ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಸಿಸಿ ಬ್ಯಾಂಕ್ | ₹10.58 ಕೋಟಿ ನಿವ್ವಳ ಲಾಭ: ಮಂಜುನಾಥಗೌಡ

ಶೀಘ್ರ ಮೂರು ಹೊಸ ಶಾಖೆ; ಆರ್.ಎಂ.ಮಂಜುನಾಥಗೌಡ
Published : 10 ಸೆಪ್ಟೆಂಬರ್ 2024, 13:46 IST
Last Updated : 10 ಸೆಪ್ಟೆಂಬರ್ 2024, 13:46 IST
ಫಾಲೋ ಮಾಡಿ
Comments

ಶಿವಮೊಗ್ಗ: ಇಲ್ಲಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2023-24ನೇ ಸಾಲಿನಲ್ಲಿ ₹10.58 ಕೋಟಿ ನಿವ್ವಳ ಲಾಭ ಗಳಿಸಿದೆ. 2025ರ ಮಾರ್ಚ್ ಅಂತ್ಯಕ್ಕೆ ₹25 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ಷೇರು ಬಂಡವಾಳ ₹138.98 ಕೋಟಿ ಇದ್ದು, ನಿಧಿಗಳು ₹ 67.46 ಕೋಟಿ ಹಾಗೂ ದುಡಿಯುವ ಬಂಡವಾಳ ₹ 2332.29 ಕೋಟಿ ಇದ್ದು, ₹1462.78 ಕೋಟಿ ಠೇವಣಿ ಸಂಗ್ರಹಣೆಯಾಗಿದೆ ಎಂದರು.

2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲ 1.04,250 ರೈತರಿಗೆ ₹1010.20 ಕೋಟಿ ಸಾಲ ಹಂಚಿಕೆ ಮಾಡಲಾಗಿದೆ. ಈ ಪೈಕಿ 3581 ಹೊಸ ರೈತರಿಗೆ ₹ 43.04 ಕೋಟಿ  ಹಾಗೂ 6683 ರೈತರಿಗೆ ₹33.68 ಕೋಟಿ ಹೆಚ್ಚುವರಿ ಸಾಲ ವಿತರಣೆ ಮಾಡಿದ್ದು, ಶೇ. 108.96ರಷ್ಟು ಪ್ರಗತಿಯಾಗಿದೆ. ಆ. 24ರ ಅಂತ್ಯದವರೆಗೆ ಒಟ್ಟು 37,672 ರೈತರಿಗೆ ಒಟ್ಟು ₹417.85 ಕೋಟಿ ಸಾಲ ಹಂಚಿಕೆ ಮಾಡಲಾಗಿದೆ. ಸಾಲ ವಸೂಲಾತಿ ಶೇ. 99.07ರಷ್ಟು ಇದೆ ಎಂದರು.

1696 ಸ್ವಸಹಾಯ ಸಂಘಗಳಿಗೆ 2023-24ನೇ ಸಾಲಿನಲ್ಲಿ ₹73.33 ಕೋಟಿ ಸಾಲ ವಿತರಿಸಿದ್ದು, ಶೇ. 100ರಷ್ಟು ಪ್ರಗತಿಯಲ್ಲಿದೆ. 2024ರ ಆಗಸ್ಟ್ ಅಂತ್ಯದವರೆಗೆ ಒಟ್ಟು 680 ಸ್ವಸಹಾಯ ಸಂಘಗಳಿಗೆ ₹29.53 ಕೋಟಿ  ಸಾಲ ಹಂಚಿಕೆ ಮಾಡಲಾಗಿದೆ. ಸಾಲ ವಸೂಲಾತಿಯಲ್ಲಿ ಶೇ. 99ರಷ್ಟು ಪ್ರಗತಿ ಇದೆ ಎಂದರು.


ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಿದೆ. ಬ್ಯಾಂಕ್ ನಿಂದ ಈಗಾಗಲೇ ಹಲವು ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರದ ಯೋಜನೆಯಂತೆ ಶೂನ್ಯ ಬಡ್ಡಿದರದಲ್ಲಿ ಪಶುಸಂಗೋಪನೆ ಉದ್ದೇಶಕ್ಕೆ 3008 ಸದಸ್ಯರಿಗೆ ₹6.53 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ಶಾಖೆಗಳ ಮೂಲಕ 15,231 ವ್ಯಕ್ತಿಗಳಿಗೆ ₹519.16 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ನಿರ್ದೇಶಕರಾದ ಹನುಮಂತು, ಮಹಾಲಿಂಗ ಶಾಸ್ತ್ರಿ, ದುಗ್ಗಪ್ಪಗೌಡ, ಸುಧೀರ್, ಚಂದ್ರಶೇಖರಗೌಡ, ಪರಮೇಶ್, ದಶರಥಗಿರಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಕಲ್ಮನೆ ಉಪಸ್ಥಿತರಿದ್ದರು.

ನೂತನ 3 ಶಾಖೆಗಳಿಗೆ ಆರ್‌ಬಿಐ ಅನುಮತಿ:

ಜಿಲ್ಲೆಯಲ್ಲಿ 19 ನೂತನ ಶಾಖೆಗಳ ತೆರೆಯಲು ಅನುಮತಿ ನೀಡುವಂತೆ ರಿಸರ್ವ್‌ ಬ್ಯಾಂಕ್ ಇಂಡಿಯಾಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮೂರು ಶಾಖೆಗಳಿಗೆ ಅನುಮತಿ ದೊರೆತಿದೆ. ಶೀಘ್ರ ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳ ಸೊರಬ ತಾಲ್ಲೂಕಿನ ಜಡೆ ಹಾಗೂ ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪದಲ್ಲಿ ನೂತನ ಶಾಖೆಗಳ ತೆರೆಯಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT