ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಕ್ಕೆ ದಾಳಿ ಇಡುವ ಪ್ರಾಣಿ– ಪಕ್ಷಿ ಓಡಿಸಲು ಹೊಸ ಸಾಧನ

ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ
Last Updated 13 ಸೆಪ್ಟೆಂಬರ್ 2021, 6:38 IST
ಅಕ್ಷರ ಗಾತ್ರ

ಹೊಸನಗರ: ಕಾಡು ಪ್ರಾಣಿ– ಪಕ್ಷಿಗಳ ಉಪಟಳದಿಂದ ಬೇಸತ್ತ ರೈತ ಸಮುದಾಯಕ್ಕೆ ಸುಳ್ಯ ಕೆವಿಜಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳ ತಂಡ ಹೊಸ ಯಂತ್ರವೊಂದನ್ನು ಸಿದ್ಧಪಡಿಸಿದೆ.

ಕಾಡು ಪ್ರಾಣಿಗಳಿಂದ ಕೃಷಿಕರಿಗಾಗುತ್ತಿರುವ ಸಂಕಷ್ಟವನ್ನು ಮನಗಂಡ ವಿದ್ಯಾರ್ಥಿಗಳಾದ ಹೊಸನಗರದ ದರ್ಶನ್ ಹಾಗೂ ಸ್ನೇಹಿತರಾದ ಅನಿಲ್‌ಕುಮಾರ್ ನಾಯ್ಕ್, ಅಬ್ದುಲ್ ವಾಹಿದ್ ಅವರು ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಯಂತ್ರವು ಸರಳವಾಗಿದ್ದು, ತೋಟಗದ್ದೆ ಪ್ರದೇಶದಲ್ಲಿ ಸ್ಥಾಪಿಸಬೇಕು. ಯಂತ್ರವು ಸುತ್ತಲೂ 360 ಡಿಗ್ರಿಯಲ್ಲಿ ಪ್ರಾಣಿ ಪಕ್ಷಿಗಳ ಬರುವಿಕೆಯನ್ನು ಗುರುತಿಸುತ್ತದೆ. ಪ್ರಾಕ್ಸಿಮಿಟಿ ಸೆನ್ಸರ್ ಮೂಲಕ ಬಂದ ಸಿಗ್ನಲ್ ಅನ್ನು ಆರ್ಡಿನೋ ಬೋರ್ಡ್‌ ರವಾನಿಸುತ್ತದೆ. ಆರ್ಡಿನೋ ಬೋರ್ಡ್‌ನಲ್ಲಿ ಬಂದ ಸಿಗ್ನಲ್ ಧ್ವನಿ ಮತ್ತು ಬೆಳಕಿನ ಉಪಕರಣಗಳಿಗೆ ಆದೇಶ ಕೊಡುವ ಮೂಲಕ ಶಬ್ದ ಉಂಟಾಗುತ್ತದೆ. ಜೊತೆಗೆ ಟಾರ್ಚ್ ಬೆಳಕಿನಂತೆ ಬೆಳಕು ಹಾಯುತ್ತದೆ. ಇದರಿಂದ ತೋಟಕ್ಕೆ ಬಂದ ಪ್ರಾಣಿ– ಪಕ್ಷಿಗಳಿಗೆ ಮನುಷ್ಯನ ಇರುವಿಕೆಯ ಅನುಭವ ಉಂಟಾಗುತ್ತದೆ. ಇದರಿಂದ ಸಹಜವಾಗಿಯೇ ಬೆದರುವ ಪ್ರಾಣಿ– ಪಕ್ಷಿಗಳು ತೋಟದಿಂದ ಕಾಲ್ಕೀಳುತ್ತವೆ. ಈ ಆವಿಷ್ಕಾರದಿಂದ ಕಾಡು ಪ್ರಾಣಿಗಳಿಂದ ಬಸವಳಿದ ರೈತ ಕುಟುಂಬಕ್ಕೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವಿದ್ಯಾರ್ಥಿಗಳ ತಂಡದ್ದು.

ಮೆಕ್ಯಾನಿಕಲ್ ತಾಂತ್ರಿಕ ವಿಭಾಗದ ಪ್ರೊ.ಬಿ.ಬಿ.ಅಭಿಜ್ಞ ಅವರ ಮಾರ್ಗದರ್ಶನ, ವಿಭಾಗದ ಮುಖ್ಯಸ್ಥ ಡಾ.ಕೆ.ಎಸ್.ಉಮಾಶಂಕರ್ ಮತ್ತು ಯೋಜನಾ ಸಂಯೋಜಕ ಪ್ರೊ.ಕೆ.ಬಿ.ಯುವರಾಜ್ ಅವರ ಸಲಹೆ ಸೂಚನೆಯೊಂದಿಗೆ ಈ ಯಂತ್ರವನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT