ರಿಪ್ಪನ್ ಪೇಟೆ: ಪಟ್ಟಣದ ಗವಟೂರು ನಿವಾಸಿ, ಆಟೋ ಚಾಲಕ ದೇವಪ್ಪಗೌಡ ಅವರ ಪುತ್ರಿಯ ಚಿಕಿತ್ಸೆಗೆ ಆರ್ಥಿಕ ನೆರವು ಹರಿದುಬಂದಿದೆ. ಪುತ್ರಿ ಅನಿತಾ 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿರುವ ಕುರಿತು ಈಚೆಗೆ ‘ಪ್ರಜಾವಾಣಿ’ ವರದಿ ಮಾಡಿತ್ತು. ಮಗಳ ಆರೈಕೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಅವರು ಅಸಹಾಯಕರಾಗಿದ್ದರು. ಚಿಕಿತ್ಸೆಗೆ ಹಣವಿಲ್ಲದೇ ಮಗಳ ಕಾಯಿಲೆ ಮತ್ತಷ್ಟು ಉಲ್ಬಣಗೊಂಡಿತ್ತು.
ಪಿಎಸ್‌ಐ ಎಸ್.ಪಿ ಪ್ರವೀಣ್, ಠಾಣೆ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಸೇರಿ ದೇವಪ್ಪಗೌಡರ ಅವರಿಗೆ ₹40,100 ದೇಣಿಗೆ ನೀಡಿದ್ದಾರೆ. ಮಗಳು ಶೀಘ್ರವಾಗಿ ಗುಣಮುಖವಾಗಲಿ ಎಂದು ಹಾರೈಸಿ, ಬಡ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದಾರೆ. ಪಟ್ಟಣದ ಪೊಲೀಸರ ಈ ಕಾರ್ಯವನ್ನು ನಾಗರಿಕರು ಪ್ರಶಂಸಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.