ಸೊರಬ: ದಿವಂಗತ ಪುನೀತ್ ರಾಜ್ಕುಮಾರ್ ಅವರ ಆದರ್ಶ ಹಾಗೂ ಸೇವಾಕಾರ್ಯಗಳನ್ನು ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ದುರ್ಗಾಂಬ ಕನ್ನಡ ರಾಜ್ಯೋತ್ಸವ ಸಮಿತಿಯ ಮಂಜುನಾಥ್ ಕೆ.ಟಿ. ತುರುವೆಕೆರೆ ಹೇಳಿದರು.

ಪಟ್ಟಣದ ಸೊಪ್ಪಿನಕೇರಿ ಬಡಾವಣೆಯಲ್ಲಿ ದುರ್ಗಾಂಬ ಕನ್ನಡ ರಾಜ್ಯೋತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುನೀತ್ ಅವರು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ವೃದ್ಧಾಶ್ರಮದಲ್ಲಿ ನೊಂದ ಹಿರಿಯ ಜೀವಗಳಿಗೆ ಆಶ್ರಯ ಕಲ್ಪಿಸಿದ್ದಾರೆ. ಅವರ ಸಾಮಾಜಿಕ ಸೇವೆ ಸಾರ್ವಕಾಲಿಕವಾದುದು. ಪುನೀತ್ ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ಸಾಮಾಜಿಕ ಕಳಕಳಿ ಇರುತ್ತಿತ್ತು. ಅವರು ಇಲ್ಲದೇ ನಾಲ್ಕು ವರ್ಷಗಳು ಕಳೆದಿವೆ. ಆದರೆ, ಅವರ ನೆನಪು ಮತ್ತು ಪ್ರೀತಿ ಅಭಿಮಾನಿಗಳಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದರು.

ಸಮಿತಿಯ ಗೌರವಾಧ್ಯಕ್ಷ ಕೆ. ಪಾಂಡುರಂಗ, ಪ.ಪಂ. ಮಾಜಿ ಸದಸ್ಯ ಶ್ರೀಕಾಂತ್ ಶೇಟ್, ಭೂತೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಜಿ. ಕೆರಿಯಪ್ಪ, ಯುವ ಹೋರಾಟ ಸಮಿತಿಯ ಸುರೇಶ್ ಭಂಡಾರಿ, ಪ್ರಮುಖರಾದ ಪಿ. ಸುರೇಶ್, ಸಂತೋಷ ಸೊಪ್ಪಿನಕೇರಿ, ರಾಜು, ಗಣೇಶ, ಮೋಹನ್ ಭಾರ್ಕಿ, ಪ್ರವೀಣ್, ರಾಮಪ್ಪ ವಕೀಲ, ಮೋಹನ್ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.