ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪಿಎಂ ಪುನಃಶ್ಚೇತನಕ್ಕೆ ಯತ್ನಕ್ಕೆ ಶ್ಲಾಘನೆ

Last Updated 9 ಜೂನ್ 2020, 10:12 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿಯ ಎಂಪಿಎಂ ಕಾರ್ಖಾನೆ ಮರು ಜೀವ ಕೊಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿರ್ಧಾರಕ್ಕೆ ಎಂಪಿಎಂ ಬ್ಯಾಕ್ ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಸ್ವಾಗತಿಸಿವೆ.

ಕಾರ್ಖಾನೆಮತ್ತೆ ಆರಂಭವಾಗಬೇಕು. 112 ಬ್ಯಾಕ್ಲಾಗ್ ಉದ್ಯೋಗಿಗಳಿಗೆ ಭದ್ರತೆ ಸಿಗಬೇಕು.ಎಂಪಿಎಂಗೆ ತನ್ನದೇ ಇತಿಹಾಸವಿದೆ. ಸಾವಿರಾರು ಎಕರೆ ಜಮೀನು ಇದೆ. ಕಚ್ಚಾಸಾಮಗ್ರಿ ಲಭ್ಯವಿದೆ.ನೀರು, ವಿದ್ಯುತ್ ಸಂಪರ್ಕವಿದೆ. ನುರಿತ ಕಾರ್ಮಿಕರುಇದ್ದಾರೆ. ಇದರ ಪುನಃಶ್ಚೇತನವಾದರೆ ಮತ್ತೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಸಂಘಟನೆಯ ಮುಖಂಡರಾದಬಿ.ಎನ್.ರಾಜು, ವಿ.ಎನ್.ದೊಡ್ಡಯ್ಯ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೆಲವು ದಿನಗಳ ಹಿಂದೆ ಮಾನವ ಹಕ್ಕುಗಳ ಹೋರಾಟ ಸಮಿತಿ ಎಂಪಿಎಂ ಅಭಿವೃದ್ಧಿಗೆ ಒತ್ತಾಯಿಸಿತ್ತು. ಇದರ ಫಲವಾಗಿ ಮುಖ್ಯಮಂತ್ರಿಗಳುಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರಸಹ ಸಭೆಯಲ್ಲಿಒತ್ತಾಯಿಸಿದ್ದಾರೆ. ಇಬ್ಬರಿಗೂ ಸಮಿತಿ ಅಭಿನಂದನೆಸಲ್ಲಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಸಂಘಟನೆಯಅರುಣ್, ಚಂದ್ರಶೇಖರ, ನಾಗರಾಜ್, ಲತಾ, ಮಂಜುಳಾ, ಪಾರ್ವತಮ್ಮ, ರಾಜಪ್ಪ, ನರಸಿಂಹಪ್ಪ, ಸೆಲ್ವಕುಮಾರ್, ಶಿವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT