ಸೊರಬ: ತಾಲ್ಲೂಕಿನ ಹಾಲಗಳಲೆ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವು ಬುಧವಾರ ವಿಜೃಂಭಣೆಯಿಂದ ಜರುಗಿತು. ಹೋರಿಗಳು ಅಭಿಮಾನಿಗಳ ಹರ್ಷೋದ್ಗಾರಗಳ ಮಧ್ಯೆ, ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಹೋರಿಯ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನ್‌ಗಳು ಹಾಗೂ ಕೊಬ್ಬರಿ ಕಟ್ಟಿ ಸಿಂಗರಿಸಿದ್ದರು.

ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಬಂದಿತ್ತು. ಅಖಾಡದಲ್ಲಿ ಪುನೀತ್ ರಾಜ್‍ಕುಮಾರ್, ಪವರ್ ಸ್ಟಾರ್, ಹಿರೇಕಸವಿ ಹಂತಕ, ಕುಂಬತ್ತಿ ಕೂಸು ಡಾನ್, ಕೆಪಿಆರ್ ಕಿಂಗ್, ಮಾವಲಿ ಗೌಡ್ರು ಮಗ, ಹುಲಿಬಾಯ್, ಕೆಡಿಎಂ ಕಿಂಗ್, ಮದಗಜ, ಚಿನ್ನಾಟದ ನಂದಿ, ಗೂಳಿ, ಕದಂಬ, ತಾರಕಾಸುರ, ಕಬಡ್ಡಿ ಕಿಂಗ್, ಜನನಾಯಕ, ಕಸ್ತೂರಿ, ಶ್ರೀರಾಮ, ಜನಮೆಚ್ಚಿದ ಮಗ, ಬಸವ, ಜಮೀನ್ದಾರ, ಗರುಡ, ಅಭಿಮನ್ಯು ಸೇರಿ ವಿವಿಧ ಹೆಸರುಗಳ ಹೋರಿಗಳು ಇದ್ದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಹೋರಿ ಪ್ರಿಯರು, ಅಭಿಮಾನಿಗಳು ನೋಡಿ ರೋಮಾಂಚನಗೊಂಡರು. ಆಯೋಜಕರು ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಲು ಅನುವು ಮಾಡಿಕೊಟ್ಟರು. ಓಡಿದ ಹೋರಿಗಳನ್ನು ಹಾಗೂ ಬಲ ಪ್ರದರ್ಶಿಸಿದ ಪೈಲ್ವಾನರನ್ನು ಗುರುತಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.