ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತವೇರಿ ಗೋಪಾಲಗೌಡರ ಸ್ಮರಣೆ 28ರಿಂದ

Published : 26 ಸೆಪ್ಟೆಂಬರ್ 2024, 15:37 IST
Last Updated : 26 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಸಾಗರ: ಹಾ.ಮ.ಭಟ್ಟ ನೆನಪಿನ ಹಬ್ಬದ ಅಂಗವಾಗಿ ತುಮರಿಯ ಶಾಂತವೇರಿ ಗೋಪಾಲಗೌಡ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಮರಿಯ ಅಭಿವ್ಯಕ್ತಿ ಬಳಗದ ಸಹಯೋಗದಲ್ಲಿ ಸೆ. 28ರಿಂದ 30ರವರೆಗೆ ‘ಶಾಂತವೇರಿಯ ಅಶಾಂತ ಸಂತ’ ವಿಚಾರ ಸಂಕಿರಣ ಆಯೋಜಿಸಲಾಗಿದೆ.

28ರಂದು ಬೆಳಿಗ್ಗೆ 11ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ವಿಚಾರಸಂಕಿರಣ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಾರ್ತಾ ಪತ್ರ ಬಿಡುಗಡೆ ಮಾಡುವರು. ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್.ಜಯಂತ್ ತಿಳಿಸಿದರು.

ಮಧ್ಯಾಹ್ನ 2 ಕ್ಕೆ ‘ಶಾಂತವೇರಿ ಗೋಪಾಲಗೌಡ: ಸಮಗ್ರ ವ್ಯಕ್ತಿ ಚಿತ್ರ’ ಕುರಿತ ಗೋಷ್ಠಿ ನಡೆಯಲಿದೆ. 3 ಕ್ಕೆ ‘ಕನ್ನಡ ಸಾಹಿತ್ಯದಲ್ಲಿ ಸಮಾಜವಾದಿ ನೆಲೆಗಳು’ ಕುರಿತ ಗೋಷ್ಠಿಯಲ್ಲಿ ಕಾಳೇಗೌಡ ನಾಗವಾರ, ರಾಜೇಂದ್ರ ಚೆನ್ನ, ಸಬಿತಾ ಬನ್ನಾಡಿ ಭಾಗವಹಿಸಲಿದ್ದಾರೆ. 4. 40 ಕ್ಕೆ ‘ಕೋಣಂದೂರು ಲಿಂಗಪ್ಪನವರ ಸಂದರ್ಶನದ ದೃಶ್ಯ ಭಾಗವನ್ನು ಶಶಿ ಸಂಪಳ್ಳಿ ಪ್ರಸ್ತುತ ಪಡಿಸಲಿದ್ದಾರೆ ಎಂದರು.

ಸಂಜೆ 7 ಕ್ಕೆ ತುಮರಿಯ ಕಿನ್ನರಮೇಳ ತಂಡದಿಂದ ‘ಬಾಯ್ಮಾತಿನ ಕತೆಗಳು ಮತ್ತು ಸೋಶಿಯಲ್ ಡೈಲಮಾ’ ನಾಟಕ (ಪರಿಕಲ್ಪನೆ : ಮಲ್ಲಿಕಾ ತ್ರಿಶೂರ್ ಮತ್ತು ಕೆ.ಜಿ.ಕೃಷ್ಣಮೂರ್ತಿ) ಪ್ರದರ್ಶನಗೊಳ್ಳಲಿದೆ.

29 ರ ಬೆಳಿಗ್ಗೆ 9.30ಕ್ಕೆ ‘ಅವಸ್ಥೆ ಮತ್ತಿತರ ಕಾದಂಬರಿಗಳು ಒಂದು ಅವಲೋಕನ’ ಕುರಿತು ಸಿರಾಜ್ ಅಹಮದ್, ‘ಕನ್ನಡ ಕಾವ್ಯದಲ್ಲಿ ಗೋಪಾಲಗೌಡರು’ ಕುರಿತು ಶುಭಾ ಮರವಂತೆ, 11 ಕ್ಕೆ ‘ ನನ್ನ ಗ್ರಹಿಕೆಯಲ್ಲಿ ಗೋಪಾಲಗೌಡ’ ಕುರಿತು ಮಹಿಮಾ ಪಟೇಲ್ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ 12 ಕ್ಕೆ ನಡೆಯಲಿರುವ ನೆನಪಿನ ಚಿತ್ರಗಳು ಗೋಷ್ಠಿಯಲ್ಲಿ ಕಡಿದಾಳ್ ದಯಾನಂದ್, ವೈ.ನ.ಜಗದೀಶ್, 2.30 ಕ್ಕೆ ನಡೆಯಲಿರುವ ‘ಸದನದಲ್ಲಿ ಗೋಪಾಲಗೌಡರ ಭಾಷಣಗಳ: ಯುವ ರಾಜಕಾರಣಿಗಳಿಗೆ ಮಾದರಿ’ ಕುರಿತು ಎಲ್.ಹನುಮಂತಯ್ಯ, ರವೀಂದ್ರ ಭಟ್ಟ ಮಾತನಾಡಲಿದ್ದಾರೆ. 5 ಕ್ಕೆ ಗೋಪಾಲಗೌಡರ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

ಸಂಜೆ 7 ಕ್ಕೆ ಶೋಭಿತಾ ತೀರ್ಥಹಳ್ಳಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, 8 ಕ್ಕೆ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯಿಂದ ‘ಸರಸತಿ ಯಾಗಲೊಲ್ಲೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

30 ರ ಬೆಳಿಗ್ಗೆ 9.30ಕ್ಕೆ ‘ಸುಧಾರಣಾ ಹೋರಾಟಗಳು ಮತ್ತು ರಾಜಕೀಯ ಸ್ಥಿತ್ಯಂತರ’ ಕುರಿತು ಸಿದ್ದನಗೌಡ ಪಾಟೀಲ, ಯಮುನಾ ಗಾಂವ್ಕರ್, ‘ಕಾಗೋಡು ಸತ್ಯಾಗ್ರಹದ ಸುತ್ತಮುತ್ತ’ ಕುರಿತ ಗೋಷ್ಠಿಯಲ್ಲಿ ಕಾಗೋಡು ತಿಮ್ಮಪ್ಪ, ಜಿ.ವಿ.ಆನಂದಮೂರ್ತಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸಮಾರೋಪ ಭಾಷಣ ಮಾಡಲಿದ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸಂಜೆ 7 ಕ್ಕೆ ಪಾಂಡವಪುರದ ಚಾನೆಲ್ ಥೇಟರ್ಸ್ ನ ಅಕ್ಷತಾ ಪಾಂಡವಪುರ ಅಭಿನಯಿಸುವ ‘ಅಡುಗೆ ಮಾತು’, ರಂಗ ಪರ್ಯಟನ ತಂಡದಿಂದ ‘ಬಹುಮುಖಿ’ (ನಿರ್ದೇಶನ : ಗಣಪತಿ ಬಿ. ಹಿತ್ಲಕೈ) ನಾಟಕದ ಪ್ರದರ್ಶನವಿದೆ ಎಂದು ತಿಳಿಸಿದರು. ಅಭಿವ್ಯಕ್ತಿ ಬಳಗದ ಎಚ್.ಎಂ.ರಾಘವೇಂದ್ರ, ಅರುಣ್ ಕುಮಾರ್ ಗಡಿಕಟ್ಟೆ, ಗಣೇಶ್ ಹಲ್ಕೆರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT