ಶಿಕಾರಿಪುರ: ‘12ನೇ ಶತಮಾನದಲ್ಲಿ ಮೂಡಿದ ಶರಣರ ವಚನ ಸಾಹಿತ್ಯ ಇಂದಿನ ಆಧುನಿಕ ಕಾಲಕ್ಕೂ ಭರವಸೆ ಆಶಾಕಿರಣವಾಗಿವೆ. ಅಗಾಧ ಅರ್ಥ ಸರಳ ಪದಗಳಲ್ಲಿ ಮೂಡಿರುವ ವಚನ ಸಾಹಿತ್ಯ ಉಳಿಸಿ ಬೆಳೆಸಬೇಕಿದೆ’ ಎಂದು ತಾಲ್ಲೂಕು ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸುಭಾಷ್ಚಂದ್ರ ಸ್ಥಾನಿಕ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಶರಣದ ಆಶಯ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಬೇಕು ಅದಕ್ಕಾಗಿ ಶರಣರ ವಚನ ಪ್ರತಿ ಮನೆಯಲ್ಲಿ ಓದುವ ಕೆಲಸ ಆಗಬೇಕಿದೆ. ಅಲ್ಲಮಪ್ರಭು, ಅಕ್ಕಮಹಾದೇವಿ, ಸತ್ಯಕ್ಕ, ಮುಕ್ತಾಯಕ್ಕ, ಅನಿಮಿಷಾರ್ಯರು ಸೇರಿ 20ಕ್ಕೂ ಹೆಚ್ಚು ವಚನಕಾರರು ಜನ್ಮತಾಳಿದ ತಾಲ್ಲೂಕು ಇದಾಗಿದೆ. ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ ಕೆಲಸ ಆಗಿದ್ದು ಅದು ಕೂಡಲ ಸಂಗಮದಂತೆ ಪ್ರವಾಸಿ ಕೇಂದ್ರವನ್ನಾಗಿಸಬೇಕಿದೆ ಅಲ್ಲದೆ ತಾಲ್ಲೂಕಿನ ಎಲ್ಲ ಶರಣರ ಜನ್ಮಸ್ಥಳ ಅಭಿವೃದ್ಧಿ ಮಾಡಬೇಕು ಎನ್ನುವುದು ಎಲ್ಲರ ಆಶಯವಾಗಿದೆ’ ಎಂದರು.

‘ವಚನಗಳೆಂದರೆ ಪ್ರಮಾಣ, ಅವು ನಮ್ಮೊಳಗಿನ ಭಾವನೆಗಳೊಡನೆ ಆಡುವ ಚಿಂತನೆ ಸಂಘರ್ಷಕ್ಕಲ್ಲ ಬದಲಿಗೆ ಸಂವಾದಕ್ಕೆ. ನಮ್ಮ ಬದುಕು ಹೇಗಿರಬೇಕು ಅದು ಹೇಗೆ ಪರಿಶುದ್ಧವಾಗುತ್ತದೆ ಎನ್ನುವುದನ್ನು ಶರಣರು ವಚನಗಳ ಮೂಲಕ ಹೇಳಿದ್ದಾರೆ. ಸತ್ಯ, ಸತ್ವಗಳೇ ಶರಣರ ಆಯುಧಗಳು ತಮ್ಮ ವಚನದ ಸಾರದಂತೆ ಅವರು ನಡೆದುಕೊಂಡರು ಅವರ ತತ್ವ ಸಿದ್ಧಾಂತ ನಾವೂ ಅಳವಡಿಸಿಕೊಂಡರೆ ಸುಂದರ ಸಮಾಜ ನಿರ್ಮಾಣ ಆಗುತ್ತದೆ’ ಎಂದು ಸಮ್ಮೇಳನ ಸಮಾರೋಪ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘12ನೇ ಶತಮಾನದಲ್ಲಿ ಸಾಮಾಜಿಕ ಬದಲಾವಣೆ ಮಾಡಿದ ವಚನಕಾರರ ಹೆಸರು ನಮ್ಮ ಮಕ್ಕಳಿಗೆ ಗೊತ್ತಿಲ್ಲ ಎನ್ನುವುದು ಕಳವಳಕಾರಿ, ಶರಣರ ಪ್ರತಿ ವಚನವೂ ಗ್ರಂಥವಿದ್ದಂತೆ. ಶರಣ ಸಾಹಿತ್ಯ ಸಮ್ಮೇಳನ ಜನರಲ್ಲಿ ಶರಣ ತತ್ವದ ಜಾಗೃತಿಗೆ ಕಾರಣವಾಗಲಿ’ ಎಂದು ಸಮ್ಮೇಳನ ಉದ್ಘಾಟಿಸಿದ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾತೆ ಶರಣಾಂಬಿಕೆ, ಸಂಸದ ಬಿ.ವೈ.ರಾಘವೇಂದ್ರ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ.ಶಶಿಧರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಶುಭಾ ಮರವಂತೆ, ಮುಖಂಡರಾದ ಬಿ.ಡಿ.ಭೂಕಾಂತ್, ಬಿ.ಪಾಪಯ್ಯ, ಜಗದೀಶ್ ಅಂಗಡಿ, ಹುಲಿಕೆರೆ ವೀರೇಶ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ರಘು, ಕೆ.ಎಚ್.ಪುಟ್ಟಪ್ಪ, ಜನಪದ ಕಲಾವಿದ ಚೌಟಗಿ ಪರಶುರಾಮ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.