ಗುರುವಾರ , ಆಗಸ್ಟ್ 18, 2022
25 °C

ಯಾವ ಧರ್ಮವೂ ಕೊಲೆ ಬೆಂಬಲಿಸೊಲ್ಲ: ವಿನಯ್‌ ಗುರೂಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಯಾವ ಧರ್ಮವೂ ಕೊಲೆಯನ್ನು ಬೆಂಬಲಿಸುವುದಿಲ್ಲ. ಕೊಲೆಗಡುಕರು ಮಸೀದಿ ಮತ್ತು ದೇವಸ್ಥಾನಗಳಿಗೆ ಬರಲು ಸಮಾಜ ಬಿಡಬಾರದು. ಆಗ ಮಾತ್ರ ಅಮಾಯಕರ ಪ್ರಾಣ ಹಾನಿಯಾಗುವುದನ್ನು ತಪ್ಪಿಸಬಹುದು’ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಅಭಿಪ್ರಾಯಪಟ್ಟರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್‌ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಲು ಬಂದಾಗ ಅಕ್ಕಪಕ್ಕದವರು ಏನು ಮಾಡುತ್ತಿದ್ದರು? ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ‌ಲೂ ಅಕ್ಕಪಕ್ಕದ ಅಂಗಡಿಯವರು ಸುಮ್ಮನಿದ್ದರು. ಇದೇನಾ ನಮ್ಮ ಜವಾಬ್ದಾರಿ’ ಎಂದು ಪ್ರಶ್ನಿಸಿದರು.

‘ಧರ್ಮದ ಮೂಲ ತಿರುಳು ಮನುಷ್ಯತ್ವ ಹಾಗೂ ಎಲ್ಲರನ್ನೂ ಪ್ರೀತಿಸುವುದು. ಕೊಲೆ ಮಾಡುವ ಮನೋಭಾವದವರು ನೈಜ ಮುಸ್ಲಿಂ ಅಥವಾ ಹಿಂದೂ ಆಗಲು ಸಾಧ್ಯವಿಲ್ಲ. ಎಲ್ಲ ಧರ್ಮಗಳಲ್ಲೂ ಶಾಂತಿ ಮಂತ್ರವನ್ನೇ ಹೇಳಲಾಗಿದೆ. ಭಾಷೆ ಬೇರೆಯಾಗಿದ್ದರೂ ಭಾವ ಒಂದೇ. ನಾವು ಆ ಭಾವ ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

‘ಕೃಷ್ಣ ಆಯುಧ ಎತ್ತಿದ್ದು ಅಮಾಯಕರ ಮೇಲೆ ಅಲ್ಲ; ರಾಕ್ಷಸರ ಮೇಲೆ. ಯಾವ ಧರ್ಮವೂ ಅಮಾಯಕರನ್ನು ಕೊಲೆ ಮಾಡಿ ಎಂದು ಹೇಳಿಲ್ಲ. ಆದರೆ, ಇಂತಹ ಘಟನೆಗಳು ಸಂಭವಿಸಿದಾಗ ಸಮಾಜ ಪ್ರತಿಕ್ರಿಯಿಸಬೇಕು. ಇಂತಹ ಕೃತ್ಯ ನಡೆಸುವವರಿಗೆ ಮೊದಲು ನಾಲ್ಕು ಸರಿಯಾಗಿ ತದುಕಬೇಕು. ಆಮೇಲೆ ಪೊಲೀಸರಿಗೆ ಒಪ್ಪಿಸಬೇಕು. ತಪ್ಪು ಮಾಡಿದವರ ವಿರುದ್ಧ ಸರ್ಕಾರ ನಿಷ್ಠುರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

***

ಕೊಲೆ ಮಾಡಿ ಸಾಮಾಜಿಕ ಜಾಲ ತಾಣಕ್ಕೆ ಹಾಕಿದರೆ ಇನ್ನೊಂದು ಹತ್ತು ಜನರಿಗೆ ಪ್ರಚೋದನೆ ಆಗುತ್ತದೆ. ಸರ್ಕಾರ ಕಠಿಣ ಕ್ರಮ ಕೈಗೊಂಡರೆ ಮಾತ್ರ ಇನ್ನೊಬ್ಬರು ಆ ಕೆಲಸ ಮಾಡೊಲ್ಲ.
-ವಿನಯ್‌ ಗುರೂಜಿ, ಗೌರಿಗದ್ದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು