ಆನವಟ್ಟಿ: ಹಾಲಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಿ, ಸರ್ಕಾರವು ಹೈನುಗಾರಿಕೆಗೆ ಉತೇಜನ ನೀಡಿದೆ. ಶಿಮುಲ್ ಹಾಲು ಒಕ್ಕೂಟ ರೈತರ ಬೆನ್ನಿಗೆ ನಿಂತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಆನವಟ್ಟಿಯ ಚೌಡಮ್ಮ ದೇವಸ್ಥಾನದ ಕ್ರಾಸ್ನಲ್ಲಿ ನೂತನ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನಂದಿನಿ ಬ್ರ್ಯಾಂಡ್ ದೇಶ-ವಿದೇಶದಲ್ಲಿ ಹೆಸರು ಮಾಡಿದೆ ಎಂದರು.

ಶಿಮುಲ್ ಅಧ್ಯಕ್ಷ ವಿದ್ಯಾಧರ ಮಾತನಾಡಿ, ‘ರೈತರು ನೀಡುವ ಹಾಲಿಗೆ ಹೆಚ್ಚಿನ ದರ ನೀಡಬೇಕಾದರೆ, ನಂದಿನಿ ಉತ್ಪನ್ನಗಳು ಹೆಚ್ಚಬೇಕು ಹಾಗೂ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು. ಹೈನುಗಾರಿಕೆಯಲ್ಲಿ ತೊಡಗಿರುವ ರೈತನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರ ₹4 ಹೆಚ್ಚಿಗೆ ಮಾಡಲಾಗಿದೆ. ಗ್ರಾಹಕರು ದರ ಹೆಚ್ಚಾಗಿದೆ ಎಂದು ಬೇಸರ ಪಟ್ಟುಕೊಳ್ಳುವ ಬದಲು ಕಷ್ಟಪಟ್ಟು ಹಸು ಸಾಕಿ, ಗುಣಮಟ್ಟದ ಹಾಲು ಪೂರೈಸುವ ರೈತನಿಗೆ ಕೊಟ್ಟಿದ್ದೇವೆ ಎಂಬ ತೃಪ್ತಿಪಟ್ಟುಕೊಳ್ಳಬೇಕು’ ಎಂದರು.

‘ಸಚಿವ ಮಧು ಬಂಗಾರಪ್ಪ ಅವರು ಕೂಡ ಹೈನುಗಾರಿಕೆ ಮಾಡುತ್ತಾರೆ. ಅವರ ಮನೆಯಿಂದಲ್ಲೂ ನಮ್ಮ ಒಕ್ಕೂಟಕ್ಕೆ ಹಾಲು ಬರುತ್ತದೆ. ಆನವಟ್ಟಿಯಲ್ಲಿ ನಮಗೆ ಸರ್ಕಾರಿ ಜಾಗ ಒದಗಿಸಿ ಮಳಿಗೆ ತೆರೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ಇನ್ನಷ್ಟು ಮಳಿಗೆಯನ್ನು ತೆರೆಯುವ ಉದ್ದೇಶವನ್ನು ಒಕ್ಕೂಟ ಹೊಂದಿದೆ ಎಂದರು.

ಒಕ್ಕೂಟದ ನಿರ್ದೇಶಕರಾದ ಶಿವಶಂಕರಪ್ಪ, ದಯಾನಂದ ಗೌಡ, ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ ಶೇಖರಪ್ಪ, ಬಿ.ಕೆ ಪ್ರಮೋದ್, ಮುಖಂಡರಾದ ಸದಾನಂದಗೌಡ ಪಾಟೀಲ್ ಬಿಳಗಲಿ, ಚೌಟಿ ಚಂದ್ರಶೇಖರ್ ಪಾಟೀಲ್, ಮಧುಕೇಶ್ವರ ಪಾಟೀಲ್, ಮಲ್ಲಿಕಾರ್ಜುನ, ಜಗದೀಶ್, ಶಿವಂತ್, ಎಲ್.ಜಿ ಮಾಲತೇಶ್, ನಾಗರಾಜ್ ಶುಂಠಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.