಸಿದರೆ ತಾಲಿಬಾನ್ ಅಧಿಕಾರಕ್ಕೆ: ಪ್ರತಾಪ್‌ ಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಾಪ್‌ ಸಿಂಹ

ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದರೆ ತಾಲಿಬಾನ್ ಸರ್ಕಾರ ಅಧಿಕಾರ ಪಡೆದಂತೆ. ಈ ಕುರಿತು ಜನರು ಜಾಗೃತರಾಗಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಎಚ್ಚರಿಸಿದರು.

ಮೃತ ಹರ್ಷ ಮನೆಗೆ ಭೇಟಿ ನೀಡಿ, ₹5 ಲಕ್ಷ  ಆರ್ಥಿಕ ನೆರವು ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಹಿಂದೂ ಯುವಕ ಹರ್ಷ ಹತ್ಯೆಯಾಗಿ ಒಂದು ವಾರ ಕಳೆಯುತ್ತಾ ಬಂದರೂ ಕಾಂಗ್ರೆಸ್ ನಾಯಕರಿಗೆ ಆತನ ಕುಟುಂಬಕ್ಕೆ ಸಾಂತ್ವನ ಹೇಳಲು ಸಮಯ ಇಲ್ಲವಾಗಿದೆ. ರಾಜಕೀಯಕ್ಕಾಗಿ ಒಂದು ವರ್ಗವನ್ನು ಓಲೈಸುವ ಕಾಂಗ್ರೆಸ್ ನಡವಳಿಕೆ ಖಂಡನೀಯ. ಎಲ್ಲವನ್ನೂ ಹಿಂದೂ ಸಮಾಜ ಗಮನಿಸುತ್ತಿದೆ. ಕೋಮುವಾದಕ್ಕೆ ಬಲಿಯಾದ ಹಿಂದೂ ಯುವಕರ ರಕ್ಷಣೆಗೆ ಬೆಂಗಾವಲಾಗಿ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.

‘ಹರ್ಷ ಸೇರಿ ರಾಜ್ಯದಲ್ಲಿ ನಡೆದ ಹಿಂದೂ ಯುವಕರ ಹತ್ಯೆ ಧರ್ಮಾಂಧತೆಯ ಹತ್ಯೆ. ಹಂತಕರ ವಿರುದ್ಧ ಸರ್ಕಾರ ಕೋಕಾ ಕಾಯ್ದೆ ಪ್ರಯೋಗಿಸಬೇಕು. ಹಂತಕರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಬಿಗಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು