ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ | ಶಾರ್ಟ್ ಸರ್ಕಿಟ್: ಮನೆ ಬೆಂಕಿಗೆ ಆಹುತಿ

Published 12 ಆಗಸ್ಟ್ 2023, 13:48 IST
Last Updated 12 ಆಗಸ್ಟ್ 2023, 13:48 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ನಿಸರಾಣಿ ಗ್ರಾಮದ ಬಿ.ಎನ್.ಕುಮಾರ್ ಅವರ ಮನೆಯಲ್ಲಿ ಶನಿವಾರ ಬೆಳಿಗ್ಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ.

ಫ್ರಿಡ್ಜ್‌, ಬೀರು, ಚಿನ್ನ, ಬೆಳ್ಳಿ, ಟಿವಿ, ಪಿಠೋಪಕರಣಗಳು, ಬಟ್ಟೆ ಸೇರಿದಂತೆ ಮನೆಯಲ್ಲಿದ್ದ ದಿನಸಿ ಸಾಮಾನುಗಳು ಹಾಗೂ ನಗದು ಬೆಂಕಿಗೆ‌ ಆಹುತಿಯಾಗಿವೆ.

ಕುಮಾರ್ ಅವರ ಪತ್ನಿ ಮಕ್ಕಳನ್ನು ಶಾಲೆಗೆ ಬಿಡಲು ಹೋಗಿದ್ದರು. ಕುಮಾರ್ ಅವರು ಸ್ನಾನ ಮಾಡಿ ಹೊರ ಬರುವಷ್ಟರಲ್ಲಿ ಎಲ್ಲ ವಸ್ತುಗಳು ಸುಟ್ಟು ಹೋಗಿವೆ.

ಅಗ್ನಿಶಾಮಕ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡದೆ ಇರುವುದರಿಂದ ಅಪಾರ ಪ್ರಮಾಣದ ವಸ್ತುಗಳು ಹಾನಿಗೀಡಾಗಿವೆ ಎಂದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

‘ಸುಮಾರು ₹ 20 ಲಕ್ಷ ಮೌಲ್ಯದ ಮನೆ, ₹ 10 ಲಕ್ಷ ಮೌಲ್ಯದ ಚಿನ್ನ, ₹ 5 ಲಕ್ಷ ನಗದು ಬೆಂಕಿಗೆ ಹಾನಿಯಾಗಿದೆ’ ಎಂದು ಸೊರಬ ಅಗ್ನಿಶಾಮಕ ದಳದ ಸಿಬ್ಬಂದಿ ಆಂದಾಜಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT