ಶಿವಮೊಗ್ಗ: ಸಮೀಪದ ಬೇಡರ ಹೊಸಳ್ಳಿಯ ಕೆರೆ ಬಳಿ ಶುಕ್ರವಾರ ಸಂಜೆ 2 ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು, ಅಪಘಾತದಲ್ಲಿ ಆಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ.

ದಾವಣಗೆರೆಯ ನಿವಾಸಿಗಳಾದ ಧನ್ವಂತರಿ (35) ಅವರ ಪತ್ನಿ ರೋಜಾ (23) ಸಾವಿಗೀಡಾದವರು. ಸಂಬಂಧಿಕರಾದ ಚೇತನ್ (23) ಹಾಗೂ ಸುನೀತಾ (22) ಅವರು ತೀವ್ರ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ ಕಡೆಯಿಂದ ಹೊನ್ನಾಳಿ ಕಡೆ ಹೊರಟಿದ್ದ ಆಮ್ನಿ ಹಾಗೂ ಹೊನ್ನಾಳಿಯಿಂದ ಶಿವಮೊಗ್ಗದತ್ತ ಬರುತ್ತಿದ್ದ ಕಾರು ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ಆಮ್ನಿ ನುಜ್ಜುಗುಜ್ಜಾಗಿದೆ. ಆಮ್ನಿ ಚಲಾಯಿಸುತ್ತಿದ್ದ ಧನ್ವಂತರಿ ಅವರ ಕಾಲುಗಳು ತುಂಡಾಗಿದ್ದು, ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಧನ್ವಂತರಿ ನಿಧನರಾಗಿದ್ದು, ಒಂದು ಗಂಟೆಯ ನಂತರ ಪತ್ನಿ ರೋಜಾ ಕೂಡ ಸಾವನ್ನಪ್ಪಿದರು. ರೋಜಾ ಹೊಟ್ಟೆಯಲ್ಲಿದ್ದ ಮಗುವನ್ನು ಉಳಿಸಲು ವೈದ್ಯರು ಪ್ರಯತ್ನ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.