ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಲ್: ವಿದ್ಯುತ್ ಉತ್ಪಾದನೆ ಆರಂಭಿಸಿದ ಲಿಂಗನಮಕ್ಕಿ ಜಲವಿದ್ಯುದಾಗಾರ

ಮುಂಗಾರು ಆಗಮನದೊಂದಿಗೆ ನೀರಿನ ಸಂಗ್ರಹ 29 ಅಡಿ ಏರಿಕೆ
Published 23 ಜುಲೈ 2023, 14:20 IST
Last Updated 23 ಜುಲೈ 2023, 14:20 IST
ಅಕ್ಷರ ಗಾತ್ರ

ಕಾರ್ಗಲ್: ಲಿಂಗನಮಕ್ಕಿ ಜಲಾಶಯದ ನೀರು ಇಳಿಮುಖವಾಗುತ್ತಾ ಬಂದು, ಶರಾವತಿ ಕಣಿವೆ ಯೋಜನಾ ಪ್ರದೇಶದ ಜಲವಿದ್ಯುದಾಗಾರಗಳು ಜೂನ್ ಅಂತ್ಯದೊಳಗೆ ನಿಲುಗಡೆಯಾಗುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಮುಂಗಾರು ತಡವಾದರೂ, ಜುಲೈ ತಿಂಗಳಲ್ಲಿ ಬಿರುಸು ಪಡೆದಿದೆ. ಮುಂಗಾರು ಅಬ್ಬರಕ್ಕೆ ಜಲಾಶಯದಲ್ಲಿ 29 ಅಡಿ ನೀರು ಸಂಗ್ರಹವಾಗಿ, ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಮಟ್ಟ 1,770 ಅಡಿಗೆ ಏರಿಕೆಯಾಗಿದೆ.

ಕಳೆದ ಸಾಲಿಗೆ ಹೋಲಿಸಿದರೆ, ಈಗ ಜಲಾಶಯದಲ್ಲಿ 27 ಅಡಿ ಕಡಿಮೆ ನೀರು ಸಂಗ್ರಹವಾಗಿದೆ. ಆದರೆ ಜಲಾಶಯದ ಒಳಹರಿವು ಉತ್ತಮವಾಗಿದ್ದು, 52,374 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಈವರೆಗೆ 1,468 ಮಿ.ಮೀ. ಮಳೆ ಸುರಿದಿದೆ ಎಂದು ಕೆಪಿಸಿ ಮೂಲಗಳು ತಿಳಿಸಿವೆ.

1,819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಇದೇ ಜೂನ್ ಆರಂಭದಲ್ಲಿ 1,741 ಅಡಿ ಮಟ್ಟಕ್ಕೆ ಕುಸಿದಿತ್ತು. ಲಿಂಗನಮಕ್ಕಿ ಜಲವಿದ್ಯುದಾಗಾರದ ಪೆನ್ ಸ್ಟಾಕ್ ಪೈಪ್ ಮಟ್ಟದಿಂದ ಜಲಾಶಯದ ನೀರು ಇಳಿಮುಖವಾಗಿ, ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು. ನಾಡಿಗೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಶರಾವತಿ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಒಂದು ರೀತಿ ಆತಂಕದ ವಾತಾವರಣ ಸೃಷ್ಠಿಸಿತ್ತು. ಇದೀಗ, ಅಣೆಕಟ್ಟೆಯ ನೀರಿನ ಮಟ್ಟ ಪೆನ್ ಸ್ಟಾಕ್ ಪೈಪ್ ಮಟ್ಟದಿಂದ ಮೇಲೇರಿದ್ದು, ವಿದ್ಯುತ್ ಘಟಕಗಳು ಕಾರ್ಯಾರಂಭಗೊಂಡಿವೆ. ಇಲ್ಲಿನ ಘಟಕಗಳು 5.79 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿವೆ ಎಂದು ಕಾರ್ಯಪಾಲಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT