ಹೊಳೆಹೊನ್ನೂರು: ಪೋಷಕರು ಶಾಲೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗದ ಶಾಂತಲಾ ಸ್ಪೈರೋ ಕ್ಯಾಸ್ಟ್ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ ಚಂದ್ರಶೇಖರ್ ಡಿ.ಎಸ್. ತಿಳಿಸಿದರು.

ಜಾವಳ್ಳಿಯ ಜ್ಞಾನದೀಪದ ಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯ. ಶಾಲೆ ಮತ್ತು ಪೋಷಕರ ನಡುವಿನ ಬಾಂಧವ್ಯ ಹೆಚ್ಚಿಸುವ ಉದ್ದೇಶದಿಂದ ಪೋಷಕರ ದಿನವನ್ನ ಆಚರಿಸಲಾಗುತ್ತದೆ. ಪೋಷಕರು ನಿರಂತರವಾಗಿ ಯೋಗ, ಧ್ಯಾನ, ಕ್ರೀಡೆಗಳ ಜೊತೆಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಪ್ರತಿಯೊಬ್ಬರೂ ಸಮನ್ವಯ ಜೀವನವನ್ನು ನಡೆಸಲು ಪ್ರತಿ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ವಿದ್ಯಾರ್ಥಿಗಳಿಗೆ ಶಾಲೆ ಜೀವನಕ್ಕೆ ತಳಹದಿಯನ್ನು ರೂಪಿಸಿಕೊಡುತ್ತದೆ ಎಂದು ತಿಳಿಸಿದರು.

ಜ್ಞಾನದೀಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಲ್ವಾನೆ ಪ್ರಕಾಶ್ ಮಾತನಾಡಿ, ‘ಶಾಲೆ 26 ವರ್ಷಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಬದ್ಧತೆಯನ್ನು ಮೆರೆಯುತ್ತಿದೆ. ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಕೈಮರ, ಗುರುಪುರಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆದಿದ್ದೇವೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಸೇರಿಸಬೇಕು. ಈ ಮೂಲಕ ಪೋಷಕರ ದಿನಾಚರಣೆ ಸಂಪನ್ನವಾಗುತ್ತದೆ ಎಂದು ಭಾವಿಸುತ್ತೇವೆ’ ಎಂದರು.

ಉಪನಿರ್ದೇಶಕ ಮಂಜುನಾಥ್ ಎಸ್.ಆರ್. ಶಾಲೆಯ ಪ್ರಾಚಾರ್ಯ ಶ್ರೀಕಾಂತ್ ಎಂ.ಹೆಗಡೆ, ತುಂಗಾ ನಗರ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್ ಕೆ.ಟಿ, ಅರವಿಂದ ಫೌಂಡೇಶನ್ ಫಾರ್ ಎಜುಕೇಶನ್ ಟ್ರಸ್ಟಿ ಅನಿಮಿಷ ರಸ್ತಾಪುರ ಮಠ, ಎಸ್ಡಿಎಂಸಿ ಕಮಿಟಿ ಸದಸ್ಯೆ ಕಮಲ ಲಕ್ಷ್ಮೀದೇವಿ, ಕಾರ್ಯದರ್ಶಿ ನೀಲಕಂಠ ಮೂರ್ತಿ ಬಿ.ಎಲ್, ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಎಸ್ ರಾವ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಂ. ಜೋಸೆಫ್ ಹಾಗೂ ಸೀನಿಯರ್ ಸೆಕೆಂಡರಿ ಸ್ಕೂಲಿನ ಹಿರಿಯ ಉಪ ಪ್ರಾಂಶುಪಾಲ ಜಿ. ಜೋಸೆಫ್, ವಾಣಿ ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.