ಸೋಮವಾರ, ಏಪ್ರಿಲ್ 12, 2021
30 °C

‘ಪಟಗುಪ್ಪ ಸೇತುವೆ ಬಿಜೆಪಿ ಸಾಧನೆಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ‘ಪಟಗುಪ್ಪ ಸೇತುವೆ ನಿರ್ಮಾಣ ಬಿಜೆಪಿಯ ಸಾಧನೆಯಲ್ಲ. ಅದು ಈ ಭಾಗದ ಜನರ ಆಶೋತ್ತರದ ಪ್ರತೀಕವಾಗಿ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವನ್ನು ಪಕ್ಷದ ಸಾಧನೆ ಎಂದು ಬಿಜೆಪಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಖಂಡನೀಯ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟಗುಪ್ಪ ಸೇತುವೆ ಮಾರ್ಗವಾಗಿ ಸಾಗರ ಬಲು ಹತ್ತಿರವಾದ ಮಾರ್ಗವಾಗಿದೆ. ಸುತ್ತಲೂ ಮುಳುಗಡೆ ಹಿನ್ನೀರು ತುಂಬಿರುವ ಕಾರಣ ಈ ಭಾಗದ ಜನರು ಸುತ್ತುವರಿದು ಹೋಗಬೇಕಾಗಿತ್ತು. ಜನರು ಸೇತುವೆ ಬೇಡಿಕೆ ಇಟ್ಟಿದ್ದರು. 2007ರಲ್ಲಿ ಜೆಡಿಎಸ್ ಸರ್ಕಾರ ಇದ್ದಾಗ ರೇವಣ್ಣ ಅವರ ಅವದಿಯಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಭಾಗದ ಮುಖಂಡರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಲ್ಲಿ ಬೇಡಿಕೆ ಇಟ್ಟು ಹೋರಾಟ ನಡೆಸಿದ್ದರ ಫಲವಾಗಿ ಇಂದು ಸೇತುವೆಯ ಕನಸು ನನಸಾಗಿದೆ’ ಎಂದರು.

‘ಸೇತುವೆ ನಿರ್ಮಾಣವನ್ನು ಇಲ್ಲಿನ ಶಾಸಕರು ಮತ್ತು ಬಿಜೆಪಿ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಜನರನ್ನು ಹಾದಿ ತಪ್ಪಿಸುತ್ತಿದೆ. ಇದು ಸರಿಯಲ್ಲ’ ಎಂದು ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು