ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ನಲ್ಲಿ ಬಿಟ್ಟು ಹೋಗಿದ್ದ ₹30,000 ಇದ್ದ ಚೀಲ ವಾಪಸ್

ಭದ್ರಾವತಿ: ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ನಿರ್ವಾಹಕ
Last Updated 16 ಫೆಬ್ರುವರಿ 2023, 4:18 IST
ಅಕ್ಷರ ಗಾತ್ರ

ಭದ್ರಾವತಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ₹ 30,000 ಇದ್ದ ಚೀಲ ಬಿಟ್ಟು ಹೋಗಿದ್ದ ಮಹಿಳೆಗೆ ಪುನಃ ಹಣ ಹಿಂದಿರುಗಿಸಿ ಬಸ್‌ನ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.

ತಾಲ್ಲೂಕಿನ ಕಾಡಿನಂಚಿನಲ್ಲಿರುವ ಬಂಡಿಗುಡ್ಡ ಗ್ರಾಮದಿಂದ ಭದ್ರಾವತಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಯೆಶಾ ಎಂಬ ಮಹಿಳೆ ಪ್ರಯಾಣ ಮಾಡಿದ್ದರು. ಆದರೆ, ಬಸ್‌ ಇಳಿಯುವಾಗ ಹಣ ಇದ್ದ ಚೀಲವನ್ನು ಬಿಟ್ಟು ಹೋಗಿದ್ದರು. ಅದು ಬಸ್‌ನ ನಿರ್ವಾಹಕ ರವಿ ಅವರಿಗೆ ದೊರಕಿತ್ತು.

ಹಣ ಕಳೆದುಕೊಂಡ ಮಹಿಳೆಯನ್ನು ಪತ್ತೆ ಮಾಡಿ ನಗರದ ಮುಖ್ಯಬಸ್ ನಿಲ್ದಾಣದಲ್ಲಿ ಸರ್ ಎಂ ವಿಶ್ವೇಶ್ವರಾಯನವರ ಪ್ರತಿಮೆ ಬಳಿ ನಿರ್ವಾಹಕ ರವಿ, ಚಾಲಕ ರಾಜು ಮತ್ತು ಸಂಚಾರಿ ನಿಯಂತ್ರಕ ಪುರುಷೋತ್ತಮ್ ಹಣ ಹಿಂದಿರುಗಿಸಿದರು. ಪ್ರಾಮಾಣಿಕತೆ ಮೆರೆದಿರುವ ಸಿಬ್ಬಂದಿ ವರ್ಗವನ್ನು ಕೆಎಸ್‌ಆರ್‌ಟಿಸಿ ಭದ್ರಾವತಿ ಘಟಕ ಅಭಿನಂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT