ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಆಗ್ರಹ

Last Updated 6 ಮಾರ್ಚ್ 2020, 10:24 IST
ಅಕ್ಷರ ಗಾತ್ರ

ಶಿವಮೊಗ್ಗ: ಆರು ತಿಂಗಳ ಹಿಂದೆಸುರಿದ ಭಾರಿಮಳೆಗೆ ಕುಸಿದಿದ್ದಮನೆಗಳಿಗೆ ಪರಿಹಾರ ನೀಡದೇ ವಿಳಂಬಮಾಡಲಾಗುತ್ತಿದೆಎಂದು ಆರೋಪಿಸಿ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಿರಾಶ್ರಿತರು ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಮುಂದೆಪ್ರತಿಭಟನೆ ನಡೆಸಿದರು.

ಮಳೆ, ಪ್ರವಾಹದಿಂದಹಲವುಜನರು ಪ್ರಾಣ ಕಳೆದುಕೊಂಡಿದ್ದರು.ಸಾವಿರರು ಜನರು ನಿರಾಶ್ರಿತರಾಗಿದ್ದರು. ಆಸ್ತಿ, ಮನೆ, ಜಾನುವಾರು,ನಿತ್ಯ ಬಳಸುವ ಸಾಮಗ್ರಿಕಳೆದುಕೊಂಡಿದ್ದರು. ಇದುವರೆಗೆ ಭಾಗಶಃ ಬಿದ್ದಂತಹ ಮನೆಗಳಿಗೆ ಪಾಲಿಕೆ ತಲಾ ₨ 10 ಸಾವಿರ ಹಾಗೂ ಸಂಪೂರ್ಣ ಬಿದ್ದ ಮನೆಗಳಿಗೆ ₨ 25 ಸಾವಿರ ತಾತ್ಕಾಲಿಕ ಪರಿಹಾರ ನೀಡಿದೆ.1526 ನಿರಾಶ್ರಿತರು ಅಲ್ಪ ಮೊತ್ತದ ಪರಿಹಾರ ಪಡೆದಿದ್ದಾರೆ.ಹೆಚ್ಚಿನ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತ್ರಸ್ತರನ್ನು ಭೇಟಿಮಾಡಿದಾಗ ಸಂಪೂರ್ಣ ಮನೆ ಕಳೆದುಕೊಂಡನಿರಾಶ್ರಿತರಿಗೆ₨ 5 ಲಕ್ಷನೀಡುವ ಭರವಸೆ ನೀಡಿದ್ದರು. ಯಾವುದೇದಾಖಲೆ, ಪರಿಚಯ ಪತ್ರ, ಖಾತೆಇಲ್ಲದ ಮನೆಗಳಿಗೂ ₨ 5 ಲಕ್ಷ ನೀಡುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೆಸುಮಾರು 824 ಸಂತ್ರಸ್ತರಿಗೆ ತಲಾ ₨1 ಲಕ್ಷ ಜಮೆ ಮಾಡಲಾಗಿದೆ.ಬಾಕಿ ₨ 4 ಲಕ್ಷ ನೀಡಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ನಿರಾಶ್ರಿತರು ಪರಿಹಾರಕ್ಕಾಗಿ ನಿತ್ಯವೂ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ಮೂಲ ದಾಖಲೆಗಳು ಇಲ್ಲ ಎನ್ನುತ್ತಿದ್ದಾರೆ.ಮುಖ್ಯಮಂತ್ರಿ ನೀಡಿದ ಭರವಸೆಗೂ ಬೆಲೆ ಇಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್‌.ಸಿ.ಯೋಗೀಶ್,ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್‌.ರಮೇಶ್, ಪಾಲಿಕೆ ಸದಸ್ಯರಾದ ಬಿ.ಎ.ರಮೇಶ್‌ ಹೆಗ್ಡೆ,ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಆರ್.ಸಿ ನಾಯಕ್, ಶಾಮೀರ್‌ ಖಾನ್, ಮೆಹಕ್ ಷರೀಫ್, ರೇಖಾ ರಂಗನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಂಡಿತ್ವಿ.ವಿಶ್ವನಾಥ್,ನಾಗರಾಜ್, ಮುಖಂಡರಾದ ಎಲ್.ರಾಮೇಗೌಡ, ರವಿಕುಮಾರ್, ಎಚ್.ಎಂ. ಮಧು, ಕೆ.ರಂಗನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT