ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮುಲ್: ಮತ್ತೆ ಹಾಲಿನ ಖರೀದಿ ದರ ಹೆಚ್ಚಳ

Last Updated 28 ಫೆಬ್ರುವರಿ 2021, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಹಾಲು ಉತ್ಪಾದಕರಿಗೆ ಸಂಕ್ರಾತಿ ಕೊಡುಗೆಯಾಗಿ ಹಾಲಿನ ದರವನ್ನು ₹ 2.75 ಹೆಚ್ಚಳ ಮಾಡಿದ್ದ ಶಿಮುಲ್ ಈಗ ಮತ್ತೆ ಖರೀದಿ ದರವನ್ನು ಪ್ರತಿ ಲೀಟರ್ ಗೆ ₹ 2.25 ಹೆಚ್ಚಳ ಮಾಡಿದೆ. ಮಾರ್ಚ್‌ 1ರಿಂದ 31ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ.

ಸದ್ಯ ರೈತರಿಗೆ ಲೀಟರ್‌ಗೆ ₹ 25.25 ಸಿಗುತ್ತಿದ್ದು, ದರ ಪರಿಷ್ಕರಣೆಯಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ₹ 27.50 ಸಿಗಲಿದೆ. ಜೊತೆಗೆ ಸರ್ಕಾರದ ಪ್ರೋತ್ಸಾಹ ಧನ ₹ 5 ಸೇರಿ ₹ 32.50 ಸಿಗಲಿದೆ.

ಫೆಬ್ರುವರಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ದರ (ಲೀಟರ್‌ಗೆ ₹ 29) ಅನ್ನು ಶಿಮುಲ್‌ನಿಂದ ನೀಡುತ್ತಿತ್ತು. ಆದರೆ, ಕೊರೊನಾ ಬಳಿಕ ಹಾಲಿನ ಮಾರಾಟ ತೀವ್ರ ಕುಸಿದು ಶೇ 50ಕ್ಕಿಂತ ಕಡಿಮೆಯಾಗಿತ್ತು. ಪ್ರತಿದಿನ ಲಕ್ಷಾಂತರ ಲೀಟರ್ ಹಾಲು ಉಳಿದು ಒಕ್ಕೂಟವು ತೀವ್ರ ಆರ್ಥಿಕ ನಷ್ಟ ಅನುಭವಿಸಿತ್ತು.

ಹಾಲು ಸಂಗ್ರಹ–ಮಾರಾಟ ಹೆಚ್ಚಳ: ಪ್ರಸ್ತುತ ಶಿಮುಲ್‌ಗೆ ನಿತ್ಯ ಸಂಗ್ರಹ ಆಗುತ್ತಿರುವ ಹಾಲಿನ ಪ್ರಮಾಣವೂ ಹೆಚ್ಚುತ್ತಿದೆ.

ಜೊತೆಗೆ ಗ್ರಾಹಕರಿಂದ ಹಾಲಿಗೆ ಬೇಡಿಕೆಯೂ ಬರುತ್ತಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ 90 ಸಾವಿರ ಹಾಲು ಉತ್ಪಾದಕರು ಶಿಮುಲ್‌ಗೆ ಹಾಲು ಪೂರೈಕೆಮಾಡುತ್ತಿದ್ದಾರೆ.

ನಿತ್ಯ ಮೂರು ಲಕ್ಷ ಲೀಟರ್ ಹಾಲು ನೇರವಾಗಿ ಗ್ರಾಹಕರಿಗೆ ತಲುಪುತ್ತಿದೆ. ಉಳಿದ ಹಾಲನ್ನು ಹಾಲಿನ ಪುಡಿ ಉತ್ಪಾದನಾ ಘಟಕಗಳಿಗೆ ಕಳಿಸಲಾಗುತ್ತಿದೆ ಎಂದು ಶಿಮುಲ್ ಅಧ್ಯಕ್ಷ ಡಿ. ಆನಂದ್ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT