ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಮಂಗಳವಾರ ಆದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ 35ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದಾಸವರೇಣ್ಯ ಪುರಂದರದಾಸರ ಕೀರ್ತನೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಿತು
ಪುರಂದರ ದಾಸರ ಹುಟ್ಟೂರು ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ರಯತ್ನ ನಡೆಸಬೇಕು. ಹುಟ್ಟೂರು ಪ್ರಸ್ತಾಪಿಸಿದ ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ಹೇಳಿಕೆಯನ್ನು ಮೊದಲು ಲಘುವಾಗಿ ಪರಿಗಣಿಸಿದ್ದೆ. ಆದರೆ ಅದೀಗ ನಿಜವಾಗಿದೆ.
– ಆರಗ ಜ್ಞಾನೇಂದ್ರ, ಶಾಸಕ
ಧರ್ಮ ಜಾತಿ ಆಧರಿಸಿ ಸಮಾಜದ ಪ್ರಗತಿ ಸಾಧ್ಯವಿಲ್ಲ. ರಾಜಕಾರಣಿಗಳಿಂದ ಎಲ್ಲರನ್ನೂ ಒಗ್ಗೂಡಿಸಲು ಆಗುವುದಿಲ್ಲ. ಮನುಷ್ಯ ಸಂಬಂಧ ಗಟ್ಟಿಗೊಳಿಸಲು ದಾರ್ಶನಿಕರು ಧರ್ಮಗುರುಗಳಿಂದ ಸಾಧ್ಯ. ಪುರಂದರದಾಸರ ಕೀರ್ತನೆಗೆ ಅಂತಹ ಶಕ್ತಿ ಇದೆ.
– ಕಿಮ್ಮನೆ ರತ್ನಾಕರ, ಮಾಜಿ ಸಚಿವ
ಮಾಜಿ ಶಾಸಕ ಪಟಮಕ್ಕಿ ರತ್ನಾಕರ ಹಿರಿಯ ಸಹಕಾರಿ ನಾಯಕ ಬಿ.ಎಸ್.ವಿಶ್ವನಾಥನ್ ಪುರಂದರರ ಹುಟ್ಟೂರು ಬಗ್ಗೆ ಅನೇಕ ಸಂಗತಿಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅದರಿಂದ ಶೋಧನಾ ಸಮಿತಿ ರಚಿಸಲು ಸಾಧ್ಯವಾಯಿತು. ಪುರಂದರರ ಹುಟ್ಟೂರು ಬಗ್ಗೆ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಬೇಕು.