ಶುಕ್ರವಾರ, ಆಗಸ್ಟ್ 7, 2020
24 °C

ಶಿವಮೊಗ್ಗ: ಕೊರೊನಾದಿಂದ ತುಂಗಾನಗರದ ವೃದ್ಧೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೊರೊನಾ ವೈರಸ್‌ನಿಂದ ತುಂಗಾನಗರದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆಯೇ ಮೃತಪಟ್ಟಿದ್ದ ವೃದ್ಧಿಯಲ್ಲಿ ವೈರಸ್‌ ಇತ್ತು ಎನ್ನುವ ಅಂಶ ಶುಕ್ರವಾರ ದೃಢಪಟ್ಟಿದೆ. ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ. 

ಮೃತ ವೃದ್ಧೆ ‌(ಪಿ–18073)ಗೆ ನಾಲ್ಕು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿತ್ತು. ಇಂದು ಪಾಸಿಟಿವ್ ಇರುವುದು ದೃಢಪಟ್ಟ ನಂತರ ವೃದ್ಧೆ ನೆಲೆಸಿದ್ದ ಪ್ರದೇಶದಲ್ಲಿ ಸ್ಯಾನಿಟೈಸಿಂಗ್ ಮಾಡಲಾಯಿತು.

ಒಂದೇ ದಿನ ಜಿಲ್ಲೆಯ 23 ಜನರಿಗೆ ಕೋರೊನಾ ಸೋಂಕು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ ದ್ವಿಶತಕ ದಾಟಿ ಮುಂದುವರಿದಿದೆ. ಸೋಂಕಿತರಲ್ಲಿ 11 ಮಹಿಳೆಯರು, 11 ಪುರುಷರು ಹಾಗೂ ಒಬ್ಬ ಬಾಲಕ ಇದ್ದಾನೆ.

42 ವರ್ಷದ ಮಹಿಳೆ ‌(ಪಿ–18066), 46 ವರ್ಷದ ಪುರುಷ ‌(ಪಿ–18067), 24 ವರ್ಷದ ಯುವತಿ ‌(ಪಿ–18068), 67 ವರ್ಷದ ಪುರುಷ ‌(ಪಿ–18069), 33 ವರ್ಷದ ಪುರುಷ ‌(ಪಿ–18070), 70 ವರ್ಷದ ಮಹಿಳೆ ‌(ಪಿ–18073), 33 ವರ್ಷದ ಪುರುಷ ‌(ಪಿ–18075), 44 ವರ್ಷದ ಪುರುಷ ‌(ಪಿ–18077), 25 ವರ್ಷದ ಯುವಕ (ಪಿ–18081), 34 ವರ್ಷದ ಪುರುಷ (ಪಿ–18082), 55 ವರ್ಷದ ಮಹಿಳೆ (ಪಿ–18083)ಗೆ ವೈರಸ್‌ ತಗುಲಿದ ಸಂಪರ್ಕ ಪತ್ತೆಯಾಗಿಲ್ಲ.

33 ವರ್ಷದ ಪುರುಷ ‌(ಪಿ–18076), 28 ವರ್ಷದ ಯುವಕ (ಪಿ–18084), 22 ವರ್ಷದ ಯುವತಿ (ಪಿ–18086), 19 ವರ್ಷದ ಯುವತಿ (ಪಿ–18087), 51 ವರ್ಷದ ಮಹಿಳೆ (ಪಿ–18088). ಬೆಂಗಳೂರಿನಿಂದ, 70 ವರ್ಷದ ಮಹಿಳೆ ‌(ಪಿ–18074) ಮಹಾರಾಷ್ಟ್ರದಿಂದ ಹಿಂದಿರುಗಿದವರು. 19 ವರ್ಷದ ಯುವತಿ (ಪಿ–18085) ಉತ್ತರ ಪ್ರದೇಶದಿಂದ ಜಿಲ್ಲೆಗೆ ಬಂದಿದ್ದಾರೆ. 

ಪಿ–9897 ರೋಗಿಯ ಸಂಪರ್ಕದಿಂದ 30 ವರ್ಷದ ಪುರುಷ ‌(ಪಿ–18071), 27 ವರ್ಷದ ಯುವಕ ‌(ಪಿ–18072)ನಿಗೆ, ಪಿ–10828 ರೋಗಿಯ ಸಂಪರ್ಕದಿಂದ 59 ವರ್ಷದ ಮಹಿಳೆ ‌(ಪಿ–18078), 37 ವರ್ಷದ ಮಹಿಳೆ ‌(ಪಿ–18079), 10 ವರ್ಷದ ಬಾಲಕನಿಗೆ ‌(ಪಿ–18080) ಸೋಂಕು ತಗುಲಿದೆ.

ಒಟ್ಟು 222 ಜನರು ಸೋಕಿತರಾಗಿದ್ದು, ಇದುವರೆಗೆ 117 ಜನರು ಗುಣ ಮುಖರಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದಾರೆ. 101 ಮಂದಿ ಮೆಗ್ಗಾನ್ ಆಸ್ಪತ್ರೆಯ ಕೋವಿಡ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ 10, ಭದ್ರಾವತಿ  5, ಶಿಕಾರಿಪುರ 4 ಜನರಿಗೆ, ತೀರ್ಥಹಳ್ಳಿ. ಹೊಸನಗರ, ಸೊರಬ, ಸಾಗರದಲ್ಲಿ ತಲಾ ಒಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. 

40 ಕಂಟೈನ್‌ಮೆಂಟ್‌ ಜೋನ್: ಕೋವಿಡ್‌ ರೋಗಿಗಳು ನೆಲೆಸಿದ್ದ ಜಿಲ್ಲೆಯ ವಿವಿಧ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದುವರೆಗೂ ಒಟ್ಟು 40 ಕಂಟೈನ್‌ಮೆಂಟ್‌ ಜೋನ್‌ಗಳನ್ನು ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು