ರೂಢಿಗತ ಹೆಸರಿಗೆ ಆಗ್ರಹ; ಸಭೆಯಲ್ಲಿ ಗದ್ದಲ
ಪಿಪಿಟಿ ಪ್ರದರ್ಶನದ ವೇಳೆ ಕೆಪಿಸಿ ಅಧಿಕಾರಿಗಳು ಯೋಜನಾ ಬಾಧಿತ ಪ್ರದೇಶದಲ್ಲಿರುವ ಸಸ್ತನಿ ಸರೀಸೃಪ ಹಾಗೂ ಜಲಚರಗಳಿಗೆ ಸ್ಥಳೀಯವಾಗಿ ರೂಢಿಗತ ಹೆಸರು ಉಲ್ಲೇಖಿಸದೇ ವೈಜ್ಞಾನಿಕ ಹೆಸರನ್ನು ಬಳಸಿದ್ದು ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿ ಸೂಚನೆಯ ನಂತರ ರೂಢಿಗತ ಹೆಸರನ್ನು ಉಲ್ಲೇಖಿಸಿ ಕೆಪಿಸಿ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಅಹವಾಲು ಸಭೆಯಲ್ಲಿ ಆನ್‌ಲೈನ್ ಮೂಲಕ 14090 ಹಾಗೂ ಲಿಖಿತವಾಗಿ 800ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾದವು.