ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಸಮಸ್ಯೆ: ಕಾಮಗಾರಿ ವಿಳಂಬ

ಹಸಿರುಮಕ್ಕಿ ಸೇತುವೆ ವೀಕ್ಷಿಸಿದ ಶಾಸಕ ಹಾಲಪ್ಪ
Last Updated 19 ಸೆಪ್ಟೆಂಬರ್ 2022, 4:25 IST
ಅಕ್ಷರ ಗಾತ್ರ

ಹೊಸನಗರ: ಹಸಿರುಮಕ್ಕಿ ಸೇತುವೆ ನಿರ್ಮಾಣ ವಿಚಾರದಲ್ಲಿ ಯಾವುದೇ ಅನುದಾನದ ತೊಂದರೆಯಿಲ್ಲ. ತಂತ್ರಜ್ಞಾನ ಮಾಹಿತಿ ಕೊರತೆಯಿಂದ ಕಾಮಗಾರಿ ಹಿನ್ನಡೆ ಆಗಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದರು.

ಯೋಜನೆಯೇಹಿನ್ನೀರ ಆಳವನ್ನು ಅಂದಾಜು 24ರಿಂದ 25 ಅಡಿ ಆಳ ಎಂದು ಗುರುತಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಈಗ 66ರಿಂದ 70 ಅಡಿ ಆಳ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶರಾವತಿ ಹಿನ್ನೀರಿನ ಆಳ ಅರಿಯುವಲ್ಲಿವಿಫಲವಾಗಿರುವುದೇ ಸೇತುವೆ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸೇತುವೆ ಕಾಮಗಾರಿ ಸುಲಭವಲ್ಲ ಎಂಬುದು ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗೆ ತಿಳಿದಿದೆ. ಉತ್ತಮ ಕಂಪನಿಗೆ ಕಾಮಗಾರಿ ನೀಡದಿರುವುದೂ ಕಾರಣ. ಈ ಬಗ್ಗೆ ‌‌ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ.ಹಸಿರುಮಕ್ಕಿ ಸೇತುವೆ ಬಗ್ಗೆ ಇಲ್ಲಿನ ಪುಡಿಗಾಸಿನ ರಾಜಕಾರಣಿಗಳು ಟೀಕೆ ಮಾಡುತ್ತಿದ್ದಾರೆ. ಅವರು ಎಷ್ಟೇ ಟೀಕೆ ಮಾಡಿದರೂ ಪ್ರಯೋಜನವಿಲ್ಲ. 60 ಅಡಿಗಿಂತ ಹೆಚ್ಚು ಆಳದಲ್ಲಿ ಕೆಲಸ ಮಾಡುವ ತಂತ್ರಜ್ಞಾನ ಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ವಿ. ಸುಬ್ರಹ್ಮಣ್ಯ ಅಶೋಕ ಕುಂಬಳೆ, ಕೊಳಕಿ ಲಕ್ಷ್ಮಿನಾರಯಣ್, ಪುರುಷೋತ್ತಮ ಶಾನುಭೋಗ್, ಜಿ.ಆರ್. ಸುಬ್ರಹ್ಮಣ್ಯ, ಸಿದ್ದಗೌಡ, ಅರುಣಕುಮಾರ್, ಚೇತನರಾಜ್, ವಿನಾಯಕರಾವ್, ಗಿರಿ ಮತ್ತು ಗುತ್ತಿಗೆ ಕಂಪನಿ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT