ಶಿವಮೊಗ್ಗ: ತ್ರಿಪುರದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ದೌರ್ಜನ್ಯ, ಪ್ರವಾದಿ ಮೊಹಮದರ ಅವಹೇಳನ ಖಂಡಿಸಿ ಸುನ್ನಿ ಜಮಾಯತ್ ವುಲ್‌ಉಲೇಮಾ ಕಮಿಟಿ ಸದಸ್ಯರು ಸೋಮವಾರ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ತ್ರಿಪುರ ರಾಜಧಾನಿ ಅಗರ್ತಲಾದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ. ಮನುಷ್ಯನ ಸ್ವಾರ್ಥದಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಧರ್ಮಾಂಧರು ಅತಿಕ್ರಮಣ ಮಾಡುತ್ತಿದ್ದಾರೆ. ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಮಾರಕ. ಧರ್ಮದ ಹೆಸರಲ್ಲಿ ಕೆಲವು ಕಿಡಿಗೇಡಿಗಳು ಜಾತಿಯ ವಿಷಬೀಜ ಬಿತ್ತಿ ಸಾಮರಸ್ಯ ಹಾಳುಮಾಡುತ್ತಿದ್ದಾರೆ ಎಂದು ದೂರಿದರು.

ಶಿಯಾ ಪಂಗಡಕ್ಕೆ ಸೇರಿದ ವ್ಯಕ್ತಿಯೊಬ್ಬ ಪ್ರವಾದಿ ಹಜರತ್ ಮೊಹಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವರು. ಸುನ್ನಿ ಪಂಗಡದ ಮುಸ್ಲಿಂ ಸಮುದಾಯ ನಿಂದಿಸಿರುವರು. ಪ್ರವಾದಿಗಳ ಬಗ್ಗೆ ಏನೂ ಅರಿಯದೆ ಹೀಗೆ ಮಾತನಾಡುವುದು ತಪ್ಪು. ಕುರಾನ್ ಬಗ್ಗೆ ಅನಗತ್ಯ ಮಾತು ಸರಿಯಲ್ಲ. ಅಪವಿತ್ರ ಪುಸ್ತಕ ಮುದ್ರಿಸಿ ಕೋಮು ಭಾವನೆ ಕೆರಳಿಸಿರುವುದು ಹೀನಾಯ ಕೃತ್ಯ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಅವಹೇಳನ ಮಾಡಿದ ರಿಜ್ವೆ ಮತ್ತಿತರ ಕಿಡಿಗೇಡಿಗಳನ್ನು ಬಂಧಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಕಮಿಟಿಯ ಮುಖಂಡರಾದ ಇಕ್ಬಾಲ್ ಹಬೀಬ್ ಸೇಟ್, ಅಬ್ದುಲ್ ಸತ್ತಾರ್, ಏಜಾಜ್ ಪಾಷಾ, ಅಫ್ತಾಬ್ ಫರ್ವೀಜ್, ಮುನಾವರ್ ಪಾಷಾ, ಅನ್ಸರ್ ಅಹಮದ್, ಮುಫ್ತಿ ಅಕಿಲ್ ರಾಜ್, ಖಾಜಿ ಅಶ್ರಫ್ ಸಾಬ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.