ವಿಬಿ ಜಿ ರಾಮ್–ಜಿ ಯೋಜನೆ ವಿರೋಧಿಸಲು ನರೇಗಾ ಯೋಜನೆಯನ್ನು ಮುಂದಿಟ್ಟು ಕೊಳ್ಳಲಾಗುತ್ತಿದ್ದು, ರಾಮನ ಹೆಸರೇ ಕಾಂಗ್ರೆಸ್ ನಾಯಕರಿಗೆ ಅಲರ್ಜಿ ಎಂಬಂತೆ ವರ್ತಿಸುತ್ತಿದ್ದಾರೆ
ಬಿ.ವೈ. ರಾಘವೇಂದ್ರ, ಸಂಸದ
ಕೇಂದ್ರ ವಿರುದ್ಧ ವೃಥಾ ಆರೋಪ
‘ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಇತರೆ ಅಭಿವೃದ್ಧಿಗಳನ್ನು ನಿಲ್ಲಿಸಿ, ಅದರ ಹೊಣೆಯನ್ನು ಕೇಂದ್ರದ ಮೇಲೆ ಹಾಕುವ ಪ್ರಯತ್ನ ನಡೆಯುತ್ತಿದೆ. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಮಾಡಿಲ್ಲ. ಭತ್ತ ಖರೀದಿ ಕೇಂದ್ರಗಳನ್ನು ತಡವಾಗಿ ಆರಂಭಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಆದರೂ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ನರೇಗಾ ಯೋಜನೆಯಿಂದ ಸರ್ಕಾರಕ್ಕೆ ನಷ್ಟವಾಗುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೇ ಹೇಳಿದ್ದನ್ನು ಈಗ ಮರೆತಿದ್ದಾರೆ’ ಎಂದು ಸಂಸದ ರಾಘವೇಂದ್ರ ಟೀಕಿಸಿದರು.