ಶಿವಮೊಗ್ಗ: ‘ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ನಾಥೂರಾಮ್ ಗೋಡ್ಸೆ ಒಮ್ಮೆ ಕೊಂದಿದ್ದಾನೆ. ಗೋಡ್ಸೆಯನ್ನೇ ಆರಾಧಿಸುವ ಬಿಜೆಪಿಯವರು ನರೇಗಾ (ಮಹಾತ್ಮ ಗಾಂಧಿ ರಾಷ್ಡ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ರದ್ದುಗೊಳಿಸಿ, ಅದರ ಹೆಸರನ್ನೂ ಬದಲಾಯಿಸಿ ಈಗ ಮತ್ತೊಮ್ಮೆ ಅವರನ್ನು ಕೊಲೆ ಮಾಡಿದ್ದಾರೆ. ಬಿಜೆಪಿಯವರೇ ನಿಜವಾದ ದೇಶದ್ರೋಹಿಗಳು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರಗಳು, ತಜ್ಞರು ಹಾಗೂ ಗ್ರಾಮೀಣರ ಅಭಿಪ್ರಾಯ ಪಡೆಯದೇ ಸದ್ದಿಲ್ಲದೇ ಕೇಂದ್ರ ಸರ್ಕಾರ ನರೇಗಾ ರದ್ದುಗೊಳಿಸಿದೆ. ಯೋಜನೆ ಗ್ರಾಮೀಣ ಕೂಲಿಕಾರ್ಮಿಕರ ಬದುಕಿಗೆ ಆಧಾರವಾಗಿತ್ತು. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲೂ ಯೋಜನೆ ಬಡವರು ಬದುಕಲು ನೆರವಾಗಿತ್ತು. ಈಗ ಅವರ ಅನ್ನದ ದಾರಿಯನ್ನೇ ಕಿತ್ತುಕೊಳ್ಳಲಾಗಿದೆ ಎಂದು ದೂರಿದರು.

ಇಲ್ಲಿಯವರೆಗೂ ಗ್ರಾಮ ಪಂಚಾಯ್ತಿಗಳು ಗ್ರಾಮ ಅಧಿಕಾರದ ಕೇಂದ್ರವಾಗಿದ್ದವು. ಪಂಚಾಯ್ತಿ ಅಧ್ಯಕ್ಷರು ಮುಖ್ಯಮಂತ್ರಿ, ಉಳಿದ ಸದಸ್ಯರು ಸಚಿವರ ರೀತಿ ಕೆಲಸ ಮಾಡುತ್ತಾ ತಮ್ಮ ಗ್ರಾಮದ ಅಭಿವೃದ್ಧಿಗೆ ನರೇಗಾ ಅಡಿ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದರು. ಈಗ ಕೇಂದ್ರ ಸರ್ಕಾರ ಬರೀ ನರೇಗಾ ಹೆಸರು ಬದಲಿಸಿಲ್ಲ. ಅದನ್ನು ಸಂಪೂರ್ಣ ರದ್ದುಗೊಳಿಸಿ ವಿಬಿ–ಜಿ ರಾಮ್ ಜೀ ಹೆಸರಿನ ಹೊಸ ಯೋಜನೆ ರೂಪಿಸಿದೆ.

ನರೇಗಾ ರದ್ದುಪಡಿಸಿ ಕೇಂದ್ರ ಸರ್ಕಾರ ಗ್ರಾಮೀಣರ ಉದ್ಯೋಗದ ಹಕ್ಕು ಕಸಿದುಕೊಂಡಿದೆ. ವಿಬಿ–ಜಿ ರಾಮ್ಜೀ ಅಡಿ ಗ್ರಾಮ ಪಂಚಾಯ್ತಿ ಕಾಮಗಾರಿಗಳು ಕೇಂದ್ರ ಸರ್ಕಾರದ ನಿರ್ಧಾರವನ್ನು ಅವಲಂಬಿಸಲಿವೆ. ಕೇಂದ್ರ ಅಧಿಸೂಚಿಸಿದ ಗ್ರಾಮಗಳ ಕಾರ್ಮಿಕರು ಮಾತ್ರ ಇದರ ಲಾಭ ಪಡೆಯುತ್ತಾರೆ. ಅವರಿಗೆ ಎಲ್ಲಾ ದಿನಗಳಲ್ಲೂ ಕೆಲಸ ಸಿಗುವುದಿಲ್ಲ. ಅಲ್ಲದೆ ಕೂಲಿಗೆ ಖಾತರಿ ಇಲ್ಲ ಎಂದು ಹೇಳಿದರು.

ಇಲ್ಲಿಯವರೆಗೂ ನರೇಗಾ ಅಡಿ ಕೂಲಿ ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಈಗ ರಾಜ್ಯ ಸರ್ಕಾರಕ್ಕೆ ಶೇ 40ರಷ್ಟು ಪಾಲು ನಿಗದಿಪಡಿಸಲಾಗಿದೆ. ರಾಜ್ಯದ ಪಾಲಿನ ತೆರಿಗೆಯ ಹಣವನ್ನೇ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರೂ ಅದು ಮಲತಾಯಿ ಧೋರಣೆ ತೋರುತ್ತಿದೆ. ಈಗ ಇದು ಮತ್ತೊಂದು ಹೊರೆಯಾಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರುಗಳಾದ ಆರ್. ಪ್ರಸನ್ನಕುಮಾರ್, ಚೇತನ್ಗೌಡ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಶರತ್ ಮರಿಯಪ್ಪ, ರವಿಕುಮಾರ್, ದೇವಿಕುಮಾರ್, ಕಲಗೋಡು ರತ್ನಾಕರ್, ಸೈಯದ್ ವಾಹಿದ್ ಅಡ್ಡು, ಚಿನ್ನಪ್ಪ, ಯು. ಶಿವಾನಂದ್ ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ ವಿಬಿ–ಜಿ ರಾಮ್ ಜೀ ಕಾಯ್ದೆ ಸಂಪೂರ್ಣ ರದ್ದುಗೊಳಿಸಿ ಮೊದಲಿನಂತೆಯೇ ನರೇಗಾ ಮರುಸ್ಥಾಪಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯ್ತಿ ಹಂತದದಿಂದಲೇ ಹೋರಾಟ ಕೈಗೆತ್ತಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

-ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ

ಅಧಿಕಾರ ಗ್ರಾಮದಿಂದ ದೆಹಲಿಗೆ ವರ್ಗಾವಣೆ

‘ವಿಬಿ–ಜಿ ರಾಮ್ಜೀ ಯೋಜನೆಯಲ್ಲಿ ಅನುದಾನ ಕಡಿತ ಮಾಡುವ ಜೊತೆಗೆ ಗ್ರಾಮ ಪಂಚಾಯ್ತಿಗೆ ಇದ್ದ ಅಧಿಕಾರವನ್ನು ದೆಹಲಿಗೆ (ಕೇಂದ್ರಕ್ಕೆ) ವರ್ಗಾಯಿಸಿಕೊಂಡಿದ್ದಾರೆ. ಆ ಮೂಲಕ ಗ್ರಾಮ ಪಂಚಾಯ್ತಿಗಳನ್ನು ಸಂಪೂರ್ಣ ಸಾಯಿಸಿ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನಾಶ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಏನೇನೋ ನೆಪ ಹೇಳಿ ಬಿಜೆಪಿ ಮುಖಂಡರು ಅದಕ್ಕೆ ಕೋಮು ಬಣ್ಣ ಬಳಿಯಲು ನೋಡುತ್ತಾರೆ. ನಮ್ಮ (ಕಾಂಗ್ರೆಸ್) ಹೃದಯದಲ್ಲಿ ರಾಮನೂ ಇದ್ದಾನೆ. ಕೃಷ್ಣನೂ ಇದ್ದಾನೆ. ಜೊತೆಗೆ ರಹೀಮನೂ ಇದ್ದಾನೆ. ದ್ವೇಷಕ್ಕೂ ಒಂದು ಮಿತಿ ಇದೆ. ಬಿಜೆಪಿಯವರ ದ್ವೇಷಕ್ಕೆ ಕೊನೆಯೇ ಇಲ್ಲ. ಹೀಗಾಗಿಯೇ ಸಮಯ ಸಿಕ್ಕಾಗಲೆಲ್ಲ ಮಹಾತ್ಮ ಗಾಂಧೀಜಿ ವಿರುದ್ಧ ದಾಳಿ ಮಾಡುತ್ತಾ ಮತ್ತೆ ಮತ್ತೆ ಅವರನ್ನು ಕೊಲ್ಲುತ್ತಿದ್ದಾರೆ’ ಎಂದು ಮಧು ಬಂಗಾರಪ್ಪ ಹೇಳಿದರು.

ಹೊಳೆಹೊನ್ನೂರು ಶಿಕಾರಿಪುರ ಆನವಟ್ಟಿ; ಶೀಘ್ರ ಇಂದಿರಾ ಕ್ಯಾಂಟಿನ್

ಶಿವಮೊಗ್ಗ: ಬಡವರು ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಆಹಾರ ಕೊಟ್ಟು ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಕಾಂಗ್ರೆಸ್ ಸರ್ಕಾರದ ಆಶಯ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದ ವಿದ್ಯಾನಗರ ಮತ್ತು ಗುತ್ಯಪ್ಪ ಕಾಲೊನಿಯಲ್ಲಿ ನಿರ್ಮಿಸಿರುವ ನೂತನ ಇಂದಿರಾ ಕ್ಯಾಂಟಿನ್ ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ 12 ಇಂದಿರಾ ಕ್ಯಾಂಟಿನ್ಗಳು ಕಾರ್ಯನಿರ್ವಹಿಸುತ್ತಿವೆ. ಹೊಳೆಹೊನ್ನೂರು ಶಿಕಾರಿಪುರ ಮತ್ತು ಆನವಟ್ಟಿಯಲ್ಲಿ ಶೀಘ್ರ ಆರಂಭಕ್ಕೆ ದಿನ ನಿಗದಿಪಡಿಸಲಾಗುವುದು. ಅಲ್ಲದೇ ಮತ್ತಷ್ಟು ಹೊಸ ಇಂದಿರಾ ಕ್ಯಾಂಟಿನ್ಗಳನ್ನು ಆರಂಭಿಸಲು ಸರ್ಕಾರ ಮಂಜೂರಾತಿ ನೀಡಿದ್ದು ನಗರದ ಜನನಿಬಿಡ ಸ್ಥಳಗಳಲ್ಲಿ ಜಾಗ ಗುರುತಿಸಿ ಹಂತಹಂತವಾಗಿ ಆರಂಭಿಸಲಾಗುವುದು ಎಂದರು. ಇದೇ ವೇಳೆ ಮಧು ಬಂಗಾರಪ್ಪ ಬಿ.ಎಚ್.ರಸ್ತೆಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಸೈನ್ಸ್ ಕಾಲೇಜು ಬಳಿ ಕೆ.ಪಿ.ಎಸ್. ಶಾಲೆ ಆರಂಭಿಸಲು ಅಗತ್ಯವಿರುವ ಭೂಮಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.