ಪ್ರಜಾವಾಣಿ ವಾರ್ತೆ

ಹೊಸನಗರ: ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಿಸಲು ಜಿಲ್ಲಾಧಿಕಾರಿ ಮಾಡಿರುವ ಪ್ರಸ್ತಾವನೆಯಲ್ಲಿ ಹೊಸದೇನೂ ಇಲ್ಲ. ಸಮಿತಿಗೆ ಪ್ರಾದೇಶಿಕ ಆಯುಕ್ತ ಕೇಡರ್ ಅಧಿಕಾರಿಯನ್ನು ನೇಮಿಸಬೇಕು ಮತ್ತು ಅವರಿಗೆ ಅಧಿಕಾರ ಚಲಾಯಿಸುವ ಸ್ವಾತಂತ್ರ್ಯ ನೀಡಬೇಕು ಎಂದು ನಗರ ಹೋಬಳಿ ನಾಗರಿಕರ ಹೋರಾಟ ವೇದಿಕೆ ಸಂಚಾಲಕ ವಿ.ಜಿ. ಶ್ರೀಕರ್ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಂತ್ರಸ್ತರ ಸಮಾಲೋಚನಾ ಸಭೆಯಲ್ಲಿ ಮೇಲಿನ ನಿರ್ಣಯ ಕೈಗೊಳ್ಳಲಾಗಿದೆ.

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳು 5 ದಶಕಗಳು ಕಳೆದರೂ ಜೀವಂತವಾಗಿವೆ. ಚಕ್ರಾ, ಸಾವೇಹಕ್ಲು, ವಾರಾಹಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ. ಜಿಲ್ಲಾಧಿಕಾರಿ ಅವರಿಗೆ ಇಡೀ ಜಿಲ್ಲೆಯನ್ನು ನಿಭಾಯಿಸುವ ಜತೆಗೆ ಈ ಬಗ್ಗೆಯೂ ಗಮನ ನೀಡುವುದು ಕಷ್ಟ ಸಾಧ್ಯ. ಮುಳುಗಡೆ, ಪುನರ್ವಸತಿ, ಪರಿಹಾರ, ಕುಟುಂಬಕ್ಕೊಂದು ಉದ್ಯೋಗ ಸೇರಿ ಜಟಿಲ ಸಮಸ್ಯೆಗಳಿವೆ. ಕಂದಾಯ, ಅರಣ್ಯ, ಕೆಪಿಸಿ ಇಲಾಖೆ ನಡುವೆ ಸಮನ್ವಯತೆ ಸಾಧಿಸಿಕೊಂಡು ಸರ್ಕಾರದ ಮಟ್ಟದಲ್ಲಿ ನೇರವಾಗಿ ವ್ಯವಹರಿಸುವಂತೆ ಉನ್ನತ ಅಧಿಕಾರಿಯನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿರ್ಲಕ್ಷ್ಯ ಬೇಡ: ಸಿ.ಎಂ. ನೇತೃತ್ವದ ಸಭೆಯಲ್ಲಿ ಕೇವಲ ಶರಾವತಿ
ಮುಳುಗಡೆ ಸಂತ್ರಸ್ತರ ವಿಚಾರವನ್ನು ಸೇರಿಸಿ ಪ್ರತ್ಯೇಕ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಚಕ್ರಾ, ಸಾವೇಹಕ್ಲು, ವಾರಾಹಿ ಮುಳುಗಡೆ ಸಂತ್ರಸ್ತರು ಎಲ್ಲಿಗೆ ಹೋಗಬೇಕು. ಇಲ್ಲಿಯ ಭೂ ಹಕ್ಕು, ಅರಣ್ಯ ಹಕ್ಕು ಪುನರ್ವಸತಿ ಸಮಸ್ಯೆಯನ್ನು ಯಾರು ಬಗೆಹರಿಸಬೇಕು ಎಂದು ಅವರು ಪ್ರಶ್ನಿಸಿದರು.

ಹೋರಾಟಕ್ಕೆ ನೀತಿ ಸಂಹಿತೆ ಇಲ್ಲ: ಸಾಮಾಜಿಕ ಹೋರಾಟಗಾರ ತೀ.ನಾ. ಶ್ರೀನಿವಾಸ್ ಮಾತನಾಡಿ, ‘ನಮ್ಮ ಅಸ್ತಿತ್ವದ ಬುಡಕ್ಕೆ ಬೆಂಕಿ ಬಿದ್ದಿರುವಾಗ ನೀತಿ ಸಂಹಿತೆ ಕಟ್ಟಿಕೊಂಡು ಏನಾಗಬೇಕು. ಸಮಸ್ಯೆಯಿಂದ ಹೊರಬರಲು, ಅಧಿಕಾರಿಗಳಿಗೆ ಚಳಿ ಬಿಡಿಸಲು, ಸರ್ಕಾರದ ಗಮನಕ್ಕೆ
ತರುವ ವಿಚಾರದಲ್ಲಿ ನೀತಿ ಸಂಹಿತೆ ಎಂದು ಕುಳಿತರೆ ಆಗುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆಗುಂಬೆ ಭಾಗದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಹಕ್ಕುಪತ್ರ ನೀಡಲಾಗಿದೆ. ಅಂದರೆ ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ನಾವೂ ನಕ್ಸಲ್ವಾದಿಗಳಾಗಬೇಕಾ? ಇಲ್ಲ ಪ್ರತಿ ಊರಿಗೆ ನಕ್ಸಲರು ಬರಬೇಕಾ? ರಸ್ತೆ ತಡೆ, ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದರೆ ಮಾತ್ರ ಸರ್ಕಾರ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳುತ್ತದಾ? ಕೂಡಲೇ
ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆಗೆ ಸ್ಪಂದಿಸಲಿ’ ಎಂದು ಆಗ್ರಹಿಸಿದರು.

ಮತ್ತೆ 15 ದಿನದ ಗಡುವು: ‘ನಮ್ಮ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಗೆ ಇಳಿಯುವುದಾಗಿ ವೇದಿಕೆಯಿಂದ ಜಿಲ್ಲಾಧಿಕಾರಿಗೆ ಗಡುವು ನೀಡಲಾಗಿತ್ತು. ಇದೀಗ ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತಿ ಕಾರಣ ಇನ್ನೂ 15 ದಿನ ಪ್ರತಿಭಟನೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಿದರು.

ರೈತ ಮುಖಂಡ ಜಿ.ವಿ. ರವೀಂದ್ರ, ಎಪಿಎಂಸಿ ಸದಸ್ಯ ಕಣ್ಕಿ ಮಹೇಶ್, ಪ್ರಮುಖರಾದ ಸತೀಶ ಪಟೇಲ್, ನಗರ ನಿತಿನ್ ಮಳಲಿ ರಾಜೇಶ್, ಎಸ್.ಎಂ. ಹರೀಶ್, ಜಾಯ್ ಪ್ರಕಾಶ ಡಿಸೋಜ, ಜೂಜ್ ಡಿಸೋಜ, ಅಪ್ಪು ಆಚಾರ್, ಶ್ರೀಧರ ಆಚಾರ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಾಕ್ಸ್...

ಬಿಜೆಪಿ, ಕಾಂಗ್ರೆಸ್ ಮುಖಂಡರ ಮಾತಿನ ಚಕಮಕಿ

ಸಮಸ್ಯೆ ಪರಿಹಾರ ಸಂಬಂಧ ಪ್ರತಿಭಟನೆ ಹೇಗೆ ನಡೆಸಬೇಕು ಎಂಬ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಮುಖರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನೆ ಮಾಡಿದರೆ ಈಗಿನ ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಮಾಡಬೇಕಾಗುತ್ತದೆ ಎಂದು ಕರಿಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾಂಗ್ರೆಸ್ನ ರಮೇಶ ಹಲಸಿನಳ್ಳಿ ಹೇಳಿದರು. ಇದಕ್ಕೆ ಮ್ಯಾಮ್ಕೋಸ್ ನಿರ್ದೇಶಕ, ಬಿಜೆಪಿಯ ಕೆ.ವಿ. ಕೃಷ್ಣಮೂರ್ತಿ ವಿರೋಧ ವ್ಯಕ್ತಪಡಿಸಿದರು.

‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಮಸ್ಯೆಗೆ ಸ್ಪಂದಿಸುತ್ತಾರೆ. ಅವರ ವಿರುದ್ಧ ಧಿಕ್ಕಾರ ಕೂಗುವುದಾದರೆ ಈ ಪ್ರತಿಭಟನೆಯಲ್ಲಿ ನಾವು ಭಾಗಿಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬಿರುಸಿನ ಮಾತಿನ ಜಟಾಪಟಿ ನಡೆಯಿತು.

ಬೆಂಗಳೂರಿಗೆ ಕರೆದ ಗೃಹ ಸಚಿವರು

ಸಭೆಯ ಬಳಿಕ ಸಮಾಲೋಚನಾ ಸಭೆಯ ಬೆಳವಣಿಗೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಗಮನಕ್ಕೆ ಕೆ.ವಿ. ಕೃಷ್ಣಮೂರ್ತಿ, ವಿ.ಜಿ. ಶ್ರೀಕರ್ ತಂದರು.

ಅದಕ್ಕೆ ಸ್ಪಂದಿಸಿದ ಸಚಿವರು ಬುಧವಾರವೇ ಬೆಂಗಳೂರಿಗೆ ಬರುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.